ಕಿಸಾನ್ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾಗಿ ಸೀತಿಹೊಸೂರು ಮುರಳಿಗೌಡ ನೇಮಕ
ಕಿಸಾನ್ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾಗಿ ಸೀತಿಹೊಸೂರು ಮುರಳಿಗೌಡ ನೇಮಕ,
ಕಿಸಾನ್ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾಗಿ         ಸೀತಿಹೊಸೂರು ಮುರಳಿಗೌಡ ನೇಮಕ,


ಕೋಲಾರ, 29 ನವೆಂಬರ್ (ಹಿ.ಸ.) :

ಆ್ಯಂಕರ್ : ಉಪ

ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರವರ ಆದೇಶದ ಮೇರೆಗೆ ಕೋಲಾರ ಜಿಲ್ಲಾ

ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾಗಿ ಈ ತಕ್ಷಣದಿಂದ ಜಾರಿಗೆ ಬರುವಂತೆ ತಾಲೂಕಿನ ಸೀತಿಹೊಸೂರು ಗ್ರಾಮದ

ಮುರಳಿಗೌಡ ಎನ್ ಅವರನ್ನು ಶನಿವಾರ ನೇಮಿಸಿ ಆದೇಶ ಹೊರಡಿಸಲಾಗಿದೆ.

ಕಾಂಗ್ರೆಸ್

ಪಕ್ಷದಲ್ಲಿ ಸಕ್ರಿಯರಾಗಿ ಪಕ್ಷದ ಸಂಘಟನೆ, ಹೋರಾಟದಲ್ಲಿ ತೊಡಗಿಸಿಕೊಂಡ ಹಿನ್ನೆಲೆಯಲ್ಲಿ ಹಾಗೂ ಕೋಲಾರ

ಜಿಲ್ಲೆಯ ಪಕ್ಷದ ಮುಖಂಡರುಗಳ ಶಿಫಾರಸ್ಸಿನೊಂದಿಗೆ ಈ ನೇಮಕಾತಿ ಮಾಡಲಾಗಿದ್ದು ತಮಗೆ ನೀಡಿರುವ ಜವಾಬ್ದಾರಿಯನ್ನು

ಯಶಸ್ವಿಯಾಗಿ ನಿರ್ವಹಿಸಬೇಕು ಹಾಗೂ ಕಿಸಾನ್ ಕಾಂಗ್ರೆಸ್ ಮೂಲಕ ರೈತರನ್ನು ಪಕ್ಷದಲ್ಲಿ ಸಂಘಟಿಸಲು ಶ್ರಮಿಸಬೇಕು

ಎಂದು ಈ ಮೂಲಕ ಸೂಚಿಸಲಾಗಿದೆ.

ಕೋಲಾರ ಜಿಲ್ಲೆಯ

ಮುಖಂಡರುಗಳ ಸಹಕಾರ ದೊಂದಿಗೆ ಬೂತ್ ಮಟ್ಟದಿಂದ ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡು ಪಕ್ಷದ

ಸಿದ್ಧಾಂತಗಳಿಗೆ ಬದ್ಧರಾಗಿ ಕಾರ್ಯನಿರ್ವಹಿಸುವಂತೆ ಡಿ.ಕೆ ಶಿವಕುಮಾರ್ ಆದೇಶದಂತೆ ಕಿಸಾನ್ ಕಾಂಗ್ರೆಸ್

ರಾಜ್ಯ ಅಧ್ಯಕ್ಷ ಸಚಿನ್ ಮೀಗಾ ಅನುಮೋದನೆ ನೀಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande