
ಹಾಸನ, 30 ನವೆಂಬರ್ (ಹಿ.ಸ.) :
ಆ್ಯಂಕರ್ : ಸಾರಿಗೆ ಇಲಾಖೆಯಲ್ಲಿ 1991-92 ರಿಂದ 2019-20ರ ಅವಧಿಯಲ್ಲಿ ವಾಹನಗಳ ಮೇಲೆ ದಾಖಲಾಗಿರುವ ಪ್ರಕರಣಗಳ ದಂಡ ಮೊತ್ತದ ಶೇ.50 ರಷ್ಟನ್ನು ಪಾವತಿಸಿ ಮುಕ್ತಾಯಗೊಳಿಸಿಕೊಳ್ಳಲು ದಿನಾಂಕ 21-11-2025 ರಿಂದ 12-12-2025ರವರೆಗೆ ಕಾಲಾವಕಾಶ ನೀಡಿ ಆದೇಶಿಸಿದೆ. ಆದುದರಿಂದ ಹಾಸನ ಜಿಲ್ಲೆಯ ವಿವಿಧ ವರ್ಗದ ವಾಹನಗಳ ಮಾಲೀಕರು 1991ರಿಂದ 2020ರವರೆಗೆ ಪ್ರಾದೇಶಿಕ ಸಾರಿಗೆ ಕಚೇರಿ, ಹಾಸನ, ವತಿಯಿಂದ ದಾಖಲಾಗಿರುವ ಪ್ರಕರಣಗಳನ್ನು ಶೇ.50 ರಷ್ಟು ಮಾತ್ರ ದಂಡ ಪಾವತಿಸಿ ಮುಕ್ತಾಯಗೊಳಿಸಬೇಕೆಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa