ಬಳ್ಳಾರಿ: ಜಿಲ್ಲಾ ಕಲಾ ಪ್ರತಿಭೋತ್ಸವದ, ವಿಜೇತರ ಪಟ್ಟಿ ಪ್ರಕಟ
ಬಳ್ಳಾರಿ, 29 ನವೆಂಬರ್ (ಹಿ.ಸ.) : ಆ್ಯಂಕರ್ : ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನ.27, 28 ರಂದು ಎರಡು ದಿನಗಳ ಕಾಲ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರ ಹಾಗೂ ಸಾಂಸ್ಕøತಿಕ ಸಮುಚ್ಚಯದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಲಾ ಪ್ರತಿಭೋತ್ಸವದ ಬಾಲ ಪ್ರತಿಭೆ, ಕಿಶೋರ ಪ್ರತಿಭೆ, ಯುವ ಪ್ರತಿ
ಬಳ್ಳಾರಿ: ಜಿಲ್ಲಾ ಕಲಾ ಪ್ರತಿಭೋತ್ಸವದ, ವಿಜೇತರ ಪಟ್ಟಿ ಪ್ರಕಟ


ಬಳ್ಳಾರಿ, 29 ನವೆಂಬರ್ (ಹಿ.ಸ.) :

ಆ್ಯಂಕರ್ : ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನ.27, 28 ರಂದು ಎರಡು ದಿನಗಳ ಕಾಲ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರ ಹಾಗೂ ಸಾಂಸ್ಕøತಿಕ ಸಮುಚ್ಚಯದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಲಾ ಪ್ರತಿಭೋತ್ಸವದ ಬಾಲ ಪ್ರತಿಭೆ, ಕಿಶೋರ ಪ್ರತಿಭೆ, ಯುವ ಪ್ರತಿಭೆ (ಏಕ ವ್ಯಕ್ತಿ) ಮತ್ತು ನಾಟಕ-ಸಮೂಹÀ ಕಲಾ ಪ್ರಕಾರದಲ್ಲಿ ನಡೆದ ಸ್ಪರ್ಧೆಗಳಲ್ಲಿ ಪ್ರಥಮ, ದ್ವೀತಿಯ ಹಾಗೂ ತೃತೀಯ ಸ್ಥಾನ ಪಡೆದ ವಿಜೇತರ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಅವರು ತಿಳಿಸಿದ್ದಾರೆ.

*ವಿಜೇತರ ಪಟ್ಟಿ:*

ಬಾಲಪ್ರತಿಭೆ ವಿಭಾಗ:

ಶಾಸ್ತ್ರೀಯ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಬಳ್ಳಾರಿಯ ದೀಕ್ಷಾ ಯಂಡಿಗೇರಿ, ದ್ವೀತಿಯ ಗುಣಸಿಂಧು ಕೆ, ತೃತೀಯ ಹಾರಿಕ ಜಕ್ಕಾ.

ಸುಗಮ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಬಳ್ಳಾರಿಯ ಎಂ.ಕೆ.ಸಿಂಚನ, ದ್ವೀತಿಯ ಸಮನ್ವಿತ.ಸಿ.ಎಂ., ತೃತೀಯ ಜಯಂತ್.ವೈ.

ಜಾನಪದ ಗೀತೆ ಸ್ಪರ್ಧೆಯಲ್ಲಿ ಪ್ರಥಮ ಸಂಡೂರಿನ ಸುಪ್ರಿಯಾ, ದ್ವೀತಿಯ ಕುರುಗೋಡಿನ ಎಚ್.ವಿ.ಗಾಯಿತ್ರಿ, ತೃತೀಯ ಸಂಡೂರು ತಾಲ್ಲೂಕಿನ ತಾರನಗರದ ಎ.ಕೆ.ಕುಶಾಲ್ ಕುಮಾರ್.

ಚಿತ್ರಕಲಾ (ಸ್ವಕಲ್ಪಿತ) ಸ್ಪರ್ಧೆಯಲ್ಲಿ ಪ್ರಥಮ ಸಂಡೂರಿನ ಪ್ರತ್ಯೂಶಾ ಎಂ.ಎಂ., ದ್ವೀತಿಯ ಬಳ್ಳಾರಿಯ ಅನ್ ಮರಿಯ ಕೆ.ಟಿ., ತೃತೀಯ ಕುರುಗೋಡಿನ ಶ್ರೀರಕ್ಷಾ.

ಹಿಂದೂಸ್ತಾನಿ/ಕರ್ನಾಟಕ ಶಾಸ್ತ್ರೀಯ ವಾದ್ಯ ಸ್ಪರ್ಧೆಯಲ್ಲಿ ಪ್ರಥಮ ಬಳ್ಳಾರಿಯ ಕವೀಂದ್ರ ಜೆ., ದ್ವೀತಿಯ ವೈಭವಮೂರ್ತಿ ವಿ., ತೃತೀಯ ಸಂಡೂರಿನ ಅಧಿತಿ ಆರ್.ವಿ.

ಹಿಂದೂಸ್ತಾನಿ/ ಕರ್ನಾಟಕ ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಬಳ್ಳಾರಿಯ ಜಯಲಕ್ಷ್ಮೀ ಎಂ.ಎಸ್., ದ್ವೀತಿಯ ಕಂಪ್ಲಿಯ ಕೆ.ಎಂ.ಶ್ರೀರಕ್ಷಾ, ತೃತೀಯ ಬಳ್ಳಾರಿಯ ಮನ್ವಿತ ಎ ಕರಾಂತ್.

ಕಿಶೋರ ಪ್ರತಿಭೆ ವಿಭಾಗ:

ಶಾಸ್ತ್ರೀಯನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸಂಗನಕಲ್ಲಿನ ಹೆಚ್.ಎಂ.ಶುಭಾನ್ವಿತ, ದ್ವೀತಿಯ ಬಳ್ಳಾರಿಯ ದಾಸ ಪ್ರವಲ್ಲಿಕ, ತೃತೀಯ ದೇವಿರಮ್ಮ ಆರ್.

ಸುಗಮ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಕುರುಗೋಡಿನ ಕೆ.ಪ್ರೇಮ, ದ್ವೀತಿಯ ಕುರುಗೋಡು ತಾಲ್ಲೂಕಿನ ವದ್ದಟ್ಟಿಯ ಗೀತಾ, ತೃತೀಯ ಬಳ್ಳಾರಿಯ ಮೇಘನ ಕೆ.ಎಸ್.

ಜಾನಪದ ಗೀತೆ ಸ್ಪರ್ಧೆಯಲ್ಲಿ ಪ್ರಥಮ ಕಂಪ್ಲಿ ತಾಲ್ಲೂಕಿನ ಮೆಟ್ರಿಯ ಮುದ್ದಮ್ಮ, ದ್ವೀತಿಯ ಕುರುಗೋಡಿನ ಹೆಚ್.ಶ್ವೇತಾ, ತೃತೀಯ ಕಾಕರ್ಲತೋಟದ ಸಹನಾ.

ಚಿತ್ರಕಲಾ (ಸ್ವಕಲ್ಪಿತ) ಸ್ಪರ್ಧೆಯಲ್ಲಿ ಪ್ರಥಮ ಬಳ್ಳಾರಿಯ ಕಂಡಿ ಸ್ವಸ್ತಿಕಾ ರೆಡ್ಡಿ, ದ್ವೀತಿಯ ಸಾಯಿ ಭಾನು ಪ್ರಕಾಶ್.ಕೆ., ತೃತೀಯ ಕುರುಗೋಡಿನ ಸೃಷ್ಠಿ ಎಸ್ ಮೇಟಿ.

ಹಿಂದೂಸ್ತಾನಿ/ಕರ್ನಾಟಕ ಶಾಸ್ತ್ರೀಯ ವಾದ್ಯ ಸ್ಪರ್ಧೆಯಲ್ಲಿ ಪ್ರಥಮ ಬಳ್ಳಾರಿಯ ಕೊಳಗಲ್ ಮೇಧಾ ರಾಮ್, ದ್ವೀತಿಯ ಕುರುಗೋಡು ತಾಲ್ಲೂಕಿನ ದಮ್ಮೂರು ಕಗ್ಗಲ್‍ನ ಕೆ.ವೀರ ಪಂಚಾಕ್ಷರಿ, ತೃತೀಯ ಬಳ್ಳಾರಿಯ ಸುದರ್ಶನ್ ಟಿ.

ಹಿಂದೂಸ್ತಾನಿ/ಕರ್ನಾಟಕ ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಬಳ್ಳಾರಿಯ ಎನ್.ಆಯುಶ್, ದ್ವೀತಿಯ ಮೇಘನ ವಿ.,

ಯುವ ಪ್ರತಿಭೆ ವಿಭಾಗ:

ಶಾಸ್ತ್ರೀಯ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಬಳ್ಳಾರಿಯ ಪಿ.ಭವ್ಯ, ದ್ವೀತಿಯ ಸುಪ್ರಿಯ, ತೃತೀಯ ಕಂಪ್ಲಿಯ ಎಸ್.ಸಂಗೀತ ಸನಾಪುರ.

ಸುಗಮ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಬಳ್ಳಾರಿಯ ಪುಟ್ಟರಾಜ ಹಿರೇಮಠ, ದ್ವೀತಿಯ ಸಂಡೂರು ತಾಲ್ಲೂಕಿನ ಬನ್ನಿಹಟ್ಟಿಯ ಶರಣಬಸವ ಹೆಚ್., ತೃತೀಯ ಸಂಡೂರಿನ ಮರಿಯಪ್ಪ ಡಿ.

ಚಿತ್ರಕಲಾ (ಸ್ವಕಲ್ಪಿತ) ಸ್ಪರ್ಧೆಯಲ್ಲಿ ಪ್ರಥಮ ಬಳ್ಳಾರಿಯ ಮಂಗಲಿ ನರೇಂದ್ರ, ದ್ವೀತಿಯ ರಚನಾ, ತೃತೀಯ ಭಾರ್ಗವಿ.

ಹಿಂದೂಸ್ತಾನಿ/ಕರ್ನಾಟಕ ಶಾಸ್ತ್ರಿಯ ವಾದ್ಯ ಸ್ಪರ್ಧೆಯಲ್ಲಿ ಪ್ರಥಮ ಬಳ್ಳಾರಿ ಯೋಗೇಶ್ ಬಣಗಾರ.

ಹಿಂದೂಸ್ತಾನಿ/ಕರ್ನಾಟಕ ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಬಳ್ಳಾರಿಯ ತಸ್ಮಯ ಅನ್ನಪೂರ್ಣ, ದ್ವೀತಿಯ ಸಂಡೂರಿನ ಸೊಕ್ಕೆ ಸಿದ್ದೇಶ, ತೃತೀಯ ಬಳ್ಳಾರಿಯ ವರ್ಷ ಜೆ.ಸಿ.

ನನ್ನ ಮೆಚ್ಚಿನ ಸಾಹಿತಿ (ಆಶು ಭಾಷಣ) ಸ್ಪರ್ಧೆಯಲ್ಲಿ ಪ್ರಥಮ ಸಂಡೂರಿನ ಗಂಗಾಬಿಕ, ದ್ವೀತಿಯ ಬಳ್ಳಾರಿಯ ಹೆಚ್.ಎನ್.ಚೈತ್ರ, ತೃತೀಯ ಸಂಡೂರಿನ ಕೃಷ್ಣವೇಣಿ.

ಸಮೂಹ ಸ್ಪರ್ಧೆ ವಿಭಾಗ:

ನಾಟಕ ಸ್ಪರ್ಧೆಯಲ್ಲಿ ಪ್ರಥಮ ಬಳ್ಳಾರಿಯ ಸ.ಸ.ಅ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಶ್ರೀಧರ ಎಂ.ಆರ್., ದ್ವೀತಿಯ ಸಿರುಗುಪ್ಪ ತಾಲ್ಲೂಕಿನ ಸಿರಿಗೇರಿಯ ಧಾತ್ರಿ ರಂಗ ಸಂಸ್ಥೆಯ ಜಿ.ಎಂ.ವಿಜಯಕುಮಾರ್, ವಿಜಯನಗರ ಶ್ರೀಕೃಷ್ಣ ದೇವರಾಯ ವಿವಿಯ ಅನಿಲ್ ಹೆಚ್ ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande