ಮನ್ ಕಿ ಬಾತ್ ; ಕಾಶಿ ತಮಿಳು ಸಂಗಮಕ್ಕೆ ಪ್ರಧಾನಿ ಆಹ್ವಾನ
ನವದೆಹಲಿ, 30 ನವೆಂಬರ್ (ಹಿ.ಸ.) : ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಪ್ರಸಾರವಾದ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ ನ 128ನೇ ಸಂಚಿಕೆಯಲ್ಲಿ, ಡಿಸೆಂಬರ್ 2 ರಂದು ನಯಾ ಘಾಟ್‌ನಲ್ಲಿ ನಡೆಯಲಿರುವ ನಾಲ್ಕನೇ ಕಾಶಿ–ತಮಿಳು ಸಂಗಮದಲ್ಲಿ ಭಾಗವಹಿಸಲು ದೇಶದ ಜನತೆಗೆ ಆಹ್ವಾನ ನ
Pm


ನವದೆಹಲಿ, 30 ನವೆಂಬರ್ (ಹಿ.ಸ.) :

ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಪ್ರಸಾರವಾದ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ ನ 128ನೇ ಸಂಚಿಕೆಯಲ್ಲಿ, ಡಿಸೆಂಬರ್ 2 ರಂದು ನಯಾ ಘಾಟ್‌ನಲ್ಲಿ ನಡೆಯಲಿರುವ ನಾಲ್ಕನೇ ಕಾಶಿ–ತಮಿಳು ಸಂಗಮದಲ್ಲಿ ಭಾಗವಹಿಸಲು ದೇಶದ ಜನತೆಗೆ ಆಹ್ವಾನ ನೀಡಿದರು.

ತಮಿಳು ಭಾಷೆ–ಸಂಸ್ಕೃತಿಗೆ ಸಂಬಂಧಿಸಿದವರಿಗೆ ಈ ಸಂಗಮವು ಮಹತ್ತರ ವೇದಿಕೆಯಾಗಿದೆ ಎಂದೂ ಅವರು ಹೇಳಿದರು.

ಜಿ–20 ವೇಳೆ ದಕ್ಷಿಣ ಆಫ್ರಿಕಾ ರಾಷ್ಟ್ರಪತಿಗೆ ತಂಜಾವೂರು ಚೋಳ ಶೈಲಿಯಲ್ಲಿ ರೂಪಿಸಲಾದ ಕಾಶಿ ನಟರಾಜ ಪ್ರತಿಮೆವನ್ನು ಉಡುಗೊರೆಯಾಗಿ ನೀಡಿದ ಬಗ್ಗೆ ಮೋದಿ ಸ್ಮರಿಸಿದರು.

ನವೆಂಬರ್ ತಿಂಗಳು “ಪ್ರೇರಣೆಯ ತಿಂಗಳು” ಎಂದು ಬಣ್ಣಿಸಿದ ಪ್ರಧಾನಿ, ಸಂವಿಧಾನ ದಿನಾಚರಣೆ, ‘ವಂದೇ ಮಾತರಂ’ಗೆ 150 ವರ್ಷ, ರಾಮ ಮಂದಿರದಲ್ಲಿ ಧರ್ಮಧ್ವಜಾರೋಹಣ, ಕುರುಕ್ಷೇತ್ರದಲ್ಲಿ ಪಾಂಚಜನ್ಯ ಸ್ಮಾರಕ, ಹೈದರಾಬಾದ್‌ನಲ್ಲಿ ವಿಶ್ವದ ಅತಿದೊಡ್ಡ ಲೀಪ್ ಎಂಜಿನ್ MRO ಸೌಲಭ್ಯದ ಉದ್ಘಾಟನೆ, ನೌಕಾಪಡೆಗೆ INS ಮಾಹೆ ಸೇರ್ಪಡೆ, ಸ್ಕೈರೂಟ್‌ನ ‘ಇನ್ಫಿನಿಟಿ ಕ್ಯಾಂಪಸ್’ ಇವುಗಳೆಲ್ಲ ದೇಶದ ಸಾಮರ್ಥ್ಯವನ್ನು ಹೆಚ್ಚಿಸುತ್ತಿವೆ ಎಂದು ಹೇಳಿದರು.

ಕೃಷಿ ಕ್ಷೇತ್ರದಲ್ಲಿ ಭಾರತ ಸಾಧಿಸಿರುವ ಯಶಸ್ಸನ್ನೂ ಪ್ರಧಾನಿಯವರು ಉಲ್ಲೇಖಿಸಿ. ಈ ವರ್ಷ 35.7 ಕೋಟಿ ಟನ್ ಆಹಾರ ಧಾನ್ಯ ಉತ್ಪಾದನೆ ಮೂಲಕ ಭಾರತ ಹೊಸ ದಾಖಲೆ ನಿರ್ಮಿಸಿದೆ; ಇದು ದಶಕದ ಹಿಂದಿಗಿಂತ 10 ಕೋಟಿ ಟನ್ ಹೆಚ್ಚು ಎಂದರು. ನೈಸರ್ಗಿಕ ಕೃಷಿಯತ್ತ ದೇಶದ ಯುವಕರು ಮತ್ತು ವೃತ್ತಿಪರರು ತೋರಿಸುತ್ತಿರುವ ಆಸಕ್ತಿ ಹರ್ಷದಾಯಕವಾಗಿದೆ ವಿಶೇಷವಾಗಿ ದಕ್ಷಿಣ ಭಾರತದ ರಾಜ್ಯಗಳ ಪ್ರಯತ್ನಗಳು ಪರಿಣಾಮಕಾರಿ ಎಂದು ಪ್ರಧಾನಿ ಶ್ಲಾಘಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande