ರಾಷ್ಟ್ರಪತಿ ದ್ರೌಪದಿ ಮುರ್ಮು ಉತ್ತರ ಪ್ರದೇಶ ಭೇಟಿ
ನವದೆಹಲಿ, 28 ನವೆಂಬರ್ (ಹಿ.ಸ.) : ಆ್ಯಂಕರ್ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಎರಡು ದಿನಗಳ ಒಡಿಶಾ ಹಾಗೂ ಉತ್ತರ ಪ್ರದೇಶ ಪ್ರವಾಸ ಇಂದು ಲಕ್ನೋದಲ್ಲಿ ಅಂತ್ಯಗೊಳ್ಳಲಿದೆ. ರಾಷ್ಟ್ರಪತಿ ಭವನದ ವಕ್ತಾರರು ನೀಡಿದ ಮಾಹಿತಿಯಂತೆ, ರಾಷ್ಟ್ರಪತಿಗಳು ಇಂದು ಲಕ್ನೋದಲ್ಲಿ ನಡೆಯಲಿರುವ ಬ್ರಹ್ಮಕುಮಾರಿಯರ 202
President


ನವದೆಹಲಿ, 28 ನವೆಂಬರ್ (ಹಿ.ಸ.) :

ಆ್ಯಂಕರ್ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಎರಡು ದಿನಗಳ ಒಡಿಶಾ ಹಾಗೂ ಉತ್ತರ ಪ್ರದೇಶ ಪ್ರವಾಸ ಇಂದು ಲಕ್ನೋದಲ್ಲಿ ಅಂತ್ಯಗೊಳ್ಳಲಿದೆ.

ರಾಷ್ಟ್ರಪತಿ ಭವನದ ವಕ್ತಾರರು ನೀಡಿದ ಮಾಹಿತಿಯಂತೆ, ರಾಷ್ಟ್ರಪತಿಗಳು ಇಂದು ಲಕ್ನೋದಲ್ಲಿ ನಡೆಯಲಿರುವ ಬ್ರಹ್ಮಕುಮಾರಿಯರ 2025-26ನೇ ಸಾಲಿನ ವಾರ್ಷಿಕ ಥೀಮ್ “ಜಾಗತಿಕ ಏಕತೆ ಮತ್ತು ವಿಶ್ವಾಸಕ್ಕಾಗಿ ಧ್ಯಾನ” ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸುವರು.

ಅವರು ಬಳಿಕ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವಜ್ರಮಹೋತ್ಸವ ಸಮಾರೋಪ ಸಮಾರಂಭ ಮತ್ತು ಅದರ 19ನೇ ರಾಷ್ಟ್ರೀಯ ಸಮಾರಂಭವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande