
ನವದೆಹಲಿ, 29 ನವೆಂಬರ್ (ಹಿ.ಸ.) :
ಆ್ಯಂಕರ್ : ಪಾರ್ಸೆಲ್ ವ್ಯವಹಾರವನ್ನು ವಿಸ್ತರಿಸಲು ಮತ್ತು ಹೆಚ್ಚಿನ ಸಣ್ಣ–ಮಧ್ಯಮ ಸಾಗಣೆದಾರರನ್ನು ಆಕರ್ಷಿಸಲು ಭಾರತೀಯ ರೈಲ್ವೆ ಅಗ್ರಿಗೇಟರ್ ನೋಂದಣಿ ನಿಯಮಗಳನ್ನು ಸರಳಗೊಳಿಸಿದೆ.
ಇದುವರೆ ಇದ್ದ ಕನಿಷ್ಠ ವಾರ್ಷಿಕ ₹50 ಲಕ್ಷ ವಹಿವಾಟು ಷರತ್ತು ರದ್ದುಗೊಳಿಸಲಾಗಿದೆ, ನೋಂದಣಿ ಶುಲ್ಕ ₹20,000 ರಿಂದ ₹10,000ಕ್ಕೆ ಇಳಿಕೆ, PCET ಮುಕ್ತ ಟೆಂಡರ್‌ಗಳಲ್ಲಿ ಭಾಗವಹಿಸಲು ಹಿಂದಿನ ವರ್ಷದ ವಹಿವಾಟಿನ ಷರತ್ತು ತೆರವುಗೊಳಿಸಲಾಗಿದೆ.
ರೈಲ್ವೆಯ ಹೊಸ ಮಾರ್ಗಸೂಚಿಯ ಪ್ರಕಾರ, ಪಾರ್ಸೆಲ್ ಜಾಗವನ್ನು ಗುತ್ತಿಗೆ ಪಡೆಯುವವರು ಮತ್ತು ಅಗ್ರಿಗೇಟರ್‌ಗಳಾಗಿ ನೋಂದಾಯಿಸಲು ಬಯಸುವವರಿಗೆ ಹಣಕಾಸಿನ ಮಾನದಂಡಗಳಲ್ಲಿ ದೊಡ್ಡ ಮಟ್ಟದ ಸಡಿಲಿಕೆ ಮಾಡಲಾಗಿದೆ. ಇದರಿಂದ ಹೆಚ್ಚಿನ ಹೊಸ ಭಾಗವಹಿಸುವವರಿಗೆ ಪ್ರವೇಶದ ಬಾಗಿಲು ತೆರೆದಿರುವಂತಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa