ಭೀಷ್ಮ ಕೆರೆಗೆ ಹಾರಿ‌ ಎಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ
ಗದಗ, 30 ನವೆಂಬರ್ (ಹಿ.ಸ.) ಆ್ಯಂಕರ್ : ಗದಗ ನಗರದ ಭೀಷ್ಮ ಕೆರೆಯಲ್ಲಿ ಎಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿನಿಯೋರ್ವಳು ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ಕಾರಣವಾಗಿದೆ. ಬಾಗಲಕೋಟೆ ಜಿಲ್ಲೆಯ ಶಿರೂರು ಮೂಲದ ಚಂದ್ರಿಕಾ ನಡುವಿನಮನಿ (21) ಮೃತ ವಿದ್ಯಾರ್ಥಿನಿ. ಉದಯೋನ್ಮುಖ ಭವಿಷ್ಯ
ಫೋಟೋ


ಗದಗ, 30 ನವೆಂಬರ್ (ಹಿ.ಸ.)

ಆ್ಯಂಕರ್ : ಗದಗ ನಗರದ ಭೀಷ್ಮ ಕೆರೆಯಲ್ಲಿ ಎಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿನಿಯೋರ್ವಳು ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ಕಾರಣವಾಗಿದೆ. ಬಾಗಲಕೋಟೆ ಜಿಲ್ಲೆಯ ಶಿರೂರು ಮೂಲದ ಚಂದ್ರಿಕಾ ನಡುವಿನಮನಿ (21) ಮೃತ ವಿದ್ಯಾರ್ಥಿನಿ. ಉದಯೋನ್ಮುಖ ಭವಿಷ್ಯ ಹೊಂದಿದ್ದ ಪ್ರತಿಭಾವಂತ ಯುವತಿಯ ಅಕಾಲಿಕ ಸಾವು ಎಲ್ಲರ ಮನಸು ತಲ್ಲಣಗೊಳಿಸಿದೆ.

ಚಂದ್ರಿಕಾ ಗದಗದ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ವ್ಯಾಸಂಗ ಮಾಡುತ್ತಿದ್ದರು. ಅಕಾಡೆಮಿಕ್‌ ಕ್ಷೇತ್ರದಲ್ಲಿ ಸದಾ ಮೆಚ್ಚುಗೆ ಪಡೆದಿದ್ದಳು. ಎಸ್ಎಸ್ಎಲ್ಸಿಯಲ್ಲಿ ಊರಿಗೇ ಪ್ರಥಮ ಬಂದಿದ್ದಳು. ಪಿಯುಸಿಯಲ್ಲೂ ಉತ್ತಮ ಫಲಿತಾಂಶ ತಂದು ಕುಟುಂಬಕ್ಕೆ ಹೆಮ್ಮೆ ತಂದಿದ್ದಳು. ಎಂಜಿನಿಯರಿಂಗ್ ಕೋರ್ಸ್ ಪೂರ್ಣಗೊಳ್ಳಲು ಕೇವಲ ಆರು ತಿಂಗಳು ಮಾತ್ರವಿದ್ದರೂ ಅಕಸ್ಮಿಕವಾಗಿ ಆತ್ಮಹತ್ಯೆಗೆ ಶರಣಾಗಿರುವುದು ಎಲ್ಲರನ್ನು ಆಘಾತಕ್ಕೊಳಪಡಿಸಿದೆ.

ವ್ಯಾಸಂಗಕ್ಕಾಗಿ ಗದಗ ನಗರದಲ್ಲಿ ರೂಂ ಬಾಡಿಗೆ ತೆಗೆದುಕೊಂಡು ಗೆಳತಿಯರೊಂದಿಗೆ ವಾಸವಿದ್ದ ಚಂದ್ರಿಕಾ, ನಿನ್ನೆ ರಾತ್ರಿ ಸುಮಾರು 1.30ರ ಸಮಯದಲ್ಲಿ ತನ್ನ ಕೊಠಡಿಯಿಂದ ಹೋಗಿ ನೇರವಾಗಿ ಕೆರೆ ಹಾರಿದ್ದಾಳೆ. ಬೆಳಿಗ್ಗೆ ಭೀಷ್ಮ ಕೆರೆಯಲ್ಲಿ ಅವಳ ಶವ ತೇಲುತ್ತಿರುವುದು ಸ್ಥಳೀಯರಿಗೆ ಕಾಣಿಸಿಕೊಂಡಿದ್ದು, ತಕ್ಷಣವೇ ಮಾಹಿತಿ ಪೊಲೀಸರಿಗೆ ನೀಡಲಾಗಿದೆ.

ಚಂದ್ರಿಕಾ ಆತ್ಮಹತ್ಯೆಗೆ ಮೊದಲು ತನ್ನ ಅಣ್ಣನೊಂದಿಗೆ ಫೋನ್‌ನಲ್ಲಿ ಮಾತನಾಡಿರುವುದಾಗಿ ಕುಟುಂಬ ಮೂಲಗಳಿಂದ ತಿಳಿದುಬಂದಿದೆ. “ತಂಗಿಗೆ ಬುದ್ಧಿವಾದ ಹೇಳಿದ್ದೇ ತಪ್ಪಾಯ್ತು. ಎಷ್ಟೋ ಕಷ್ಟಪಟ್ಟು ಬೆಳೆಸಿದ್ದೆವು… ಹೀಗಾಗೋದು ಕನಸಿಗೂ ಬಂದಿರಲಿಲ್ಲ” ಎಂದು ಮೃತೆಯ ಅಣ್ಣ ಕಣ್ಣೀರು ಹಾಕಿದ್ದಾನೆ.

ಕುಟುಂಬಸ್ಥರ ಪ್ರಕಾರ, ಚಂದ್ರಿಕಾ ಸಾಮಾನ್ಯವಾಗಿ ಓದಿನಲ್ಲಿ ಮಗುಳ್ನಗುತ್ತಿದ್ದ, ಮನೆಯಲ್ಲಿ ಎಲ್ಲರಿಗೂ ಪ್ರಿಯವಾಗಿದ್ದ ಮುದ್ದಿನ ತಂಗಿ. ಇಂಜಿನಿಯರಿಂಗ್ ಮುಗಿದ ಬಳಿಕ ಉದ್ಯೋಗಕ್ಕಾಗಿ ದೊಡ್ಡ ಕನಸು ಕಾಣುತ್ತಿದ್ದರು. ಕುಟುಂಬಸ್ಥರು ಚನ್ನಾಗಿ ಓದು ಅಂತಾ ಬುದ್ದಿವಾದ ಹೇಳಿದ್ದಾರೆ. ಅದಕ್ಕೆ ಮನನೊಂದ ಆತ್ಮಹತ್ಯೆ ಶರಣಾಗಿದ್ದಾಳೆ.

ಗದಗ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವವನ್ನು ಕೆರೆಗಳಿಂದ ಹೊರತೆಗೆದು ಜಿಲ್ಲಾ ಆಸ್ಪತ್ರೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ರೂಂ, ಮೊಬೈಲ್, ಸಿಸಿಟಿವಿ ಹಾಗೂ ಸ್ನೇಹಿತರ ಹೇಳಿಕೆಗಳನ್ನು ಆಧರಿಸಿ ಆತ್ಮಹತ್ಯೆಯ ಹಿಂದೆ ಏನಾದರೂ ವೈಯಕ್ತಿಕ, ವಿದ್ಯಾಭ್ಯಾಸದ ಒತ್ತಡ ಅಥವಾ ಬೇರೆ ಕಾರಣವಿದೆಯೇ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಾಲೇಜಿನಲ್ಲಿ ಚಂದ್ರಿಕಾ ನಿಶ್ಚಲ, ಮಿತಭಾಷಿ, ಓದಿನಲ್ಲಿ ಮಿಂಚುವ ವಿದ್ಯಾರ್ಥಿನಿ ಎಂಬ ಹೆಸರನ್ನು ಪಡೆದಿದ್ದಳು. ಇಂದು ಕಾಲೇಜಿನಲ್ಲಿ ಘಟನೆ ತಿಳಿಯುತ್ತಿದ್ದಂತೆಯೇ ಸ್ನೇಹಿತರು, ಉಪನ್ಯಾಸಕರು ಭಾವುಕರಾಗಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande