ನಾಸಿಕ್‌ನಲ್ಲಿ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ
ನಾಸಿಕ್, 30 ನವೆಂಬರ್ (ಹಿ.ಸ.) : ಆ್ಯಂಕರ್ : ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ದೇವ್ಲಾ ತಹಸಿಲ್‌ನ ಫುಲೆ ಮಾಲಿವಾಡಾಯಲ್ಲಿ ಭಾನುವಾರ ಬೆಳಿಗ್ಗೆ ನಡೆದ ಹೃದಯವಿದ್ರಾವಕ ಘಟನೆಗೆ ನಾಲ್ವರು ಮಂದಿ ಒಂದೇ ಕುಟುಂಬದವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು, ಗೋವಿಂದ್ ಬಾಲು ಶೇವಾಲೆ (40), ಕೋಮಲ್ ಗೋವಿ
ನಾಸಿಕ್‌ನಲ್ಲಿ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ


ನಾಸಿಕ್, 30 ನವೆಂಬರ್ (ಹಿ.ಸ.) :

ಆ್ಯಂಕರ್ : ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ದೇವ್ಲಾ ತಹಸಿಲ್‌ನ ಫುಲೆ ಮಾಲಿವಾಡಾಯಲ್ಲಿ ಭಾನುವಾರ ಬೆಳಿಗ್ಗೆ ನಡೆದ ಹೃದಯವಿದ್ರಾವಕ ಘಟನೆಗೆ ನಾಲ್ವರು ಮಂದಿ ಒಂದೇ ಕುಟುಂಬದವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರನ್ನು, ಗೋವಿಂದ್ ಬಾಲು ಶೇವಾಲೆ (40), ಕೋಮಲ್ ಗೋವಿಂದ್ ಶೇವಾಲೆ (35), ಮಗಳು ಖುಷಿ (8), ಒಂದೂವರೆ ವರ್ಷದ ಮಗ ಶ್ಯಾಮ್ ಎಂದು ಗುರುತಿಸಲಾಗಿದೆ.

ಕುಟುಂಬದವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ, ಘಟನೆಯ ಮಾಹಿತಿ ದೊರಕುತ್ತಿದ್ದಂತೆಯೇ ದೇವ್ಲಾ ಠಾಣೆಯ ಪೊಲೀಸರು ವಿಧಿವಿಜ್ಞಾನ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande