ಸಿದ್ದರಾಮಯ್ಯ ಮಾತು ತಪ್ಪಿದ ಮಗ ಆಗ್ತಾರಾ? : ಶ್ರೀರಾಮುಲು
ಗದಗ, 29 ನವೆಂಬರ್ (ಹಿ.ಸ.) : ಆ್ಯಂಕರ್ : ರಾಜ್ಯದಲ್ಲಿ ಸಿಎಂ–ಡಿಸಿಎಂ ಗೊಂದಲ ಮತ್ತಷ್ಟು ಗಂಭೀರವಾಗುತ್ತಿರುವ ನಡುವಲ್ಲೇ, ಗದಗದಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲು ಸರ್ಕಾರದ ಒಳಜಗಳ ಕುರಿತಾಗಿ ತೀವ್ರ ಕಿಡಿಕಾರಿದ್ದಾರೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನಡುವೆ ನಡೆಯುತ್ತಿರುವ ಬ್ರೇಕ್‌ಫಾಸ್ಟ್, ಲಂಚ್,
ಫೋಟೋ


ಗದಗ, 29 ನವೆಂಬರ್ (ಹಿ.ಸ.) :

ಆ್ಯಂಕರ್ : ರಾಜ್ಯದಲ್ಲಿ ಸಿಎಂ–ಡಿಸಿಎಂ ಗೊಂದಲ ಮತ್ತಷ್ಟು ಗಂಭೀರವಾಗುತ್ತಿರುವ ನಡುವಲ್ಲೇ, ಗದಗದಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲು ಸರ್ಕಾರದ ಒಳಜಗಳ ಕುರಿತಾಗಿ ತೀವ್ರ ಕಿಡಿಕಾರಿದ್ದಾರೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನಡುವೆ ನಡೆಯುತ್ತಿರುವ ಬ್ರೇಕ್‌ಫಾಸ್ಟ್, ಲಂಚ್, ಡಿನ್ನರ್ ಮೀಟಿಂಗ್‌ಗಳು ಜನರಿಗೆ ಗೊಂದಲ ಸೃಷ್ಟಿಸಿವೆ ಎಂದು ಟೀಕಿಸಿದರು.

ಶ್ರೀರಾಮುಲು ಮಾತನಾಡಿ “ಹೈಕಮಾಂಡ್ ಹೇಳಿದ ಹಾಗೆ ಇಬ್ಬರೂ ಕೇಳ್ತೀವಿ ಅಂತಾ ಹೇಳ್ತಾರೆ. ಆದರೆ ಸ್ಪಷ್ಟತೆಗೆ ಹೈಕಮಾಂಡ್‌ವೇ ಮುಂದೆ ಬರಬೇಕು. ಮಲ್ಲಿಕಾರ್ಜುನ್ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸುರ್ಜೇವಾಲಾ ಇವರಲ್ಲಿ ಯಾರಾದರೂ ಹೇಳಲಿ./ ಐದು ವರ್ಷ ಸಿದ್ದರಾಮಯ್ಯರೇ ಸಿಎಂ ಅಥವಾ ಸಿಎಂ ಆಗಿ ಬದಲಾವಣೆ ಮಾಡಿ ಹೊಸವರನ್ನ ತರ್ತೀವಿ ಎಂದು,” ಎಂದು ಪ್ರಶ್ನಿಸಿದರು.

“ಮುಂದಿನ ಮುಖ್ಯಮಂತ್ರಿ ಯಾರು? ದಲಿತನಾ, ಎಸ್ಟಿನಾ, ಮುಂದುವರಿದ ವರ್ಗದವರಾ ಸ್ಪಷ್ಟ ಘೋಷಣೆ ಮಾಡಿದ್ರೆ, ಕದನ ವಿರಾಮ ಆಗುತ್ತದೆ. ಇಲ್ಲದೇ ಇರೋದು ಕಾಂಗ್ರೆಸ್‌ನ ಒಳಜಗಳ,” ಎಂದು ಆಕ್ಷೇಪಿಸಿದರು.

ಸಿಎಂ–ಡಿಸಿಎಂ ಈ ಹಿಂದೆ ನಡೆದ ಮೈತ್ರಿ ಸಭೆಗಳ ಬಗ್ಗೆ ಟೀಕಿಸಿದ ಅವರು, “ಬ್ರೇಕ್‌ಫಾಸ್ಟ್ ಮಿಟಿಂಗ್, ಲಂಚ್ ಮಿಟಿಂಗ್, ಡಿನ್ನರ್ ಮಿಟಿಂಗ್ ಇದು ಎಲ್ಲವೂ ನಾಟಕ. ಅಧಿವೇಶನ ಮುಗಿದ ಬಳಿಕ ಮತ್ತೆ ಒಂದೇ ಗುಂಪಾಗಿ ನಾಟಕ ಮಾಡ್ತಾರೆ,” ಎಂದು ಕಿಡಿಕಾರಿದರು.

ಇದಕ್ಕೆ ಸೇರ್ಪಡೆಯಾಗಿ, ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಕ್ಕೆ ಇಬ್ಬರೂ ನಾಯಕರು ಬದ್ದರಾಗಿರುವುದಾಗಿ ಮೂಲಗಳು ತಿಳಿಸುತ್ತಿವೆ. ಒಪ್ಪಂದ ಪ್ರಕಾರ, ಎರಡುವರೆ ವರ್ಷಗಳ ಕಾಲ ಸಿದ್ದರಾಮಯ್ಯ ಸಿಎಂ, ಬಳಿಕ ಹುದ್ದೆ ಬದಲಾವಣೆ ಸಾಧ್ಯತೆಗಳ ಬಗ್ಗೆ ಪಕ್ಷದ ಒಳವಲಯದಲ್ಲಿ ಚರ್ಚೆ ಜೋರಾಗಿದೆ.

ಇನ್ನೆರಡು ದಿನಗಳಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿ ಮಾಡುವ ಸಾಧ್ಯತೆಗಳಿವೆ. ಇದರಿಂದಲೇ ರಾಜ್ಯದಲ್ಲಿ ಮುಖ್ಯಮಂತ್ರಿಯ ಸ್ಥಾನ ಬದಲಾವಣೆ ಅನಿವಾರ್ಯವೇ? ಎಂಬ ಪ್ರಶ್ನೆ ಮತ್ತಷ್ಟು ಗಟ್ಟಿ ಆಗಿದೆ.

“ಸಿದ್ದರಾಮಯ್ಯ ಸ್ಥಾನ ಬಿಟ್ಟು ಮಾತು ತಪ್ಪದ ಮಗ ಆಗ್ತಾರಾ? ಅಥವಾ ಸ್ಥಾನ ಹಿಡಿದು ಮಾತು ತಪ್ಪಿದ ಮಗ ಆಗ್ತಾರಾ ನೋಡಬೇಕು ಎಂದು ವಾಗ್ದಾಳಿ ನಡೆಸಿದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande