ಬುದ್ಧ ಬಸವ ಅಂಬೇಡ್ಕರ್ ರಾಷ್ಟ್ರೀಯ ವಿಚಾರ ಸಂಕಿರಣ
ಬೆಂಗಳೂರು, 29 ನವೆಂಬರ್ (ಹಿ.ಸ.) : ಆ್ಯಂಕರ್: ಮಾನವತಾವಾದಿ ಬುದ್ಧ. ಈತ ಉತ್ತರ ಭಾರತದಲ್ಲಿ ಜನಿಸಿ ಭಾರತ, ಏಷ್ಯಾ, ಯುರೋಪ್ ಹಾಗೂ ಅನೇಕ ದೇಶಗಳಲ್ಲಿ ತನ್ನ ಧರ್ಮ ಬೆಳೆಯಲು ಕಾರಣವಾದರೆ, ದಕ್ಷಿಣ ಭಾರತದಲ್ಲಿ ಶ್ರೀ ಬಸವೇಶ್ವರು ಮುಂದುವರೆದು, ಜ್ಞಾನ, ಕಾಯಕ, ಅನ್ನದಾಸೋಹ, ಸಾಹಿ
Buddha Basava Ambedkar National Symposium


ಬೆಂಗಳೂರು, 29 ನವೆಂಬರ್ (ಹಿ.ಸ.) :

ಆ್ಯಂಕರ್: ಮಾನವತಾವಾದಿ ಬುದ್ಧ. ಈತ ಉತ್ತರ ಭಾರತದಲ್ಲಿ ಜನಿಸಿ ಭಾರತ, ಏಷ್ಯಾ, ಯುರೋಪ್ ಹಾಗೂ ಅನೇಕ ದೇಶಗಳಲ್ಲಿ ತನ್ನ ಧರ್ಮ ಬೆಳೆಯಲು ಕಾರಣವಾದರೆ, ದಕ್ಷಿಣ ಭಾರತದಲ್ಲಿ ಶ್ರೀ ಬಸವೇಶ್ವರು ಮುಂದುವರೆದು, ಜ್ಞಾನ, ಕಾಯಕ, ಅನ್ನದಾಸೋಹ, ಸಾಹಿತ್ಯದ ಮೂಲಕ ಸಮಾನತೆಯನ್ನು ಮುಂದುವರೆಸಿದ ಇನ್ನೊಬ್ಬ ಸಂತ. ದೇಶದ ಅಸಮಾನತೆ, ಅಸ್ಪ್ರಶ್ಯತೆ ಹಾಗೂ ದೌರ್ಜನ್ಯಗಳ ನಡುವೆ ಜನಿಸಿ, ಭಾರತದ ಜನಮಾನಸದ ದಿಕ್ಕನ್ನೆ ಬದಲಿಸಿ, ದೇಶದ ಸಂವಿಧಾನದ ಮೂಲಕ, ಕಾನೂನು ಹಾಗೂ ಮೂಲಭೂತ ಹಕ್ಕನ್ನೊದಗಿಸಿದವರು ಡಾ. ಬಿ.ಆರ್. ಅಂಬೇಡ್ಕರ್. ಬುದ್ಧ, ಬಸವ, ಅಂಬೇಡ್ಕರ್ ತ್ರಿಮೂರ್ತಿಗಳ ಮೂಲ ಉದ್ದೇಶ, ಮನುಷ್ಯತ್ವ ಅಥವಾ ಮಾನವತಾವಾದ. ಜನ ಜೀವಗಳ ಮೌಡ್ಯ ಹೋಗಲಾಡಿಸಿ, ಜ್ಞಾನದ ಸಂಪತ್ತನ್ನು ಬಗೆದು, ಸೋಸಿದವರೇ ಅಂಬೇಡ್ಕರ್. ವಿಶ್ವಮಟ್ಟದ ಜ್ಞಾನವನ್ನು ಅರೆದು ಕುಡಿದು, ಭಾರತಕ್ಕೆ ನೀಡಿದವರು.

ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮೂರು ಜನರ ಕೊಡುಗೆ, ಹೋರಾಟಗಳನ್ನು ಇಂದಿನ ತಲೆಮಾರಿಗೆ ತಿಳಿಸುವ ದೃಷ್ಟಿಯಲ್ಲಿ, ಬುದ್ಧ, ಬಸವ, ಅಂಬೇಡ್ಕರ್ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ.

ಬುದ್ಧನ ಕುರಿತು - ಡಾ. ಅಶೋಕ ನರೋಡೆ, ಸಾಹಿತಿಗಳು, ಭಾಷಾ ಚಿಂತಕರು ಬಾಗಲಕೋಟೆ ಜಿಲ್ಲೆ. ಬಸವಣ್ಣನ ಕುರಿತು - ಡಾ. ಚಿಕ್ಕಹೆಜ್ಜಾಜಿ ಮಹದೇವ, ಶಿಕ್ಷಣ ತಜ್ಞರು, ಚಿತ್ರನಟರು ಬೆಂಗಳೂರು. ಅಂಬೇಡ್ಕರ್ ಕುರಿತು ವೈ.ಬಿ.ಎಚ್. ಜಯದೇವ, ಸಾಹಿತಿಗಳು, ಕನ್ನಡಪರ ಚಿಂತಕರು ಬೆಂಗಳೂರು. ಈ ಮೂರು ಜನ ವಿಷಯ ಮಂಡಿಸಿ, ಮಾತನಾಡಲಿದ್ದಾರೆ. ಎಂದಿನಂತೆ ಸಮಾರಂಭದಲ್ಲಿ ಹಲವಾರು ಗಣ್ಯರು ಕೂಡಾ ಈ ವಿಷಯ ಕುರಿತು ತಮ್ಮ ಜ್ಞಾನದ ಅರಿವನ್ನು ಹಂಚಿಕೊಳ್ಳಲಿದ್ದಾರೆ.

ದಿನಾಂಕ 11-01-2026 ಭಾನುವಾರ ಬೆಂಗಳೂರಿನ ನಯನ ರಂಗಮಂದಿರದಲ್ಲಿ ನಡೆವ 74ನೇ ಸಾಂಸ್ಕøತಿಕ ಪ್ರತಿಭೋತ್ಸವ ನಡೆಯಲಿದ್ದು, ಈ ಉತ್ಸವಕ್ಕೆ ಚಿಂತಕ, ಕವಿ, ವಿವೇಕಚೇತನ ಪತ್ರಿಕೆಯ ಪ್ರಧಾನ ಸಂಪಾದಕ ಡಾ. ಎಂ. ಲಕ್ಷ್ಮೀನಾರಾಯಣರವರನ್ನು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ವಿಚಾರ ಸಂಕಿರಣದಲ್ಲಿ ಹಿರಿಯ ಸ್ವಾಮಿಗಳು, ಸಾಹಿತಿಗಳು, ಚಿಂತಕರು, ಮಾಜಿ ಮಂತ್ರಿಗಳು ಹಾಗೂ ಚಲನಚಿತ್ರ ಕಲಾವಿದರು ಈ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಸಾಕ್ಷಿಕರಿಸಲಿದ್ದಾರೆ.

ವಿಚಾರ ಸಂಕಿರಣ ಸಂಜೆ 6 ಗಂಟೆಯಿಂದ 8 ಗಂಟೆಯವರೆಗೆ ನಡೆಯಲಿದ್ದು, 8 ರಿಂದ 9 ರವರೆಗೆ ಅಕಾಡೆಮಿಯ 33ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಅಂತರರಾಷ್ಟ್ರೀಯ, ರಾಷ್ಟ್ರ ಮತ್ತು ರಾಜ್ಯಮಟ್ಟದ ಪ್ರಶಸ್ತಿಯನ್ನು ಗಣ್ಯ ಸಾಧಕರಿಗೆ ನೀಡಿ ಗೌರವಿಸಲಾಗುತ್ತಿದೆ.

ಬೆಳಿಗ್ಗೆ 10 ಗಂಟೆಗೆ ಸಾಂಕೇತಿಕ ಉದ್ಘಾಟನೆಯಲ್ಲಿ ಕೊಪ್ಪಳದ ವ್ಯಂಗ್ಯಚಿತ್ರಕಾರ ಬದರಿನಾರಾಯಣ ಪುರೋಹಿತ್ 500 ಕ್ಕೂ ಚಿತ್ರಕಲಾ ಪ್ರದರ್ಶನ ಮಾಡಲಿದ್ದಾರೆ. ಜೊತೆಗೆ 10 ವರ್ಷದೊಳಗಿನ ಮಕ್ಕಳಿಂದ ವೇಷ ಭೂಷಣ ಹಾಗೂ ನೃತ್ಯ, ಗಾಯನ ಕಾರ್ಯಕ್ರಮಗಳು ನಡೆಯಲಿವೆ.

ಕವನ ವಾಚನ ಮಾಲಿಕೆಯಲ್ಲಿ ಕವಿಗಳ ಕಣ್ಣಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಕವಿಗೋಷ್ಠಿ ಜರುಗಲಿದೆ. (ಇವುಗಳ ಹೊರತಾಗಿ ಜ್ಞಾನಪೀಠ ಸರಣಿಯ 8 ಜನ ಹಾಗೂ ಡಾ. ಎಸ್.ಎಲ್. ಭೈರಪ್ಪ, ಕರ್ನಾಟಕ ರತ್ನ ಪುನೀತ್ ರಾಜಕುಮಾರ ಕವಿತೆಗಳನ್ನು ವಾಚಿಸಲಾಗುತ್ತಿದೆ ಎಂದು ಸಂಸ್ಥೆಯ ಸ್ಥಾಪಕ ಅಧ್ಯಕ್ಷ ರಮೇಶ ಸುರ್ವೆ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande