ಮಾಹಿತಿ ಹಕ್ಕುಗಳ ಬಗ್ಗೆ ಅರಿವು ಅತ್ಯವಶ್ಯಕವಾಗಿದೆ : ಹೇಮಂತ್ ನಾಗರಾಜ್
ಮಾಹಿತಿ ಹಕ್ಕುಗಳ ಬಗ್ಗೆ ಅರಿವು ಅತ್ಯವಶ್ಯಕವಾಗಿದೆ: ಹೇಮಂತ್ ನಾಗರಾಜ್,
ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ವೇದಿಕೆ ಕೋಲಾರ ಜಿಲ್ಲಾ ಘಟಕದ ಪ್ರಥಮ ವರ್ಷದ ವಾರ್ಷಿಕೋತ್ಸವ


ಕೋಲಾರ, 29 ನವೆಂಬರ್ (ಹಿ.ಸ.) :

ಆ್ಯಂಕರ್ : ಮಾಹಿತಿ

ಹಕ್ಕು ಅಧಿನಿಯಮ ಕಾಯ್ದೆಯ ಬಗ್ಗೆ ಸಾರ್ವಜನಿಕರಿಗೆ ಸರಿಯಾದ ಅರಿವು ಮೂಡಿಸುವುದು ವೇದಿಕೆಯ ಮುಖ್ಯ ಉದ್ದೇಶವಾಗಿದೆ ಎಂದು ರಾಜ್ಯ ಮಾಹಿತಿ ಹಕ್ಕು ವೇದಿಕೆಯ ರಾಜ್ಯ ಅಧ್ಯಕ್ಷ ಹೇಮಂತ್ ನಾಗರಾಜ್ ತಿಳಿಸಿದರು

ನಗರದ

ಪತ್ರಕರ್ತರ ಭವನದಲ್ಲಿ ಶನಿವಾರ ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ವೇದಿಕೆ ಕೋಲಾರ ಜಿಲ್ಲಾ ಘಟಕದ ಪ್ರಥಮ ವರ್ಷದ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಉತ್ತೇಜಿಸುವ ಹಾಗೂ ಸಾರ್ವಜನಿಕ ದಾಖಲೆಗಳನ್ನು ಮುಕ್ತವಾಗಿ ಜನರ ಮುಂದೆ ಇಡುವುದು ಮಾಹಿತಿ ಹಕ್ಕು ಕಾಯ್ದೆಯ ಮುಖ್ಯ ಉದ್ದೇಶವಾಗಿದೆ ಮಾಹಿತಿ ಪಡೆಯುವುದು ಕೂಡ ಪ್ರತಿಯೊಬ್ಬರ ಹಕ್ಕಾಗಿದೆ ಎಂದರು.

ಪ್ರಜಾಪ್ರಭುತ್ವ

ಪ್ರಬಲವಾಗಬೇಕು. ಜನರಿಗೆ ಸರಕಾರದ ಮಾಹಿತಿ ಲಭ್ಯವಾಗಬೇಕು ಎಂಬ ಉದ್ದೇಶದಿಂದ 2005ರಲ್ಲಿ ಆರ್‌ಟಿಐ ಕಾಯ್ದೆಯನ್ನು ಜಾರಿ ಗೊಳಿಸಲಾಗಿದೆ ಮಾಹಿತಿ ಹಕ್ಕು ಬಹಳ ಸರಳ ಹಾಗೂ ಗಂಭೀರ ಸ್ವರೂಪದ್ದಾಗಿದೆ ಸರ್ಕಾರವನ್ನು ಮತ್ತು ಅಧಿಕಾರಿಗಳನ್ನು ಬುಡಮೇಲು ಮಾಡುವ ಶಕ್ತಿ ಕೂಡ ಇದೆ. ಜನಪರ ಕಾನೂನು ಜಾರಿಯಾದ ನಂತರ ಅದರ ಬಗ್ಗೆ ಸರ್ಕಾರಿ ಅಧಿಕಾರಿಗಳು ತಿಳಿದಿರಬೇಕು ಜೊತೆಗೆ ಮಾಹಿತಿ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ

ಮಾಹಿತಿ ಅಧ್ಯಯನ ಕೇಂದ್ರದ ವೀರೇಶ್ ಬೆಳ್ಳೂರು ಮಾತನಾಡಿ ಮಾಹಿತಿ ಹಕ್ಕು ಅರ್ಜಿದಾರರು ಕಾಯ್ದೆಯನ್ನು ದುರುಪಯೋಗ ಪಡಿಸಿಕೊಳ್ಳದೇ ಸಮಾಜದ ನೈತಿಕತೆ ಸಾಮಾಜಿಕ ಸ್ವಾತಂತ್ರ್ಯತೆ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರು ಮಾಹಿತಿ ಕೇಳಬೇಕು ಸಾರ್ವಜನಿಕ ಸಂಪರ್ಕ ಅಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ಇದ್ದಲ್ಲಿ ಶೀಘ್ರ ವಿಲೇವಾರಿ ಮಾಡಬಹುದು ನಿರ್ಲಕ್ಷ್ಯ ವಹಿಸಬಾರದು ಕೆಲವು ಸಂದರ್ಭದಲ್ಲಿ ಭಯದ ವಾತಾವರಣವು ಸೃಷ್ಟಿಯಾಗುತ್ತದೆ ಇದಕ್ಕೆ ಸಂಘಟಿತವಾದ ಹೋರಾಟವು ಮುಖ್ಯವಾಗುತ್ತದೆ ಎಂದರು.

ಕಾರ್ಯಕ್ರಮದ

ಅಧ್ಯಕ್ಷತೆ ವಹಿಸಿ ಮಾತನಾಡಿದ ವೇದಿಕೆಯ ಜಿಲ್ಲಾ ಅಧ್ಯಕ್ಷ ಸಿ.ಮೋಹನ್ ಕುಮಾರ್

ಮಾಹಿತಿ ಹಕ್ಕು ನಿಯಮಗಳನ್ನು ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಪಾಲಿಸುವುದು ಅವಶ್ಯಕವಾಗಿದೆ ಅಧಿಕಾರಿಯು ಕಾರಣವಿಲ್ಲದೇ ಮಾಹಿತಿ ನೀಡದಿದ್ದಲ್ಲಿ ಅಥವಾ ದುರುದ್ದೇಶದಿಂದ ತಪ್ಪಾದ ಮಾಹಿತಿ ನೀಡಿದ್ದಲ್ಲಿ ದಂಡ ಪಾವತಿಸಬೇಕಾಗುತ್ತದೆ. ಜೊತೆಗೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಮಾಹಿತಿ ಪಡೆದು ಅಧಿಕಾರಿಗಳ ಮೇಲೆ ಕಾನೂನು ಕ್ರಮಗಳನ್ನು ಜಾರಿ ಮಾಡಿದ ಉದಾಹರಣೆಗಳು ಇವೆ ಎಂದರು.

ಸಂದರ್ಭದಲ್ಲಿ ಗ್ರಾಹಕ ಹಕ್ಕುಗಳ ಮತ್ತು ಮಾಹಿತಿ ತಜ್ಞ ವೈ.ಜಿ ಮುರಳೀಧರನ್,

ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಸಿ.ಕೆ ರವೀಂದ್ರನಾಥ್,

ತಾಪಂ ಮಾಜಿ ಅಧ್ಯಕ್ಷ ಅಂಜಿನಪ್ಪ, ವೇದಿಕೆಯ ಮುಖಂಡರಾದ ವಿನೋದ ಕುಮಾರ್, ಪದ್ಮ, ರಮೇಶ್, ಮುಂತಾದವರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande