
ವಿಜಯಪುರ, 28 ನವೆಂಬರ್ (ಹಿ.ಸ.) :
ಆ್ಯಂಕರ್ : ಗ್ಯಾಸ್ ಸಿಲೆಂಡರ್‌ಗಳು ಬ್ಲಾಸ್ಟ್ ಆದ ಪರಿಣಾಮ ವಿಜಯಪುರ ನಗರದ ಲಿಂಗದ ಗುಡಿ ರಸ್ತೆಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಸಿಗರೇಟ್ ಸೇದಿ ಬಿಸಾಕಿದ್ದೆ ಅಗ್ನಿ ಅವಗಡಕ್ಕೆ ಕಾರಣ ಎನ್ನಲಾಗಿದೆ.
ನಿನ್ನೆ ತಡರಾತ್ರಿ ಪುಡ್ ಸೆಂಡರ್ ಒಂದರಲ್ಲಿ ಬೆಂಕಿ ಹೊತ್ತಿಕೊಂಡಿದೆ. ಬಳಿಕ ಅದು ಪಕ್ಕದ ಗೂಡಂಗಡಿ, ಟೀ ಅಂಗಡಿ, ಪಾನ್ ಶಾಪ್ ಗಳಿಗೆ ಆವರಿಸಿಕೊಂಡಿದೆ. ಬೆಂಕಿ ಪುಡ್ ಸೆಂಟರ್, ಟೀ ಸ್ಟಾಲ್‌ನಲ್ಲಿದ್ದ ಗ್ಯಾಸ್ ಸಿಲೆಂಡರ್‌ಗಳಿಗು ಆವರಿಸಿಕೊಂಡಿದ್ದು, ಎರಡೂ ಸಿಲೆಂಡರ್ ಬ್ಲಾಸ್ಟ್ ಆಗಿವೆ.
ಸಿಲೆಂಡರ್ ಬ್ಲಾಸ್ಟ್ ಆಗುವ ದೃಶ್ಯಗಳು ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿವೆ. ಅಗ್ನಿ ಶಾಮಕ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದ ವೇಳೆಯೇ ಸಿಲೆಂಡರ್ ಬ್ಲಾಸ್ಟ್ ಆಗಿದ್ದು ಅಗ್ನಿಶಾಮಕ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಒಟ್ಟು 7 ಅಂಗಡಿಗಳು ಸುಟ್ಟು ಕರಕಲಾಗಿವೆ. ಪಕ್ಕದ ಮನೆಯ ಕಿಟಕಿ, ಬಾಗಿಲುಗಳು ಬೆಂಕಿಯಲ್ಲಿ ಸುಟ್ಟು ಹೋಗಿವೆ.
ಅಗ್ನಿ ಶಾಮಕ ಸಿಬ್ಬಂದಿ 5 ಸಿಲೆಂಡರ್ ಹೊರ ತಂದು ನಡೆಯಬೇಕಿದ್ದ ಭಾರಿ ಅನಾಹುತವನ್ನ ತಪ್ಪಿಸಿದ್ದಾರೆ. ಈ ಸಂಬಂಧ ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande