
ಡೆಹ್ರಾಡೂನ್, 29 ನವೆಂಬರ್ (ಹಿ.ಸ.) :
ಆ್ಯಂಕರ್ : ಡೆಹ್ರಾಡೂನ್ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅಧಿಕಾರಿಯಾಗಲು ತರಬೇತಿ ಪಡೆಯುತ್ತಿರುವ ಯುವಕರಿಗೆ ಸಂದೇಶ ನೀಡಿದರು. ನೀತಿ ರೂಪಿಸುವುದರಿಂದ ಹಿಡಿದು ಆಡಳಿತವನ್ನು ತಳ ಮಟ್ಟದಲ್ಲಿ ಜಾರಿಗೆ ತರುವವರೆಗೆ ನಿಮ್ಮ ಮೇಲೆ ರಾಷ್ಟ್ರದ ಭವಿಷ್ಯ ನಿರ್ಧರಿಸುವ ಮಹತ್ತರ ಜವಾಬ್ದಾರಿ ಇದೆ,” ಎಂದು ಹೇಳಿದರು.
2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ಗುರಿ ಸಾಕಾರಗೊಳ್ಳುವಾಗ, ಹೆಚ್ಚಿನ ಮಹಿಳೆಯರು ಕ್ಯಾಬಿನೆಟ್ ಕಾರ್ಯದರ್ಶಿ ಸೇರಿದಂತೆ ಉನ್ನತ ಹುದ್ದೆಗಳನ್ನು ತಲುಪುತ್ತಾರೆ ಎಂದು ರಾಜನಾಥ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು. ಅವರಿಗೆ ಸಾಧ್ಯವಾಗದ ಸ್ಥಾನವೇ ಇಲ್ಲ ಎಂದು ಅವರು ಮಹಿಳಾ ಶಕ್ತಿಯನ್ನು ಹೊಗಳಿದರು ಶ್ಲಾಘಿಸಿದರು.
ಅಖಿಲ ಭಾರತ ಸೇವೆಗಳಿಗೆ ಆಯ್ಕೆಯಾಗಲು ಮಾಡಿದ ಪರಿಶ್ರಮವನ್ನು ಅವರು ಶ್ಲಾಘಿಸಿ, “ಅಹಂಕಾರವಿದ್ದರೆ ಜನರಿಗೆ ಸೇವೆ ಸಲ್ಲಿಸಲು ಸಾಧ್ಯವಿಲ್ಲ” ಎಂದು ಎಚ್ಚರಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa