

ರಾಯಚೂರು, 29 ನವೆಂಬರ್ (ಹಿ.ಸ.) :
ಆ್ಯಂಕರ್ : ಇಡೀ ಕನ್ನಡ ಸಾಹಿತ್ಯ ಸಂಸ್ಕøತಿ ಬುಗುರಿ ಮತ್ತು ಮೊಗಳ್ಳಿ ಗಣೇಶ್ ಅವರಂತ ಒಬ್ಬ ಅತ್ಯದ್ಭುತವಾದ ಕಥನಕಾರರನ್ನು ಮರೆಯುವುದಕ್ಕೆ ಸಾಧ್ಯವಿಲ್ಲ. ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸುತ್ತವೆ. ಹಿರಿಯ ಸಾಹಿತಿ, ಕಥೆಗಾರ, ವಿಮರ್ಶಕ ಮತ್ತು ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿದ್ದ ಗಣೇಶ್ ಅವರ ಕೃತಿಗಳನ್ನು ಓದಿರಿ ಎಂದು ಕುಪ್ಪಳಿಯ ಕುವೆಂಪು ಕನ್ನಡ ಅಧ್ಯಯನ ಕೇಂದ್ರದ ಹಿರಿಯ ಪ್ರಾಧ್ಯಾಪಕರು ಹಾಗೂ ನಿರ್ದೇಶಕರಾದ ಡಾ.ಬಿ.ಎಂ.ಪುಟ್ಟಯ್ಯ ಅವರು ವಿಶೇಷ ಉಪನ್ಯಾಸ ನೀಡಿದರು.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯ ಮತ್ತು ಬೆಂಗಳೂರಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಡಾ.ಮೊಗಳ್ಳಿ ಗಣೇಶ್ ಅವರ ಸಾಹಿತ್ಯ: ಸೃಷ್ಟಿ ಮತ್ತು ದೃಷ್ಟಿ ಚಕೋರ ಉಪನ್ಯಾಸ ಮಾಲಿಕೆಯನ್ನು ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಂದರ್ಭದಲ್ಲಿ ಡಾ.ಮೊಗಳ್ಳಿ ಗಣೇಶ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಮೊಗಳ್ಳಿ ಗಣೇಶ್ ಹಳ್ಳಿ ಜೀವನದ ಅನುಭವಗಳ ಆಧಾರಿತ ಕಥೆಗಳಿಗೆ ಪ್ರಸಿದ್ಧರಾಗಿದ್ದರು. ಅವರ ಪ್ರಮುಖ ಕಥಾ ಸಂಕಲನಗಳಲ್ಲಿ ಬುಗುರಿ, ನನ್ನಜ್ಜನಿಗೊಂದಾಸೆಯಿತ್ತು, ಒಂದು ಹಳೆಯ ಚಡ್ಡಿ, ತಕರಾರು, ಸೊಲ್ಲು, ಬೇರು, ಕಥನ ಮುಂತಾದವುಗಳ ಕೃತಿಗಳನ್ನು ರಚಿಸಿದ್ದಾರೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಾಲ್ಮೀಕಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಶಿವಾನಂದ ಕೆಳಗಿನಮನಿ ಅವರು ಮಾತನಾಡಿ, ಡಾ.ಮೊಗಳ್ಳಿ ಗಣೇಶ್ ಅವರ ವ್ಯಕ್ತಿತ್ವ ಮತ್ತು ಬರವಣಿಗೆಗಳು ವಿಭಿನ್ನ ಮತ್ತು ವಿಶಿಷ್ಟತೆಯಾಗಿವೆ. ಅವರು ಬರೆದಿರುವ ತಕರಾರು ಎಷ್ಟರ ಮಟ್ಟಿಗೆ ಭಯ ಹುಟ್ಟಿಸಿತು ಎಂದರೆ ಬಹುತೇಕ ಲೇಖಕರ ಬಗ್ಗೆಯೂ ಕೂಡ ಯಾವುದೇ ರೀತಿಯ ಮೂಲಾಜಿಯಾಗದೆ ನಿಷ್ಟೂರವಾದ ರೀತಿಯಲ್ಲಿ ವಿಮರ್ಶೆಯನ್ನು ಮಾಡುತ್ತಿದ್ದರು. ವಾಕ್‍ಚರಿ, ಮೊಣಚುತನ ಅವರ ಬರವಣಿಗೆಯಲ್ಲಿತ್ತು. ಅವರ ಯಾವುದೇ ಕೃತಿಗಳಲ್ಲಿ ವಿಶೇಷವಾದ ಹೊಸ ಆಲೋಚನೆ, ಅನುಭವವನ್ನು ಕಟ್ಟಿಕೊಡುವಂತಹ ಲೇಖನಗಳಾಗಿದ್ದವು. ಅವರಲ್ಲಿ ದಲಿತ ಪರವಾದ ಕಾಳಜಿ ಅಡಗಿತ್ತು. ಅನೇಕ ಲೇಖಕರನ್ನು ಹೊಸರೀತಿಯಾಗಿ ನೋಡಬಹುದು, ಓದಬಹುದು ಎಂದು ಗಣೇಶ್ ಅವರು ಬರವಣಿಗೆ ಮೂಲಕ ತೋರಿಸಿಕೊಟ್ಟರು. ನಮ್ಮ ಪರಂಪರೆ, ಇತಿಹಾಸ, ಸಂಸ್ಕøತಿ ಇವೆಲ್ಲದರ ಪೂರಕವಾಗಿ ಆಲೋಚಿಸುವಂತ ಕ್ರಮವನ್ನು ಭಿನ್ನವಾದ ರೀತಿಯಲ್ಲಿ ಗ್ರಹಿಸಿಕೊಳ್ಳಲು ಸಾಧ್ಯ ಎಂದು ಅವರ ಬರವಣಿಗೆ ಮೂಲಕ ತಿಳಿದುಬರುತ್ತದೆ. ಮೊಗಳ್ಳಿ ಗಣೇಶ್ ಬಹುದೊಡ್ಡ ಲೇಖಕ, ಓದುಗ, ಸಂಶೋಧಕರಾಗಿದ್ದರು ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ.ಸಿ.ಬಿ.ಚಿಲ್ಕರಾಗಿ ಪ್ರಾಸ್ತಾವಿಕ ಮಾತನಾಡಿ, ಪ್ರತಿ ಗ್ರಾಮೀಣ ಪರಿಸರಕ್ಕೂ, ನಗರಕ್ಕೂ, ಜಿಲ್ಲಾ ಕೇಂದ್ರಕ್ಕೂ ಕೂಡ ನಾವು ಸಾಹಿತ್ಯವನ್ನು ತಲುಪಿಸಬೇಕು ಎಂಬ ಆಲೋಚನೆಯೊಂದಿಗೆ, ಮುಂಬರುವ ದಿನಗಳಲ್ಲಿ ವಿಶ್ವವಿದ್ಯಾನಿಲಯದಲ್ಲಿ ಕನ್ನಡಕ್ಕೆ ಸಂಬಂಧ ಪಟ್ಟ ಸಾಹಿತ್ಯ, ಹಳೆಗನ್ನಡ ಹೊಸಗನ್ನಡ, ಕಾವ್ಯ ಸಂಸ್ಕøತಿ, ಕಥನಾ ಪರಂಪರೆಯಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದಾಗಿ ತಿಳಿಸಿದರು.
ಅಕ್ಟೋಬರ್ 5 ರಂದು ನಮ್ಮನ್ನಗಲಿದ ನಾಡಿನ ಖ್ಯಾತ ಚಿಂತಕರು, ಲೇಖಕರಾದ ಮೊಗಳ್ಳಿ ಗಣೇಶ್ ಅವರ ಕೃತಿಗಳು ಬಗ್ಗೆ ಚರ್ಚಿಸಬೇಕಾಗಿದೆ. ಸಾಹಿತ್ಯದ ಸೃಜನಕ್ರಿಯೆಯಲ್ಲಿ ನಾವೆಲ್ಲರೂ ಮುಂದುವರೆಯಬೇಕಾಗಿದೆ.
ನಮ್ಮ ಸಾಹಿತ್ಯ ಆಕಾಡೆಮಿಯು ಈ ವಿಚಾರ ವೇದಿಕೆಯ ಮುಖಾಂತರ ಚಕೋರ ಉಪನ್ಯಾಸ ಮಾಲಿಕೆ ಹಮ್ಮಿಕೊಂಡಿರುವುದಾಗಿ ಹೇಳಿದರು.
ಉಪ ಕುಲಸಚಿವರಾದ ಡಾ.ಕೆ.ವೆಂಕಟೇಶ್ ಅವರು ಮಾತನಾಡಿ, ಮೊಗಳ್ಳಿ ಗಣೇಶ್ ತಮ್ಮ ಬರಹದ ಮೂಲಕ ಆಲೋಚನೆಯ ಮೂಲಕ ಜಗತ್ತು ಇಂದು ಅವರನ್ನು ಗುರಿತಿಸುತ್ತದೆ. ಅವರಲ್ಲಿರುವ ಕೋಪ, ಒರಟುತನ ಸಿಡುಕುತನ ತುಂಬಾ ಕ್ಷಣೀಕವಾಗಿದ್ದು ಅವರಲ್ಲಿ ಕಂಡಂತಹ ತಾಯಿತನವನ್ನು ಬರಹದಲ್ಲಿ ಪ್ರಕಟವಾಗಿವೆ. ಬಹಳ ದೊಡ್ಡ ಶಕ್ತಿಯುಳ್ಳ ಕಥೆಗಾರ, ವಿಮರ್ಶಕ, ಚಿಂತಕ ಎಂದು ಅವರು ತಿಳಿಸಿದರು.
ಇಂತಹ ಉಪಯುಕ್ತ ಕಾರ್ಯಕ್ರಮ ನಮ್ಮ ವಿಶ್ವವಿದ್ಯಾನಿಲಯದಲ್ಲಿ ಏರ್ಪಡಿಸಿದ್ದಕ್ಕಾಗಿ ಈ ಸಂದರ್ಭದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಎಲ್.ಎನ್.ಮುಕುಂದರಾಜ್ ಅವರಿಗೆ ಧನ್ನವಾದಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಕುಲಸಚಿವರು (ಮೌಲ್ಯಮಾಪನ) ಡಾ.ಜ್ಯೋತಿ ಧಮ್ಮ ಪ್ರಕಾಶ್, ವಿವಿಧ ನಿಕಾಯಗಳ ಡೀನರಾದ ಪ್ರೊ.ಪಾರ್ವತಿ.ಸಿ.ಎಸ್., ಪ್ರೊ.ಪಿ.ಭಾಸ್ಕರ್,. ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ.ಜಿ.ಎಸ್.ಬಿರಾದಾರ ವೇದಿಕೆ ಮೇಲೆ ಉಪಸ್ಥಿತರಿದ್ದರು ವಿವಿಧ ವಿಭಾಗಗಳ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಗಣಿತ ವಿಭಾಗದ ವಿದ್ಯಾರ್ಥಿನಿ ರೂಪಶ್ರೀ ಪ್ರಾರ್ಥಿಸಿದರು, ಅತಿಥಿ ಉಪನ್ಯಾಸಕರಾದ ಮಹಿಳಾ ಅಧ್ಯಯನ ವಿಭಾಗದ ಡಾ.ಭೀಮೇಶ ಮಾಚನೂರು ಸ್ವಾಗತಿಸಿ ನಿರೂಪಿಸಿದರು, ಅರ್ಥಶಾಸ್ತ್ರ ವಿಭಾಗದ ದುರ್ಗಪ್ಪ ಗಣೇಕಲ್ ವಿಶೇಷ ಉಪನ್ಯಾಸಕರನ್ನು ಪರಿಚಯಿಸಿದರು, ಪತ್ರಿಕೋದ್ಯಮ ವಿಭಾಗದ ಡಾ.ಗೀತಮ್ಮ ವಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್