
ವಿಜಯಪುರ, 30 ನವೆಂಬರ್ (ಹಿ.ಸ.) :
ಆ್ಯಂಕರ್ : ಲಾರಿ ಚಾಲಕನ ನಿರ್ಲಕ್ಷ್ಯದಿಂದ ಲಾರಿ ಬ್ರಿಡ್ಜ್ ಮೇಲೆ ಅಪಘಾತ ಆಗಿರುವ ಘಟನೆ ವಿಜಯಪುರ ನಗರದ ಗೋಳಗುಮ್ಮಟ್ ಪೊಲೀಸ ಠಾಣೆಯ ಬಳಿ ನಡೆದಿದೆ.
ಲಾರಿ ಚಾಲಕನ ಅತೀ ವೇಗವೆ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಗೋಳಗುಮ್ಮಟ ಪೊಲೀಸ ಠಾಣೆಯ ಪಕ್ಕದಲ್ಲಿರುವ ಪ್ಲೈಯ್ ಓವರ್ ಮೇಲೆ ಅತೀ ವೇಗವಾಗಿ ಲಾರಿಯನ್ನು ಚಾಲಕ ಪಯಣ ಮಾಡಿದ್ದಾನೆ. ಇದರಿಂದ ಬ್ರಿಡ್ಜ್ ಮೇಲೆನಿಂದ ಬೀಳುವ ಸ್ಥಿತಿಯಲ್ಲಿತ್ತು. ಆದರೆ, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ವಿಜಯಪುರ ಸಂಚಾರಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande