
ಗದಗ, 29 ನವೆಂಬರ್ (ಹಿ.ಸ.) :
ಆ್ಯಂಕರ್ : ಗದಗ ನಗರದ ಗಂಜಿಬಸವೇಶ್ವರ ಸರ್ಕಲ್ ಬಳಿ ಮನೆ ಕಳ್ಳತನವಾಗಿದೆ. ಕಾರ್ತಿಕ್ ಶಿಲ್ಪಿ ಅವರ ಮನೆಯಲ್ಲಿ ನಡೆದಿರುವ ಈ ಕಳ್ಳತನಕ್ಕೆ ಖದೀಮರು ಸಿನಿಮೀಯ ಶೈಲಿಯಲ್ಲಿ ಕಳ್ಳತನ ಮಾಡಿದ್ದಾರೆ.
ಬೆಳಗಿನ ಜಾವ ಮೂರು ಗಂಟೆಯ ವೇಳೆಗೆ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಕಳ್ಳರು ಮುಖ್ಯ ಬಾಗಿಲಿನ ಭಾಗದಲ್ಲಿ ಎಂಟ್ರಿ ನೀಡಿ ನೇರವಾಗಿ ಸಿಸಿಟಿವಿಗೆ ಹೋಗಿ ಕ್ಯಾಮೆರಾವನ್ನು ಡ್ಯಾಮೇಜ್ ಮಾಡಿದ್ದಾರೆ. ಕೇವಲ ಕ್ಯಾಮೆರಾ ಮಾತ್ರವಲ್ಲ, ದೃಶ್ಯ ಸಂಗ್ರಹಿಸಿಟ್ಟಿದ್ದ ಮೆಮರಿ ಕಾರ್ಡ್‌ನನ್ನೂ ಕಳವು ಮಾಡಿಕೊಂಡು ನಾಪತ್ತೆಯಾಗಿದ್ದಾರೆ.
ಮನೆಯಲ್ಲಿ ಇರಿಸಿದ್ದ ಸುಮಾರು 25 ಗ್ರಾಂ ಚಿನ್ನಾಭರಣ, ನೆಕ್ಲೆಸ್, ಉಂಗುರ, ಓಲೆ ಜೊತೆಗೆ 40 ಗ್ರಾಂ ಬೆಳ್ಳಿ ಗಟ್ಟಿ ಹಾಗೂ 15 ಸಾವಿರ ರೂಪಾಯಿ ನಗದು ಸೇರಿ ಒಟ್ಟು ಸುಮಾರು ಮೂರುವರೆ ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಕಳ್ಳತನವಾಗಿವೆ.
ಘಟನೆ ತಿಳಿದು ಡಾಗ್ ಸ್ಕಾಡ್, ಫಿಂಗರ್‌ಪ್ರಿಂಟ್ ವಿಭಾಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪೊಲೀಸರು ಸುಳಿವು ಹುಡುಕಲು ಶ್ರಮಿಸುತ್ತಿದ್ದಾರೆ.
ಗದಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ಹುಡುಕಾಟ ಜೋರಾಗಿದೆ.
ಹಿಂದೂಸ್ತಾನ್ ಸಮಾಚಾರ್ / lalita MP