
ಗಂಗಾವತಿ, 30 ನವೆಂಬರ್ (ಹಿ.ಸ.) :
ಆ್ಯಂಕರ್ : ನಗರದ ಪತ್ರಿಕಾ ಭವನದಲ್ಲಿ ವಿಶ್ವ ಹಿಂದು ಪರಿಷತ್, ಬಜರಂಗದಳ ವತಿಯಿಂದ ಹನುಮಮಾಲಾ ವಿಸರ್ಜನೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.
ವಿಶ್ವ ಬಜರಂಗ ದಳದ ಕ್ಷೇತ್ರ ಪ್ರಮುಖರಾದ ಸೂರ್ಯನಾರಾಯಣ ಮಾತನಾಡಿ, ಪ್ರತಿ ವರ್ಷದಂತೆ ಈ ಬಾರಿಯು ಕೂಡ ಅಂಜನಾದ್ರಿಯಲ್ಲಿ ಡಿಸೆಂಬರ 03 ರಂದು ಹನುಮಮಾಲಾ ವಿಸರ್ಜನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದ ನಾನಾ ಜಿಲ್ಲೆಗಳಿಂದ ಒಂದುವರೆ ಲಕ್ಷಕ್ಕೂ ಅಧಿಕ ಮಾಲಾಧಾರಿಗಳು ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಿ, ಮಾಲೆಯನ್ನು ವಿಸರ್ಜನೆ ಮಾಡಿ, ಹನುಮನ ದರ್ಶನ ಪಡೆದುಕೊಳ್ಳಲಿದ್ದಾರೆ.
ಹನುಮಮಾಲಾ ವಿಸರ್ಜನೆಯ ಅಂಗವಾಗಿ ಗಂಗಾವತಿ ನಗರದಲ್ಲಿ ಡಿಸೆಂಬರ 03 ರಂದು ಬೃಹತ್ ಸಂಕೀರ್ತನಾ ಶೋಭಾಯಾತ್ರೆಯನ್ನು ವಿಶ್ವ ಹಿಂದು ಪರಿಷತ್, ಬಜರಂಗದಳದ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 08 ಗಂಟೆಗೆ ನಗರದ ಎಪಿಎಂಸಿ ಆವರಣದ ಸಮುದಾಯ ಭವನದಿಂದ ಶೋಭಾಯಾತ್ರೆಯು ಆರಂಭವಾಗಲಿದ್ದು, ಪ್ರಮುಖ ಸರ್ಕಲ್‍ಗಳಲ್ಲಿ ಮೆರವಣಿಗೆಯನ್ನು ನಡೆಸಿ, ಡಾ.ಬಾಬು ಜಗಜೀವನರಾಮ ವೃತ್ತದಲ್ಲಿ ಧಾರ್ಮಿಕ ಸಭೆಯನ್ನು ನಡೆಸಲಾಗುವುದು ಎಂದರು.
ನಾನಾ ಭಾಗಗಳಿಂದ ಶೋಭಾಯಾತ್ರೆಯಲ್ಲಿ ಭಾಗವಹಿಸಲು ಆಗಮಿಸುವ ಮಾಲಾಧಾರಿಗಳಿಗೆ ರಾತ್ರಿಯ ಉಪಹಾರ ಹಾಗೂ ಮುಂಜಾನೆಯ ಉಪಹಾರದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಅಧಿಕ ಸಂಖ್ಯೆಯಲ್ಲಿ ಮಾಲಾಧಾರಿಗಳು ಸೇರಿದಂತೆ ಹಿಂದುಗಳು ಶೋಭಾಯಾತ್ರೆಯಲ್ಲಿ ಭಾಗವಹಿಸುವ ಮೂಲಕ ಶೋಭಾಯಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು. ಬಜರಂಗದಳದ ಪ್ರಾಂತ ಸಹ ಕಾರ್ಯದರ್ಶಿ ಪುಂಡಲಿಕ ದಳವಾಯಿ ಪ್ರಮುಖರಾದ ಬಸವರಾಜಗೌಡರು, ಮಲ್ಲಿಕಾರ್ಜುನ, ಉಗಮರಾಜ್ ಜೈನ್, ರಾಮಾಂಜನೇಯ, ವಿನಯ್ ಪಾಟೀಲ್ ಹಾಗೂ ಇತರರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್