ತುಮರಿಕೊಪ್ಪದಲ್ಲಿ ಗ್ಯಾರಂಟಿ ಯೋಜನೆಗಳ ಜಾಗೃತಿ ಬೀದಿ ನಾಟಕ
ಕೊಪ್ಪಳ, 29 ನವೆಂಬರ್ (ಹಿ.ಸ.) : ಆ್ಯಂಕರ್ : ನಾಡಿನ ಬಡವರ, ಶೋಷಿತರ ನಾಡಿ ಮಿಡಿತ ಅರಿತ ಸರಕಾರವು ಬಡವರ ಬದುಕಿಗೆ ಆಶಾಕಿರಣವಾಗಿದೆ. ಚುನಾವಣೆಗೂ ಮುನ್ನ ನೀಡಿರುವ ಆಶ್ವಾಸನೆ ಪ್ರಕಾರ ಪಂಚ ಗ್ಯಾರಂಟಿ ಯೋಜನೆ ಜಾರಿಗೆ ತಂದಿದೆ. ವಿಶೇಷವಾಗಿ ಮಹಿಳೆಯರಿಗಾಗಿ ಹೆಚ್ಚಿನ ಆದ್ಯತೆ ನೀಡಿ, ಜನ
Street play to raise awareness about guarantee schemes in Tumarikoppa


Street play to raise awareness about guarantee schemes in Tumarikoppa


ಕೊಪ್ಪಳ, 29 ನವೆಂಬರ್ (ಹಿ.ಸ.) :

ಆ್ಯಂಕರ್ : ನಾಡಿನ ಬಡವರ, ಶೋಷಿತರ ನಾಡಿ ಮಿಡಿತ ಅರಿತ ಸರಕಾರವು ಬಡವರ ಬದುಕಿಗೆ ಆಶಾಕಿರಣವಾಗಿದೆ. ಚುನಾವಣೆಗೂ ಮುನ್ನ ನೀಡಿರುವ ಆಶ್ವಾಸನೆ ಪ್ರಕಾರ ಪಂಚ ಗ್ಯಾರಂಟಿ ಯೋಜನೆ ಜಾರಿಗೆ ತಂದಿದೆ. ವಿಶೇಷವಾಗಿ ಮಹಿಳೆಯರಿಗಾಗಿ ಹೆಚ್ಚಿನ ಆದ್ಯತೆ ನೀಡಿ, ಜನಪರ ಸರಕಾರ ಮತ್ತು ಸರ್ವ ಜನಾಂಗದ ಶಾಂತಿಯ ತೋಟವಾಗಿದೆ ಎಂಬ ಹೆಗ್ಗಳಿಕೆ ಪಡೆದಿದೆ ಎಂದು ಕಲಾವಿದರಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶರಣಪ್ಪ ವಡಿಗೇರಿ ಅವರು ಹೇಳಿದರು.

ಅವರು ಶನಿವಾರದಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯವರ ಸಹಯೋಗದಲ್ಲಿ ಕುಷ್ಟಗಿ ತಾಲೂಕಿನ ತುಮರಿಕೊಪ್ಪ ಗ್ರಾಮದಲ್ಲಿ ಹಮ್ಮಿಕೊಂಡಿರುವ ಬೀದಿ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಜನಜಾಗೃತಿ ಕಲಾರಂಗ ಸಂಸ್ಥೆ (ರಿ) ಕುಷ್ಟಗಿ ಕಲಾತಂಡದ ನೇತೃತ್ವವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರೇಖಾ ಹನಮಂತ ಲಂಡೂರಿ ಅವರು ತಮಟೆ ಬಾರಿಸುವ ಮೂಲಕ ಚಾಲನೆ ನೀಡಿದರು.

ಅತಿಥಿಗಳಾಗಿ ಗ್ರಾಮದ ಗಣ್ಯರಾದ ರಂಗಪ್ಪ ಯಮನಪ್ಪ ಗೋತಗಿ, ದ್ಯಾಮಣ್ಣ ಲಂಡೂರಿ, ಹನಮಂತ ಅಡವಿಭಾವಿ ಅವರು ಭಾಗವಹಿಸಿದ್ದರು. ನಂತರ ಕಲಾತಂಡದಿ0ದ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳ ಮಹತ್ವ, ಆರೋಗ್ಯ, ಶಿಕ್ಷಣ ಕುರಿತು ವಿವಿಧ ಸನ್ನಿವೇಶಗಳ ಮೂಲಕ ಬೀದಿ ನಾಟಕ ಪ್ರದರ್ಶನ ನೀಡಿ ಜನ-ಮನ ರಂಜಿಸಿದರು.

ಕಲಾತ0ಡದ ವೀರಯ್ಯ ಹಿರೇಮಠ ವಂದಿಸಿದರು. ಕಲಾತಂಡದಲ್ಲಿ ದಾವಲಸಾಬ ಅತ್ತಾರ, ಶರಣಯ್ಯ ಹಿರೇಮಠ, ಹೇಮಂತರಾಜ, ಭೀಮಪ್ಪ ಬನ್ನಿಗೋಳ, ರೇಣುಕಾ ಮಡಿವಾಳರ, ಮಂಜುಳಾ ಬೆಟಗೇರಿ ಕಲಾವಿದರು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande