
ಕೋಲಾರ, 29 ನವೆಂಬರ್ (ಹಿ.ಸ.) :
ಆ್ಯಂಕರ್ : ಕೋಲಾರ ಅಮಾನಿಕೆರೆಯ ಗಾಂಧಿನಗರ ಬಳಿಯ ಕೆರೆ ಕೋಡಿ ಹತ್ತಿರ ಶೇಕರಣೆಯಾಗಿರುವ ಮತ್ತು ಕೋಡಿ ಮುಖಾಂತರ ಹರಿಯುತ್ತಿರುವ ಕಲುಷಿತ ಯು.ಜಿ.ಡಿ., ಕೊಳಚೆ ಚರಂಡಿ ನೀರಿನಿಂದ ಬರುತ್ತಿರುವ ದುರ್ವಾಸನೆ ಹಾಗೂ ಸೊಳ್ಳೆಗಳ ಕಾಟದಿಂದ ಗಾಂಧಿನಗರ ನಿವಾಸಿಗಳು ಅನುಭವಿಸುತ್ತಿರುವ ತೊಂದರೆಯನ್ನು ನಿವಾರಿಸುವಂತೆ ಅಪರ ಜಿಲ್ಲಾಧಿಕಾರಿಗಳಿಗೆ ಗಾಂಧಿನಗರದ ನಿವಾಸಿಗಳ ನಿಯೋಗದ ನೇತೃತ್ವ ವಹಿಸಿದ್ದ ಹೆಚ್.ಬಿ.ಗೋಪಾಲ್ ರವರು ಮನವಿ ಪತ್ರವನ್ನು ನೀಡಿ ಒತ್ತಾಯಿಸಿದರು.
ಹೆಚ್.ಬಿ.ಗೋಪಾಲ್ ಮಾತನಾಡಿ ಕೋಲಾರ ಅಮಾನಿಕೆರೆಯಲ್ಲಿ ನಿರ್ಮಿಸಲಾದ ಎರಡು ಮಿನಿ ಟ್ಯಾಂಕುಗಳ ಸಂದರ್ಭದಲ್ಲಿ ನಡೆಸಲಾಗಿರುವ ಅವೈಜ್ಞಾನಿಕ ಕಾಮಗಾರಿಯ ಕಾರಣದಿಂದ ಕೋಲಾರ ಅಮಾನಿಕೆರೆಗೆ ನಗರದ ವಿವಿಧ ಕಡೆಗಳಿಂದ ಕೆರೆ ಸೇರುತ್ತಿರುವ ಚರಂಡಿ ನೀರು ಹಾಗೂ ಯು.ಜಿ.ಡಿ.ನೀರು ನೇರವಾಗಿ ಕೆರೆಕೋಡಿ ಹತ್ತಿರ ಶೇಕರಣೆಗೊಳ್ಳುತ್ತಿದೆ. ಕಾಮಗಾರಿ ಸಂದರ್ಭದಲ್ಲಿ ಕೆರೆ ಕೋಡಿಯನ್ನು ಹೊಡೆದು ಹಾಕಿರುವ ಕಾರಣದಿಂದ ಈ ನೀರು ಕೋಡಿ ಕಾಲುವೆಯಲ್ಲಿ ನಿರಂತರವಾಗಿ ಹರಿಯುತ್ತಿದೆ. ಇದಕ್ಕೆ ಹೊಂದಿಕೊ0ಡ0ತೆ ಹತ್ತು ಸಾವಿರ ಜನಸಂಖ್ಯೆಯ ಗಾಂಧಿನಗರ, ಸರ್ಕಾರಿ ಪ್ರೌಢ ಶಾಲೆ ಮತ್ತು ಶ್ರೀ ಸಿದ್ಧಾರ್ಥ ಪ್ರೌಢ ಶಾಲೆಗಳು ಇರುತ್ತವೆ. ಈ ನೀರಿನಿಂದ ಬರುತ್ತಿರುವ ದುರ್ವಾಸನೆಯಿಂದ ಇಲ್ಲಿನ ಜನರು ಹಾಗೂ ವಿದ್ಯಾರ್ಥಿಗಳು ಪ್ರತಿದಿನ ಇಂತಹ ಕೆಟ್ಟ ವಾಸನೆಯನ್ನು ಸೇವಿಸಿ ತೊಂದರೆ ಅನುಭವಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರೋಗ ರುಜಿನಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿದ್ದಾರೆ.
ತಕ್ಷಣ ಅಮಾನಿಕೆರೆ ಕರೆಕೋಡಿಯನ್ನು ದುರಸ್ತಿಗೊಳಿಸಿ ಸರಿಪಡಿಸುವಂತೆ, ಕೆರೆಕೋಡಿಯ ಹತ್ತಿರ ಶೇಕರಣೆಯಾಗುತ್ತಿರುವ ಕಲುಷಿತ ನೀರು ನಿಲ್ಲದಂತೆ ಮಾಡಬೇಕು. ಕೆರೆಗೆ ನಗರದ ವಿವಿಧ ಕಡೆಗಳಿಂದ ಹರಿಯುತ್ತಿರುವ ಚರಂಡಿ, ಯು.ಜಿ.ಡಿ. ನೀರನ್ನು ತಡೆದು ನಿರ್ಭಂದಿಸುವAತೆ ಒತ್ತಾಯಿಸಿದ್ದಾರೆ.
ಅದೇ ರೀತಿ ಮನವಿ ಪತ್ರಗಳನ್ನು ಕೋಲಾರದ ಮಾಲಿನ್ಯ ನಿಯಂತ್ರಣ ಮಂಡಳಿ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಕೋಲಾರ ನಗರಸಭೆ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ನೀಡಿ ಕ್ರಮಕ್ಕೆ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಗಾಂಧಿನಗರದ ನಿವಾಸಿಗಳಾದ ಸಮಾಜ ಸೇವಕ ಎನ್.ಸುಮನ್, ಹೆಚ್.ಕಿಟ್ಟಣ್ಣ, ಆರ್. ಶ್ರೀನಿವಾಸ್, ಸಾಮಾಜಿಕ ಕಾರ್ಯಕರ್ತರ ಲಕ್ಷಿö್ಮನಾರಾಯಣ್, ಬಿಜೆಪಿ ಮಂಜು, ಗೌಡರ ವೆಂಕಟರಾಮೇಗೌಡ, ಬಾಲಾಜಿ ಹನುಮಪ್ಪ ಹಾಗೂ ಇತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್