ಪ್ರತಿಯೊಬ್ಬರೂ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು
ವಿಜಯಪುರ, 30 ನವೆಂಬರ್ (ಹಿ.ಸ.) : ಆ್ಯಂಕರ್ : ಕ್ರೀಡೆಗಳು ಮಾನಸಿಕ ಮತ್ತು ದೈಹಿಕ ಸಮತೋಲನವನ್ನು ಕಾಪಾಡಲು ಪ್ರೋತ್ಸಾಹ ನೀಡುತ್ತವೆ ಎಂದು ಅಂತಾರಾಷ್ಟ್ರೀಯ ವಿಕಲಚೇತನ ಕ್ರಿಕೆಟ್ ಪಟು ರಾಜೇಶ ಕೊಣ್ಣೂರ ಹೇಳಿದ್ದಾರೆ. ನಗರದ ಪ್ರತಿಷ್ಠಿತ ಬಿ. ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ.ಎಂ.ಪಾಟೀಲ ಪಬ್ಲಿಕ್ (ಸಿ.ಬಿ.ಎ
ಬಿಎಲ್‌ಡಿಇ


ವಿಜಯಪುರ, 30 ನವೆಂಬರ್ (ಹಿ.ಸ.) :

ಆ್ಯಂಕರ್ : ಕ್ರೀಡೆಗಳು ಮಾನಸಿಕ ಮತ್ತು ದೈಹಿಕ ಸಮತೋಲನವನ್ನು ಕಾಪಾಡಲು ಪ್ರೋತ್ಸಾಹ ನೀಡುತ್ತವೆ ಎಂದು ಅಂತಾರಾಷ್ಟ್ರೀಯ ವಿಕಲಚೇತನ ಕ್ರಿಕೆಟ್ ಪಟು ರಾಜೇಶ ಕೊಣ್ಣೂರ ಹೇಳಿದ್ದಾರೆ.

ನಗರದ ಪ್ರತಿಷ್ಠಿತ ಬಿ. ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ.ಎಂ.ಪಾಟೀಲ ಪಬ್ಲಿಕ್ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರೂ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ವಿದ್ಯಾರ್ಥಿಗಳು ಪಾಠದಷ್ಟೆ ಆಟಕ್ಕೂ ಮಹತ್ವ ಕೊಡಬೇಕು. ಪೋಷಕರೂ ತಮ್ಮ ಮಕ್ಕಳಿಗೆ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಅವರು ಹೇಳಿದರು.

ಬಿ.ಎಲ್.ಡಿ.ಇ ಸಂಸ್ಥೆಯ ಕ್ರೀಡಾ ನಿರ್ದೇಶಕ ಎಸ್. ಎಸ್. ಕೋರಿ ಮತ್ತು ಉಪನಿರ್ದೇಶ ಕೈಲಾಶ ಹಿರೇಮಠ ಕ್ರೀಡಾ ಜ್ಯೋತಿಗೆ ಚಾಲನೆ ನೀಡಿ, ಪಥ ಕವಾಯತ್ ಗೌರವ ವಂದನೆ ಸ್ವೀಕರಿಸಿದರು.

ಶಾಲಾ ಮುಖ್ಯ ಬಾಲಕ ಸಮರ್ಥ ಚಾಂದಕವಟೆ, ಬಾಲಕಿ ಅನುಪ್ರಿಯಾ ಕುಲಕರ್ಣಿ ಅವರು ಕಾವೇರಿ, ಗಂಗಾ, ಯಮುನಾ, ಕೃಷ್ಣಾ, ಸದನಗಳ ಮುಖ್ಯ ಬಾಲಕ ಬಾಲಕಿಯರಾದ ಕಿರಣ ಹೊನ್ನಳ್ಳಿ, ಅರ್ಪಿತಾ ಈಶ್ವರಪ್ಪಗೋಳ, ಝೈನ್ ಮುಧೋಳ, ವೈಷ್ಣವಿ ಪಾಟೀಲ, ಸಾಯಿವರೂಣ, ಶಿವಾನಿ ಕುಮಸಗಿ, ಅನೀಶ ಸಂಘವಿ, ನೇಹಾ ಪಾಟೀಲ ಮತ್ತು ಕ್ರೀಡಾ ಮುಖ್ಯ ಬಾಲಕ ಭುವನ ಹಚಡದ ಮುಖ್ಯ ಬಾಲಕಿ ಜೆನಿಲಿಯಾ ಸೋಝಾ ಶಾಲಾ ಸದನಗಳನ್ನು ಮುನ್ನಡೆಸಿದರು. ಪದಕವಾಯತನಲ್ಲಿ ಕೃಷ್ಣಾಸದನವು ಟ್ರೋಫಿಯನ್ನು ಜಯಿಸಿತು.

ನಾನಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ನಾನಾ ಈ ಸಂದರ್ಭದಲ್ಲಿ ಪಾಲಕರಿಗೆ ನಾನಾ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.

ಶಾಲೆ ಪ್ರಾಚಾರ್ಯ ಡಾ. ಶೈಜೂ ಕೆ. ನಾಯರ, ಹಿರಿಯ ಕಾರ್ಯ ಸಂಯೋಜಕಿ ದೀಪಾ ಜಂಬೂರೆ, ಬೋಧಕ ಮತ್ತು ಬೋಧಕರ ಹೊರತಾದ ಸಿಬ್ಬಂದಿ ಉಪಸ್ಥಿತರಿದ್ದರು.

ಶಿಕ್ಷಕಿಯರಾದ ಅರುಣಾ ಹೊನ್ನವಾಡ ಮತ್ತು ಪ್ರೀತಿ ಪಾಟೀಲ ನಿರೂಪಿಸಿದರು. ಶಿಕ್ಷಕಿ ಮೀರ್ ದಾದಾನೂರೇನ್ ಸ್ವಾಗತಿಸಿದರು. ವಿದ್ಯಾರ್ಥಿ ಭುವನ ಹಚಡದ ವಂದಿಸಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande