ರಾಯಚೂರು : ಬೆಳೆ ಹಾನಿಯಾದ ರೈತರಿಗೆ ಪರಿಹಾರ ಪಾವತಿಗೆ ಕ್ರಮ
ರಾಯಚೂರು, 30 ನವೆಂಬರ್ (ಹಿ.ಸ.) : ಆ್ಯಂಕರ್ : ರಾಯಚೂರು ಜಿಲ್ಲೆಯ ಬೆಳೆ ಹಾನಿಯಾದ ಒಟ್ಟು 76,942 ರೈತ ಫಲಾನುಭವಿಗಳಿಗೆ ನೇರವಾಗಿ ಡಿಬಿಟಿ ಮುಖಾಂತರ ರೂ.34,36,13,754 ಗಳು ಜೊತೆಗೆ ಹೆಚ್ಚುವರಿಯಾಗಿ ರೂ. 33,01.97,441 ಗಳನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಡಿಬಿಟಿ ಮುಖಾಂತರ ಪಾವತಿಸುವ ಬಗ್ಗೆ
ರಾಯಚೂರು : ಬೆಳೆ ಹಾನಿಯಾದ ರೈತರಿಗೆ ಪರಿಹಾರ ಪಾವತಿಗೆ ಕ್ರಮ


ರಾಯಚೂರು, 30 ನವೆಂಬರ್ (ಹಿ.ಸ.) :

ಆ್ಯಂಕರ್ : ರಾಯಚೂರು ಜಿಲ್ಲೆಯ ಬೆಳೆ ಹಾನಿಯಾದ ಒಟ್ಟು 76,942 ರೈತ ಫಲಾನುಭವಿಗಳಿಗೆ ನೇರವಾಗಿ ಡಿಬಿಟಿ ಮುಖಾಂತರ ರೂ.34,36,13,754 ಗಳು ಜೊತೆಗೆ ಹೆಚ್ಚುವರಿಯಾಗಿ ರೂ. 33,01.97,441 ಗಳನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಡಿಬಿಟಿ ಮುಖಾಂತರ ಪಾವತಿಸುವ ಬಗ್ಗೆ ಜಿಲ್ಲಾಡಳಿತವು ಕ್ರಮ ವಹಿಸಿರುತ್ತದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ತಿಳಿಸಿದ್ದಾರೆ.

2025-26ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಪ್ರಕೃತಿ ವಿಕೋಪಗಳಿಂದ ಉಂಟಾದ ಬೆಳೆ ಹಾನಿ ಪ್ರಕರಣದ ಬ್ಯಾಚ-1ನೇಯ ಪರಿಹಾರವನ್ನು ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ರೈತರಿಗೆ ಪಾವತಿಸುವ ಬಗ್ಗೆ ರಾಜ್ಯ ಸರ್ಕಾರ ನಿರ್ದೇಶಿಸಿದಂತ ಜಿಲ್ಲೆಯ ಬೆಳೆ ಹಾನಿಯಾದ ಒಟ್ಟು 76,942 ರೈತ ಫಲಾನುಭವಿಗಳಿಗೆ ನೇರವಾಗಿ ಡಿಬಿಟಿ ಮುಖಾಂತರ ರೂ. 34,36,13,754 ಪಾವತಿಸುವ ಬಗ್ಗೆ ಜಿಲ್ಲಾಡಳಿತವು ಕ್ರಮ ವಹಿಸಿರುತ್ತದೆ.

ಮುಂದುವರೆದು, ದಿನಾಂಕ 25-11-2025ರ ಸರ್ಕಾರದ ಆದೇಶದಂತೆ ರಾಜ್ಯ ಸರ್ಕಾರದಿಂದ ಘೋಷಿಸಿರುವ ಹೆಚ್ಚುವರಿ ಪರಿಹಾರವನ್ನು ರೈತರಿಗೆ ಪಾವತಿಸುವ ಬಗ್ಗೆ ದಿನಾಂಕ 27-11-2025 ರಂದು ಸನ್ಮಾನ್ಯ ಮುಖ್ಯಮಂತ್ರಿಗಳು ವಿಡಿಯೋ ಸಂವಾದದ ಮುಖಾಂತರ ಚಾಲನೆ ನೀಡಿದ್ದು, ಅದರಂತೆ ಜಿಲ್ಲೆಯ ಒಟ್ಟು 76,941 ರೈತ ಫಲಾನುಭವಿಗಳಿಗೆ ರೂ. 33,01.97,441 ಗಳನ್ನು ಸಹ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಡಿಬಿಟಿ ಮುಖಾಂತರ ಪಾವತಿಸುವ ಬಗ್ಗೆ ಜಿಲ್ಲಾಡಳಿತವು ಕ್ರಮ ವಹಿಸಿದೆ.

ಹೆಚ್ಚುವರಿ ಇನ್ಪುಟ್ ಸಬ್ಸಿಡಿ ದರಗಳು ಮತ್ತು ವಿತರಣೆ: ಬೆಳೆ ಹಾನಿಗೊಳಗಾದ ರೈತರಿಗೆ ನೆರವು ನೀಡುವ ಉದ್ದೇಶದಿಂದ, ರಾಜ್ಯ ಸರ್ಕಾರವು ಇನ್ಪುಟ್ ಸಬ್ಸಿಡಿ ದರಗಳನ್ನು ಗರಿಷ್ಟ 2 ಹೆಕ್ಟರ್ ಸೀಮಿತಗೊಳಿಸಿ ಈ ಮುಂದಿನAತೆ ಹೆಚ್ಚಿಸಿದೆ. ಮಳೆಯಾಶ್ರಿತ ಬೆಳೆಗಳು: ಹೆಕ್ಟೇರ್ 1ಕ್ಕೆ ರೂ. 8,500 ರಿಂದ ರೂ. 17,000 ಹಾಗೂ ನೀರಾವರಿ ಬೆಳೆಗಳು: ಹೆಕ್ಟೇರ್ 1 ಕ್ಕೆ ರೂ. 17,000 ರಿಂದ ರೂ. 25,500 ಮತ್ತು ಬಹುವಾರ್ಷಿಕ ಬೆಳೆಗಳು: ಹೆಕ್ಟೇರ್ 1 ಕ್ಕೆ ರೂ.22,500 ರಿಂದ ರೂ. 31,000 ಎಂದು ಹೆಚ್ಚುವರಿ ಇನ್ಪುಟ್ ಸಬ್ಸಿಡಿ ದರಗಳು ಮತ್ತು ವಿತರಣೆಗೆ ಕ್ರಮವಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande