
ಕೊಪ್ಪಳ, 29 ನವೆಂಬರ್ (ಹಿ.ಸ.) :
ಆ್ಯಂಕರ್ : ಜವಾಹರ ನವೋದಯ ವಿದ್ಯಾಲಯದಲ್ಲಿ 2026-27ನೇ ಸಾಲಿನಲ್ಲಿ 6ನೇ ತರಗತಿಯ ಪ್ರವೇಶಕ್ಕಾಗಿ ಡಿಸೆಂಬರ್ 13 ರಂದು ಪ್ರವೇಶ ಪರೀಕ್ಷೆಯನ್ನು ಹಮ್ಮಿಕೊಳ್ಳಲಾಗಿದೆ.
ಈ ಪ್ರವೇಶ ಪರೀಕ್ಷೆಯು ಕೊಪ್ಪಳ ಜಿಲ್ಲೆಯ ಗಂಗಾವತಿ, ಕೊಪ್ಪಳ, ಕುಷ್ಠಗಿ ಮತ್ತು ಯಲಬುರ್ಗಾ ತಾಲೂಕಿನಲ್ಲಿ ಈಗಾಗಲೇ ನಿಗದಿಪಡಿಸಿದ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು, ಹಾಲ್‌ಟಿಕೆಟ್ ಡೌನ್‌ಲೋಡ್ ಮಾಡಿಕೊಂಡು ಪರೀಕ್ಷೆಗೆ ಹಾಜರಾಗಬೇಕು.
ಪ್ರವೇಶ ಪತ್ರದಲ್ಲಿ ಕೊಪ್ಪಳ ಪರೀಕ್ಷಾ ಕೇಂದ್ರ ಸಂಖ್ಯೆ 5 ರಲ್ಲಿ ಪರೀಕ್ಷೆ ಬರೆಯುವ ಪ್ರವೇಶ ಪತ್ರ ಸಂಖ್ಯೆ 1620283 ರಿಂದ 1620570 ವರೆಗಿನ ವಿದ್ಯಾರ್ಥಿಗಳು ಕೊಪ್ಪಳ ಭಾಗ್ಯನಗರದ ಸರ್ಕಾರಿ ಪಿ.ಯು ಕಾಲೇಜ್ (ಹೈಸ್ಕೂಲ್ ಸೆಕ್ಷನ್) ಕೇಂದ್ರದಲ್ಲಿ ಪರೀಕ್ಷೆ ಬರೆಯಬೇಕು. ಈ ವಿಷಯದ ಕುರಿತು ಸಮಸ್ಯೆ ಇದ್ದಲ್ಲಿ ಕುಕನೂರು ಜವಾಹರ ನವೋದಯ ವಿದ್ಯಾಲಯದ ದೂರವಾಣಿ ಸಂಖ್ಯೆ 9945899867 ಮತ್ತು 9986841245 ಗೆ ಕರೆ ಮಾಡಿ ಖಾತರಿಪಡಿಸಿಕೊಳ್ಳಬಹುದು ಎಂದು ಕುಕನೂರು ಜವಾಹರ ನವೋದಯ ವಿದ್ಯಾಲಯ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್