ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಬ್ಬು ಬೆಳೆ ಭಸ್ಮ
ವಿಜಯಪುರ, 29 ನವೆಂಬರ್ (ಹಿ.ಸ.) : ಆ್ಯಂಕರ್ : ಆಕಸ್ಮಿಕವಾಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ ಸಂಭವಿಸಿದ ಪರಿಣಾಮ ಕಬ್ಬು ಭಸ್ಮವಾಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದಲ್ಲಿ ನಡೆದಿದೆ. ರೈತ ಶ್ರೀಶೈಲ ಮಳಸಿದ್ದಪ್ಪ ವಾಡಿ ಸರ್ವೇ ನಂಬರ್ 336 ಪೈಕಿ ನಾಲ್ಕು ಎಕರೆ ಜಮೀನು ರೈತನ
ಕಬ್ಬು


ವಿಜಯಪುರ, 29 ನವೆಂಬರ್ (ಹಿ.ಸ.) :

ಆ್ಯಂಕರ್ : ಆಕಸ್ಮಿಕವಾಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ ಸಂಭವಿಸಿದ ಪರಿಣಾಮ ಕಬ್ಬು ಭಸ್ಮವಾಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದಲ್ಲಿ ನಡೆದಿದೆ. ರೈತ ಶ್ರೀಶೈಲ ಮಳಸಿದ್ದಪ್ಪ ವಾಡಿ ಸರ್ವೇ ನಂಬರ್ 336 ಪೈಕಿ ನಾಲ್ಕು ಎಕರೆ ಜಮೀನು ರೈತನಿಗೆ ಸೇರಿದ ಕಬ್ಬಿನ ತೋಟದಲ್ಲಿ ಈ ಅವಘಡ ಆಗಿದೆ.

ಸುಮಾರು ಆರು ಲಕ್ಷ ರೂ. ಮೌಲ್ಯದ ಕಬ್ಬು ಬೆಳೆ ಸಂಪೂರ್ಣ ಸುಟ್ಟು ಕರಕಲಾಗಿದೆ.‌ ಗ್ರಾಮದ ಶ್ರೀಶೈಲ ಮಳಸಿದ್ದಪ್ಪ ವಾಡಿ ಎಂಬುವರ ಜಮೀನಿನಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳು ಹರಿದು ಬಿದ್ದು ಬೆಂಕಿ ಹೊತ್ತಿಕೊಂಡ ಪರಿಣಾಮ ಕಬ್ಬಿನ ಹೊಲ ಸುಟ್ಟಿದೆ.

ಜಮೀನಿನಲ್ಲಿ ಬೆಳೆದ 6 ಲಕ್ಷ ರೂ. ಮೌಲ್ಯದ 200 ಟನ್ ನಷ್ಟು ಕಬ್ಬು ಸುಟ್ಟಿದೆ. ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿದ ರೈತನಿಗೆ ಹಾರಿಕೆ ಉತ್ತರ ನೀಡಿದ್ದಾರೆ ಎಂದು ವಾಡಿ ಆರೋಪಿಸಿದ್ದಾನೆ. ಇಂಡಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande