
ರಾಯ್‌ಪುರ, 29 ನವೆಂಬರ್ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಅಖಿಲ ಭಾರತ ಡಿಜಿಪಿ–ಐಜಿಪಿ ಸಮ್ಮೇಳನದ 2ನೇ ದಿನದ ಚರ್ಚೆಗಳು ಇಂದು ಮುಂದುವರಿದಿವೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ದೇಶದ ಭದ್ರತಾ ಸಂಸ್ಥೆಗಳ ಉನ್ನತ ಅಧಿಕಾರಿಗಳು ಭಾಗವಹಿಸಿದ್ದಾರೆ.
ಸಮ್ಮೇಳನದ ಮುಖ್ಯ ಚರ್ಚಾ ವಿಷಯಗಳು:
ರಾಷ್ಟ್ರೀಯ ಭದ್ರತೆ, ಉದಯೋನ್ಮುಖ ಸವಾಲುಗಳು, ಹಾಗು ಹಿಂದಿನ ಶಿಫಾರಸುಗಳ ಪರಿಶೀಲನೆ.
ಮಹಿಳಾ ಸುರಕ್ಷತೆಗೆ ತಂತ್ರಜ್ಞಾನ ಬಳಕೆ, ಸಾರ್ವಜನಿಕ ಪ್ರತಿಭಟನೆಗಳ ನಿರ್ವಹಣೆ, ಪರಾರಿಯಾದ ಭಾರತೀಯರನ್ನು ಮರಳಿಸುವ ಕುರಿತು ಮಾರ್ಗಸೂಚಿಗಳು.
ವಿಧಿವಿಜ್ಞಾನ (ಫಾರೆನ್ಸಿಕ್) ಬಳಕೆ ಹೆಚ್ಚಿಸುವುದು, ತನಿಖೆಗಳ ಗುಣಮಟ್ಟ ಸುಧಾರಣೆ.
ಛತ್ತೀಸ್‌ಗಢ ಡಿಜಿಪಿ ಅರುಣ್ ದೇವ್ ಗೌತಮ್ “ಬಸ್ತಾರ್ 2.0” ಕುರಿತು ಪ್ರಸ್ತುತಪಡಿಸಲಿದ್ದು, 2026ರೊಳಗೆ ನಕ್ಸಲಿಸಂ ಸಂಪೂರ್ಣ ನಿರ್ಮೂಲನೆಯ ನಂತರದ ಅಭಿವೃದ್ಧಿ ಯೋಜನೆಗಳತ್ತ ಗಮನ ಹರಿಸಲಿದ್ದಾರೆ.
ಇದೇ ವೇಳೆ ಐಬಿ ವಿಶೇಷ ನಿರ್ದೇಶಕರು “ವಿಷನ್ 2047” ಕುರಿತು ಚಿಂತನೆಗಳನ್ನು ಹಂಚಿಕೊಳ್ಳಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa