
ಬಳ್ಳಾರಿ, 28 ನವೆಂಬರ್ (ಹಿ.ಸ.) :
ಆ್ಯಂಕರ್ : ರೈಲ್ವೆ ಅಭಿವೃದ್ಧಿ ಕುರಿತ ಸಭೆಯಲ್ಲಿ ಭಾಗವಹಿಸಿದ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಉಪಾಧ್ಯಕ್ಷರು ಹಾಗೂ ವಿಭಾಗೀಯ ರೈಲ್ವೆ in ಬಳಕೆದಾರರ ಸಲಹಾ ಸಮಿತಿ ಸದಸ್ಯ, ಸೊಂತ ಗಿರಿಧರ್ ರವರು ಬಳ್ಳಾರಿ ರೈಲ್ವೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಹತ್ವದ ವಿಚಾರಗಳನ್ನು ಚರ್ಚಿಸಿದರು.
ಸಭೆಯಲ್ಲಿ, ಬಳ್ಳಾರಿ ಜಿಲ್ಲೆ ರಾಜ್ಯದ ಪ್ರಮುಖ ಕೈಗಾರಿಕಾ ಮತ್ತು ಗಣಿಗಾರಿಕೆ ಕೇಂದ್ರವಾಗಿರುವುದರಿಂದ ರೈಲ್ವೆ ಸಂಪರ್ಕ ಮತ್ತು ಮೂಲಸೌಕರ್ಯ ವಿಸ್ತರಣೆ ಅಗತ್ಯವಿದೆ ಎಂದು ಸೊಂತ ಗಿರಿಧರ್ ರವರು ಒತ್ತಿ ಹೇಳಿದರು.
ಬಳ್ಳಾರಿ-ಹುಬ್ಬಳ್ಳಿ, ಬಳ್ಳಾರಿ-ವಾಸ್ಕೋ ಹಾಗೂ ಬಳ್ಳಾರಿ-ಗುತ್ತಿ ರೈಲು ಮಾರ್ಗಗಳ ದ್ವೀಕರಣೆ, ವೇಗವರ್ಧನೆ ಹಾಗೂ ಹೊಸ ರೈಲು ನಿಲ್ದಾಣ ಸೌಲಭ್ಯಗಳ ಸುಧಾರಣೆ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.
ಜನಸಾಮಾನ್ಯರಿಗೆ ಉತ್ತಮ ಸಂಪರ್ಕ ಮತ್ತು ಸರಕು ಸಾಗಣೆಗೆ ಅನುಕೂಲವಾಗುವಂತೆ ಯೋಜನೆಗಳನ್ನು ತ್ವರಿತಗೊಳಿಸುವ ಅಗತ್ಯವಿದೆ ಹಾಗೂ ಹೊಸಪೇಟೆ ಮತ್ತು ಬಳ್ಳಾರಿ ಹಾಗೂ ಬೆಳಗಾಂ ಮತ್ತು ಹೈದರಾಬಾದ್ ರೈಲನ್ನು ಪ್ರತಿದಿನ ಪುನ: ಪ್ರಾರಂಭಿಸಬೇಕು ಹಾಗೂ ನಡುವೆ ಹೆಚ್ಚಿನ ರೈಲು ಸೇವೆಗಳನ್ನು ಚಲಾಯಿಸುವಂತೆ ಒತ್ತಾಯಿಸಿದರು,
ಹಾಗೂ ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ಮಹಿಳಾ ಶೌಚಾಲಯ ಮತ್ತು ಎಸ್ಕಲೇಟರ್‌ಗಳನ್ನು ತಕ್ಷಣ ಅಳವಡಿಸುವಂತೆ ಮನವಿಯಲ್ಲಿ ಪ್ರಸ್ತಾಪಿಸಲಾಯಿತು. 2026ನೇ ಮಾರ್ಚ 22 ಮತ್ತು 26ರ ನಡುವ ಅಮೃತ ಮಹೋತ್ಸವ ಅಭಿವೃದ್ದಿ ಸ್ಕೀಮ್ ಉದ್ಟಾಟನಾ ಕಾರ್ಯಕ್ರಮ ಆಯೋಜಿಸಲಾಗಿದೆ ಈ ವೇಳೆಯೊಳಗೆ ಸಂಪೂರ್ಣವಾಗಿ ಸಿದ್ದವಾಗಿರಬೇಕು ಎಂದು ಸೊಂತ ಗಿರಿಧರ್ ರವರು ಧ್ವನಿ ಎತ್ತಿದರು.
ಸಭೆಯಲ್ಲಿ ಅಧಿಕಾರಿಗಳು, ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯರಾದ ಗೋಪಾಲಕೃಷ್ಣ, ಕೊಟ್ರೇಶ್ ಮತ್ತು ರಾಹುಲ್ ಮೆಹತ ಸಭ ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್