
ಗದಗ, 28 ನವೆಂಬರ್ (ಹಿ.ಸ.) :
ಆ್ಯಂಕರ್ : ಗದಗ ತಾಲೂಕಿನ ಮುರಡಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಭಾವುಕ ಕ್ಷಣಗಳಿಗೆ ಸಾಕ್ಷಿಯಾಗಿವೆ. ಕಳೆದ 9 ವರ್ಷಗಳಿಂದ ಮಕ್ಕಳನ್ನು ತನ್ನ ಸ್ವಂತ ಮಕ್ಕಳಂತೆ ಬೆಳೆಸಿದ ನೆಚ್ಚಿನ ಶಿಕ್ಷಕ ಉಮೇಶ್ ತೊಂಡಿಹಾಳ ಅವರ ವರ್ಗಾವಣೆ ಸುದ್ದಿ ಬೆಳಕಿಗೆ ಬಂದ ಕೂಡಲೇ ಶಾಲೆಯಲ್ಲಿ ಕಣ್ಣೀರು ತುಂಬಿದ ವಾತಾವರಣ ನಿರ್ಮಾಣವಾಯಿತು.
ಹೆಚ್ಚುವರಿ ನಿಯಮದಡಿ ಶಿಕ್ಷಕ ಉಮೇಶ್ ಅವರನ್ನು ಗಜೇಂದ್ರಗಡಕ್ಕೆ ವರ್ಗಾವಣೆ ಮಾಡಲಾಗಿದ್ದು, ಈ ಸುದ್ದಿ ಕೇಳಿದ ವಿದ್ಯಾರ್ಥಿಗಳು ವಿದಾಯ ಹೇಳಲು ಮುಂದೆ ಬಂದಾಗ ಭಾವನೆಗಳನ್ನು ತಡೆಯಲಾಗದೆ ಕಣ್ಣೀರು ಹಾಕಿದ್ದಾರೆ.
ಶಿಕ್ಷಕರ ಕೈ ಹಿಡಿದು, “ಸರ್ ಹೋಗ್ಬೇಡಿ” ಎಂದು ಹೇಳುತ್ತಾ ಕಣ್ಣೀರಲ್ಲಿ ನೆನೆದ ಮಕ್ಕಳು ಕಂಡ ದೃಶ್ಯ ಸ್ಥಳೀಯರನ್ನು ಕೂಡ ಕರುಣೆಯಿಂದ ತುಂಬಿಸಿತು.
ಉಮೇಶ್ ತೊಂಡಿಹಾಳ ಸ್ವತಃ ಮಕ್ಕಳನ್ನು ಧೈರ್ಯ ಹೇಳುತ್ತಾ ಕಣ್ಣೀರನ್ನು ತಡೆದುಕೊಳ್ಳಲು ಪ್ರಯತ್ನಿಸಿದರೂ ಅವರೂ ಭಾವುಕರಾಗದೇ ಇರಲಿಲ್ಲ.
ಗ್ರಾಮಸ್ಥರು, ಪೋಷಕರು ಸೇರಿದಂತೆ ಅನೇಕರು ತಮ್ಮ ಶಾಲೆಯ ಅಚ್ಚುಮೆಚ್ಚಿನ ಶಿಕ್ಷಕನ ವಿದಾಯಕ್ಕೆ ಬೇಸರ ವ್ಯಕ್ತಪಡಿಸಿದ್ದು, “ಮಕ್ಕಳಿಗಾಗಿ ಇನ್ನೂ ಕೆಲವು ವರ್ಷ ಸೇವೆ ಮುಂದುವರಿಸಿದ್ದರೆ ಒಳಿತಾಗುತ್ತಿತ್ತು” ಎಂಬ ಅಭಿಪ್ರಾಯ ಕೇಳಿಬಂತು.
ಮುರಡಿ ಶಾಲೆಯ ಮಕ್ಕಳು ಶಿಕ್ಷಕರಿಗೆ ಕೊನೆಯ ವಂದನೆ ಸಲ್ಲಿಸಿದರು.
ಹಿಂದೂಸ್ತಾನ್ ಸಮಾಚಾರ್ / lalita MP