
ಬೆಂಗಳೂರು, 28 ನವೆಂಬರ್ (ಹಿ.ಸ.) :
ಆ್ಯಂಕರ್ : ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸುವ ಸಲುವಾಗಿ, ಪೂರ್ವ ಕರಾವಳಿ ರೈಲ್ವೆಯು ರೈಲು ಸಂಖ್ಯೆ 08581/08582 ವಿಶಾಖಪಟ್ಟಣಂ–ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು–ವಿಶಾಖಪಟ್ಟಣಂ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ಹಾಗೂ ರೈಲು ಸಂಖ್ಯೆ 02811/02812 ಭುವನೇಶ್ವರ–ಯಶವಂತಪುರ–ಭುವನೇಶ್ವರ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲುಗಳ ಸಂಚಾರ ಅವಧಿಯನ್ನು ವಿಸ್ತರಿಸಲು ಸೂಚಿಸಿದೆ.
ಪ್ರತಿ ಭಾನುವಾರಗಳಂದು ಚಲಿಸುವ ರೈಲು ಸಂಖ್ಯೆ 08581 ವಿಶಾಖಪಟ್ಟಣಂ–ಎಸ್ಎಂವಿಟಿ ಬೆಂಗಳೂರು ಸಾಪ್ತಾಹಿಕ ಎಕ್ಸ್ ಪ್ರೆಸ್ ವಿಶೇಷ ರೈಲು ಡಿಸೆಂಬರ್ 7, 2025 ರಿಂದ ಡಿಸೆಂಬರ್ 28, 2025 ರವರೆಗೆ ವಿಸ್ತರಿಸಲಾಗಿದೆ. ಅದೇ ರೀತಿ, ಸೋಮವಾರಗಳಂದು ಕಾರ್ಯನಿರ್ವಹಿಸುವ ರೈಲು ಸಂಖ್ಯೆ 08582 ಎಸ್ಎಂವಿಟಿ ಬೆಂಗಳೂರು–ವಿಶಾಖಪಟ್ಟಣಂ ಸಾಪ್ತಾಹಿಕ ಎಕ್ಸ್ ಪ್ರೆಸ್ ವಿಶೇಷ ರೈಲು ಡಿಸೆಂಬರ್ 8, 2025 ರಿಂದ ಡಿಸೆಂಬರ್ 29, 2025 ರವರೆಗೆ ವಿಸ್ತರಣೆಗೊಂಡಿದೆ.
ವಿಸ್ತರಿತ ಅವಧಿಯಲ್ಲಿ, ಪ್ರತಿ ರೈಲು ಪ್ರತಿ ದಿಕ್ಕಿನಲ್ಲಿ ನಾಲ್ಕು ಹೆಚ್ಚುವರಿ ಟ್ರಿಪ್ಗಳನ್ನು ನಿರ್ವಹಿಸಲಿದೆ. ಈ ವಿಶೇಷ ಸೇವೆಗಳು ತಮ್ಮ ಅಸ್ತಿತ್ವದಲ್ಲಿರುವ ಸಮಯಗಳು, ನಿಲುಗಡೆಗಳು ಮತ್ತು ಸಂಯೋಜನೆಯೊಂದಿಗೆ ಮುಂದುವರೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa