
ವಿಜಯಪುರ, 29 ನವೆಂಬರ್ (ಹಿ.ಸ.) :
ಆ್ಯಂಕರ್ : ಯಾವ ದೇಶ ತನ್ನ ಇತಿಹಾಸವನ್ನು ಮರೆಯುತ್ತದೆಯೋ ಅದಕ್ಕೆ ಭವಿಷ್ಯವಿಲ್ಲ. ಇಡೀ ಜಗತ್ತಿಗೆ ಶಿಕ್ಷಣ ಕೊಟ್ಟ ದೇಶ ನಮ್ಮ ಭಾರತ. ನಮ್ಮತನವನ್ನು ಉಳಿಸಿಕೊಂಡು ಶಿಕ್ಷಣ ಕೊಟ್ಟಿದೆ ಎಂದು ಶ್ರೀ ಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷರಾದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದ ಶ್ರೀ ಸಿದ್ಧೇಶ್ವರ ಸಂಸ್ಥೆಯ ಸಂಗನಬಸವ ಶಿಶುನಿಕೇತನ ಸಿ.ಬಿ.ಎಸ್.ಇ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ಶಿಕ್ಷಣವು ವೈಜ್ಞಾನಿಕ ತಳಹದಿಯ ಮೇಲಿದೆ. ಅದನ್ನು ನಾಶಪಡಿಸುವ ಕೆಲಸ ಬ್ರಿಟಿಷರಿಂದ ನಡೆದಿತ್ತಾದರೂ ಸಾಧ್ಯವಾಗಲಿಲ್ಲ. ಇದೀಗ ಹೊಸ ಶಿಕ್ಷಣ ಪದ್ಧತಿ ನಮ್ಮತನದ ಶಿಕ್ಷಣ ಕಲ್ಪಿಸಲಿದೆ ಎಂದರು.
ವಿಜಯಪುರ ಜಿಲ್ಲೆಯ ಅತ್ಯಂತ ಹಳೆಯದಾದ ಶ್ರೀ ಸಿದ್ದೇಶ್ವರ ಸಂಸ್ಥೆಯಡಿ ಗುಣಮಟ್ಟದ ಶಿಕ್ಷಣ ಒದಗಿಸುತ್ತಿರುವ ಸಂಗನಬಸವ ಶಿಶುನಿಕೇತನ ಶಾಲೆಯು ಉತ್ತರ ಕರ್ನಟಕದಲ್ಲಿ ಅತೀ ಹೆಚ್ಚು ಮಕ್ಕಳನ್ನು ಹೊಂದಿರುವ ಶಾಲೆಯಾಗಿದೆ. ಈ ಜಿಲ್ಲೆಯಲ್ಲಿ ಶಿಕ್ಷಣ ಕ್ರಾಂತಿ ಮಾಡಿದವರು ಡಾ.ಫ.ಗು.ಹಳಕಟ್ಟಿ ಹಾಗೂ ಸಂಗನಬಸವ ಸ್ವಾಮೀಜಿಗಳನ್ನು ಎಲ್ಲರೂ ಮರೆತಿದ್ದರು. ನೆನಪಿಸಿ, ಗೌರವಿಸಿದ್ದೆ ಶ್ರೀ ಸಿದ್ದೇಶ್ವರ ಸಂಸ್ಥೆ ಎನ್ನುವುದನ್ನು ಹೆಮ್ಮೆಯಿಂದ ಹೇಳುತ್ತೇನೆ ಎಂದರು.
ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕೆಂಬುದನ್ನು ಯೋಚಿಸುವ ಮೂಲ ಉದ್ದೇಶವೇ ಸಿದ್ದೇಶ್ವರ ಸಂಸ್ಥೆ. ನಮ್ಮದು ವಾಣಿಜ್ಯಕರಣ ಗೋಶಾಲೆ ಅಲ್ಲ. ಕಟಕರ ಮನೆಗೆ ಹೋಗುವ, ಸಾಕಲು ಸಾಧ್ಯವಾಗದವರು ತಂದು ಬಿಡುವ ಆಕಳುಗಳನ್ನು ಸಾಕಲಾಗುತ್ತಿದೆ. ಪ್ರಸ್ತುತ ಸುಮಾರು 1100 ಆಕಳುಗಳಿವೆ. ಶಾಲಾ ಪೀಜ್, ದಾನಿಗಳು ನೀಡುವ ಪ್ರತಿಯೊಂದು ರೂಪಾಯಿಯೂ ಸಮಾಜ ಕಾರ್ಯಕ್ಕೆ ವಿನಿಯೋಗಿಸುತ್ತೇವೆ. ನಮ್ಮ ಸಂಸ್ಥೆಯ ಶಾಲೆಯಲ್ಲಿ ಶಿಕ್ಷಣ ಪಡೆಯುವ ಮಕ್ಕಳು ಪಾವತಿಸುವ ಪ್ರವೇಶ ಮೊತ್ತದಲ್ಲಿ ಗೋ ಶಾಲೆ ನಿರ್ವಹಣೆಗೆ ಬಳಸಿಕೊಳ್ಳುತ್ತೇವೆ. ಹೀಗಾಗಿ ವಿದ್ಯಾರ್ಥಿಗಳು, ಅವರ ಪಾಲಕರಿಗೂ ಕೂಡ ಗೋ ಸೇವಾ ಕಾರ್ಯದ ಪುಣ್ಯ ಪ್ರಾಪ್ತಿ ಆಗುತ್ತದೆ ಎಂದು ತಿಳಿಸಿದರು.
ಶ್ರೀ ಸಿದ್ದೇಶ್ವರ ಸಂಸ್ಥೆಯು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಗಳ ಜೊತೆಗೆ ಗುಣಮಟ್ಟಣ ಶಿಕ್ಷಣ, ಆರೋಗ್ಯ ಸೇವೆಯಂತಹ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದೆ. ಇದೀಗ ಅನ್ನದಾಸೋಹ ಸಹ ಆರಂಭಿಸಿದ್ದು, ಪ್ರತಿ ದಿನ ಸುಮಾರು 500 ಜನ ಅನ್ನಪ್ರಸಾದ ಸೇವಿಸುತ್ತಾರೆ. ಸಂಸ್ಥೆಯು ಪಶು ವೈದ್ಯಕೀಯ ಕಾಲೇಜು, ಮೆಡಿಕಲ್ ಕಾಲೇಜು ಆರಂಭಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತಿಯಲ್ಲಿದೆ. ನಾನು ಅಧ್ಯಕ್ಷ ಆಗುವಾಗ ರೂ.1.5 ಕೋಟಿ ಆಸ್ತಿಯಿತ್ತು. ಈಗ ಅದು ರೂ.೪೦೦ ಕೋಟಿ ಆಸ್ತಿಯಾಗಿ ಬೆಳೆಸಿದ್ದೇವೆ. ಇದೆಲ್ಲ ಸಾಧ್ಯವಾಗಲು ಪ್ರಾಮಾಣಿಕ ಆಡಳಿತ ಮಂಡಳಿಯ ಸಹಕಾರ ಮತ್ತು ಪರಿಶ್ರಮವೇ ಕಾರಣ ಎಂದರು.
ಇದೇ ವೇಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ನೃಪತುಂಗ ವಿವಿಯ ಉಪಕುಲಪತಿ ಪ್ರೊ.ಶ್ರೀನಿವಾಸ ಬಳ್ಳಿ ಮಾತನಾಡಿದರು. ಸಿದ್ದೇಶ್ವರ ಸಂಸ್ಥೆಯ ಉಪಾಧ್ಯಕ್ಷ ಸಂಗನಬಸಪ್ಪ ಸಜ್ಜನ, ಚೇರಮನ್ ಬಸಯ್ಯ ಹಿರೇಮಠ, ಗೌರವ ಕಾರ್ಯದರ್ಶಿ ಸದಾನಂದ ದೇಸಾಯಿ, ಬಸವರಾಜ ಸುಗೂರ, ಜಂಟಿ ಕಾರ್ಯದರ್ಶಿ ಮಲ್ಲಿಕಾರ್ಜುನ ಸಜ್ಜನ, ಕೋಶಾಧ್ಯಕ್ಷ ಶಿವಾನಂದ ನೀಲಾ, ನಿದೇಶಕರಾದ ನಿಂಗೊಂಡಪ್ಪ ಗೋಲಾಯಿ, ಮಡಿವಾಳಪ್ಪ ಕರಡಿ, ವಿಜಯಕುಮಾರ ಡೋಣಿ, ಬಸವರಾಜ ಗಣಿ, ಸಂಗನಗೌಡ ನಾಡಗೌಡ, ಸುಧೀರ ಚಿಂಚಲಿ, ಸದಾಶಿವ ಗುಡ್ಡೋಡಗಿ, ನಾಗಪ್ಪ ಗುಗ್ಗರಿ, ಸಾಯಿಬಣ್ಣ ಭೋವಿ, ರಮೇಶ ಹಳ್ಳದ, ಮಲ್ಲಿಕಾರ್ಜುನ ಹಕ್ಕಾಪಕ್ಕಿ ಮತ್ತಿತರರು ಉಉಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande