
ಬೆಂಗಳೂರು, 29 ನವೆಂಬರ್ (ಹಿ.ಸ.) :
ಆ್ಯಂಕರ್ : ನೆರೆ, ಬರ, ಬೆಲೆ ಕುಸಿತದಿಂದ ರೈತರು ಸಂಕಷ್ಟ ಎದುರಿಸುತ್ತಿದ್ದರೂ ಎಚ್ಚೆತ್ತುಕೊಳ್ಳದ ಕಾಂಗ್ರೆಸ್ ಸರ್ಕಾರ ಈಗ ನೀರನ್ನೂ ಕೊಡದೆ ರೈತವಿರೋಧಿ ನೀತಿ ಅನುಸರಿಸುತ್ತಿದೆ ಎಂದು ರಾಜ್ಯ ಬಿಜೆಪಿ ಘಟಕ ಆರೋಪಿಸಿದೆ.
ತುಂಗಭದ್ರಾ ಜಲಾಶಯ ಭಾಗದ ಕೃಷಿಕರಿಗೆ ಎರಡನೇ ಬೆಳೆಗೆ ನೀರು ಸಿಗದೆ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಟಿ.ಬಿ ಡ್ಯಾಂ ಕ್ರಸ್ಟ್ ಗೇಟ್ ಗಳನ್ನು ಸಮಯೋಚಿತವಾಗಿ ದುರಸ್ತಿ ಮಾಡದೆ ಅನ್ನದಾತರಿಗೆ ದ್ರೋಹ ಬಗೆಯುತ್ತಿದೆ.
ರೈತರನ್ನು ನಿಮ್ಮ ರಾಜಕೀಯ ಕಿತ್ತಾಟಕ್ಕೆ ಬಲಿ ಕೊಡದೆ ಮುಂಬರುವ ಬೆಳೆಗಳಿಗೆ ನೀರು ಸಿಗುವಂತೆ ಮಾಡಿ. ಇಲ್ಲವಾದರೆ, ಕೆಲವೇ ದಿನಗಳಲ್ಲಿ ರೈತರೇ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಬಿಜೆಪಿ ಎಚ್ಚರಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa