ಬಲ್ಡೋಟ ಎಂಎಸ್ಪಿಎಲ್ ಒಂದು ಚಿಮಣಿ ಧೂಳು ಸಹಿಸಲಾಗುತ್ತಿಲ್ಲ: ಮಲ್ಲನಗೌಡರ
ಕೊಪ್ಪಳ, 30 ನವೆಂಬರ್ (ಹಿ.ಸ.) : ಆ್ಯಂಕರ್ : ನಗರಸಭೆ ಆವರಣದಲ್ಲಿ ಜಿಲ್ಲಾ ಬಚಾವೋ ಆಂದೋಲನ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ವೇದಿಕೆಯಿಂದ ಬಲ್ಡೋಟ ಬಿಎಸ್ಪಿಎಲ್, ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ ಸುಮಿ, ಎಕ್ಸಿಂಡಿಯಾ ವಿಸ್ತರಣೆ ವಿರೋಧಿಸಿ, ಬಸಾಪುರ ಕೆರೆ ಸಾರ್ವಜನಿಕರಿಗೆ ಮು
ಬಲ್ಡೋಟ ಎಂಎಸ್ಪಿಎಲ್ ಒಂದು ಚಿಮಣಿ ದೂಳು ಸಹಿಸಲಾಗುತ್ತಿಲ್ಲ: ಮಲ್ಲನಗೌಡರ


ಬಲ್ಡೋಟ ಎಂಎಸ್ಪಿಎಲ್ ಒಂದು ಚಿಮಣಿ ದೂಳು ಸಹಿಸಲಾಗುತ್ತಿಲ್ಲ: ಮಲ್ಲನಗೌಡರ


ಕೊಪ್ಪಳ, 30 ನವೆಂಬರ್ (ಹಿ.ಸ.) :

ಆ್ಯಂಕರ್ : ನಗರಸಭೆ ಆವರಣದಲ್ಲಿ ಜಿಲ್ಲಾ ಬಚಾವೋ ಆಂದೋಲನ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ವೇದಿಕೆಯಿಂದ ಬಲ್ಡೋಟ ಬಿಎಸ್ಪಿಎಲ್, ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ ಸುಮಿ, ಎಕ್ಸಿಂಡಿಯಾ ವಿಸ್ತರಣೆ ವಿರೋಧಿಸಿ, ಬಸಾಪುರ ಕೆರೆ ಸಾರ್ವಜನಿಕರಿಗೆ ಮುಕ್ತಗೊಳಿಸಬೇಕೆಂದು ಮುಂದುವರಿದ ಧರಣಿಯನ್ನು ಗವಿಶ್ರೀನಗರದ ನಾಗರಿಕರು ಬೆಂಬಲಿಸಿದರು.

ಇದೇ ವಾರ್ಡಿನ ನಿವಾಸಿ ಹಿರಿಯ ಸಾಹಿತಿ, ನಿವೃತ್ತ ಪ್ರಾಂಶುಪಾಲರಾದ ಮಹಾಂತೇಶ ಮಲ್ಲನಗೌಡರ ಮಾತನಾಡುತ್ತಾ ಪ್ರಕೃತಿಯೇ ಶಿಕ್ಷಕ ನಾವು ಅದರಿಂದ ಪಾಠ ಕಲಿಯಬೇಕು..ಅಧಿಕಾರದಲ್ಲಿ ಇರುವವರು ಜನರಲ್ಲಿ ಧೈರ್ಯ ತುಂಬಬೇಕು. ಸರಕಾರ ಕಾರಖಾನೆ ನಿಲುಗಡೆಗೆ ಲಿಖಿತ ಆಜ್ಞೆ ಮಾಡಬೇಕು. ಅಹಿಂಸಾತ್ಮಕ ಹೋರಾಟ ನಡೆದಿದೆ.ಕೊಪ್ಪಳ ಸುಂದರವಾಗಿತ್ತು. ಕಾರಖಾನೆಗಳು ಕೊಪ್ಪಳವನ್ನು ಹಾಳು ಮಾಡಿವೆ ಎಂದರು.

ಗವಿಶ್ರೀನಗರ ಸ್ಥಿತಿವಂತರು ಇರುವ ಬಡಾವಣೆ. ಬಲ್ಡೋಟ ಎಂಎಸ್ಪಿಎಲ್ ಕಬ್ಬಿಣ ಗೋಲಿ ತಯಾರಿಸುವ ಘಟಕದ ಒಂದು ಚಿಮಿಣಿ ಹೊರಗಾಕುವ ಧೂಳು, ಹಾರುಬೂದಿ, ಕಪ್ಪು ಬೂದಿ ನಮ್ಮೆಲ್ಲಾ ಮನೆಗಳಲ್ಲಿ ಆವರಿಸಿದ್ದರಿಂದ ಉಸಿರಾಟದ ಸಮಸ್ಯೆ, ಪುಪ್ಪಸದ ಸಮಸ್ಯೆ ಸಾಮಾನ್ಯವಾಗಿಬಿಟ್ಟಿದೆ. ಈ ಒಂದು ಚಿಮಣಿಯೇ ನಮ್ಮ ಆರೋಗ್ಯ ಹಾಳು ಮಾಡುತ್ತಿದೆ. ಇನ್ನೂ .ಹತ್ತಾರು ಚಿಮಣಿಗಳು ಎದ್ದುನಿಂತರೆ ನಮ್ಮ ಭವಿಷ್ಯ ಏನಾಗಲಿದೆ ಎನ್ನುವ ಆಪಾಯ ಗೊತ್ತಾಗಿಯೇ ಗವಿಶ್ರೀಗಳು ಕೊಪ್ಪಳ ಕಾಪಾಡಲು ಬೀದಿಗೆ ಬಂದು ಹೋರಾಡಿದರು. ಆದರೂ ವಿಸ್ತರಣೆ ನಿಂತಿಲ್ಲ ಎನ್ನುವುದು ನಮ್ಮನ್ನು ಆತಂಕತರನ್ನಾಗಿ ಮಾಡಿದೆ. ವಿಸ್ತರಣೆ ಹಟಕ್ಕೆ ಬಿದ್ದರೆ ಕೊಪ್ಪಳ ಉಳಿಯಲು ಸಾಧ್ಯವಿಲ್ಲ. ಆದ್ದರಿಃದ ಈ ವಿಸ್ತರಣೆ ಬೇಡ ಎಂದರು.

ಇನ್ನೊಬ್ಬ ಕವಯತ್ರಿ ಪುಷ್ಪಲತಾ ಏಳುಭಾವಿ ಇವರು ಕಾರ್ಖಾನೆ ಪರಿಸರ ಹಾನಿ ಮಾಡುವ ಬಗ್ಗೆ ಜಾಗೃತಿ ಕವನ ವಾಚನ ಮಾಡಿದರು. ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಡಿ.ಎಚ್.ಪೂಜಾರ ಮಾತನಾಡಿ ದೇವನಹಳ್ಳಿ 13 ಹಳ್ಳಿಯ 177 ಎ. ಭೂಸ್ವಾಧೀನ ವಿರೋಧಿಸಿದ ರೈತರ, ಸಂಘಟನೆಗಳ, ಪರಿಸರವಾದಿಗಳು, ಚಿತ್ರನಟರು ಐಕ್ಯಗೊಂಡ ಸತತ ಮೂರು ವರ್ಷ ನಡೆದ ಅವಿರತ ಹೋರಾಟ ಸರಕಾರ ಅಧಿಸೂಚನೆ ವಾಪಸ್ ಪಡೆಯುವಂತೆ ಮಾಡಿ ಕೊನೆಗೂ ಗೆದ್ದಿತು. ಈ ಹೋರಾಟ ಅದಕ್ಕಿಂತಲೂ ಗಂಭೀರವಾಗಿದೆ. ಹೋರಾಟ ಗೆಲ್ಲುವ ಸಮಯ ಶೀಘ್ರವಾಗಿ ಬರಲು ಬಾಧಿತ ಹಳ್ಳಿ ಮತ್ತು ನಗರದ ಸಾವಿರ, ಸಾವಿರ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಮುಂದೆ ಬರುತ್ತಿದ್ದಾರೆ ಎಂದರು.

ಧರಣಿಯಲ್ಲಿ ಗವಿಶ್ರೀನಗರದ ನಾಗರಾಜ ಹಾಲಕೆರಿ, ರಾಜಶೇಖರ ಏಳುಭಾವಿ, ಬಿ.ವಿ.ಹೊಕ್ರಾಣಿ, ನೂರಂದಪ್ಪ, ಮೋಹನ ಎಸ್.ಅಣ್ಣೀಗೇರಿ, ಚಿತ್ರಸೇನ ಹೊಸಮನಿ, ರಾಜಕುಮಾರ ಮಂಗಳಾಪುರ, ಕೆ. ವಿನಾಯಕ, ನಾಗರಾಜ ಶೆಟ್ಟರ್, ಸಾಹಿತಿ ಡಿ.ಎಂ.ಬಡಿಗೇರ, ಎ.ಎಂ.ಮದರಿ, ಮಹಾದೆವಪ್ಪ ಎಸ್. ಮಾವಿನಮಡು, ಬಸವರಾಜ ಶೀಲವಂತರ, ಗಾಳೆಪ್ಪ ಮುಂಗೋಲಿ, ಎಸ್.ಎ.ಗಫಾರ್, ಚನ್ನವೀರಯ್ಯ ಹಿರೇಮಠ, ಬಸವರಾಜ ನರೇಗಲ್, ಹನುಮಂತ ಐಹೊಳೆ ಭಾಗವಸಿದರು. ಧರಣಿ ನೇತೃತ್ವವನ್ನು ಹೋರಾಟ ವೇದಿಕೆಯ ಪ್ರಧಾನ ಸಂಚಾಲಕರು ಅಲ್ಲಮಪ್ರಭು ಬೆಟ್ಟದೂರು, ಮಲ್ಲಿಕಾರ್ಜುನ ಗೋನಾಳ (ಕೆ.ಬಿ.ಗೋನಾಳ), ಮಂಜುನಾಥ ಜಿ.ಗೊಂಡಬಾಳ, ಮಹಾಂತೇಶ ಕೊತಬಾಳ, ಮಖಬೂಲ ರಾಯಚೂರು ವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande