

ಬಳ್ಳಾರಿ, 29 ನವೆಂಬರ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ನಗರದ ವಾಲ್ಮೀಕಿ ವೃತ್ತದಲ್ಲಿ ಮಹರ್ಷಿ ಶ್ರೀ ವಾಲ್ಮೀಕಿ ಅವರ ನೂತನ ಪುತ್ಥಳಿಯ ಅನಾವರಣವನ್ನು ಶಾಸಕ ನಾರಾ ಭರತರೆಡ್ಡಿ ಅವರು ಜನವರಿ 3, 2026 ರಂದು ನಡೆಸಲು ಉದ್ದೇಶಿಸಿದ್ದು ಸ್ಥಳಕ್ಕೆ ಜಿಲ್ಲೆಯ ವಾಲ್ಮೀಕಿ ನಾಯಕರ ಸಮಾಜದ ಮುಖಂಡರು ಶನಿವಾರ ಬೆಳಿಗ್ಗೆ ಭೇಟಿ ನೀಡಿ, ಕಾಂಗಾರಿಯನ್ನು ವೀಕ್ಷಣೆ ಮಾಡಿದ್ದಾರೆ.
ವಾಲ್ಮೀಕಿ ಪುತ್ಥಳಿ ಇರುವ ಸ್ಥಳದಲ್ಲಿ ಪೂಜೆ ಸಲ್ಲಿಸಿದ ವಾಲ್ಮೀಕಿ ನಾಯಕರ ಸಮಾಜದ ಮುಖಂಡರು, ಸಭೆ ನಡೆಸಿ ಜನವರಿ 03, 2026ರ ಪುತ್ಥಳಿಯ ಅನಾವರಣ, ಪುತ್ಥಳಿಯ ಸ್ವಾಗತ, ವೇದಿಕೆ ಕಾರ್ಯಕ್ರಮ, ಪ್ರಚಾರ ಇನ್ನಿತರೆಗಳ ಕುರಿತು ಚರ್ಚೆ ನಡೆಸಿ, ಈ ಕಾರ್ಯಕ್ರಮದ ಯಶಸ್ಸಿಗಾಗಿ ಸಮಿತಿಗಳನ್ನು ರಚಿಸಿ, ನಗರದ 39 ವಾರ್ಡುಗಳು, ಆಸುಪಾಸಿನ ಗ್ರಾಮಗಳಿಗೆ ಭೇಟಿ ನೀಡಿ ಸಮಾಜದವನ್ನು ಆಹ್ವಾನಿಸುವ ಕುರಿತು ಚರ್ಚೆ ನಡೆಸಲಾಯಿತು.
ಸಂಗನಕಲ್ಲು ವಿಜಯ್, ಹೊನ್ನೂರಪ್ಪ, ಲೋಕೇಶ್, ಟಿ.ಹೆಚ್. ಚರಣರಾಜ್ ಅವರು ಸಭೆಯ ನೇತೃತ್ವವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್