ಉಡುಪಿ ಶ್ರೀಕೃಷ್ಣ , ಅಷ್ಟಮಠಗಳ ದರ್ಶನ ಪಡೆದ ಪ್ರಧಾನಿ ಮೋದಿ
ಉಡುಪಿ, 28 ನವೆಂಬರ್ (ಹಿ.ಸ.) : ಆ್ಯಂಕರ್ : ಉಡುಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಕ್ತರು ಹಾಗೂ ಮಠಾಧೀಶರಿಂದ ಭವ್ಯ ಸ್ವಾಗತ ದೊರೆಯಿತು. ಅಷ್ಟಮಠಗಳ ಸುತ್ತಲೂ ಸಾಗಿದ ಬಳಿಕ ಪ್ರಧಾನಿ ಮೋದಿ ಅವರು ಶ್ರೀಕೃಷ್ಣ ಮಠದ ಕನಕ ಗೋಪುರದ ಮುಂದೆ ವಾಹನದಿಂದ ಇಳಿದು ಮಠದೊಳಗೆ ತೆರಳಿದರು. ಮಠದ ಪ್ರವೇಶದ ಬಳ
Pm


ಉಡುಪಿ, 28 ನವೆಂಬರ್ (ಹಿ.ಸ.) :

ಆ್ಯಂಕರ್ : ಉಡುಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಕ್ತರು ಹಾಗೂ ಮಠಾಧೀಶರಿಂದ ಭವ್ಯ ಸ್ವಾಗತ ದೊರೆಯಿತು. ಅಷ್ಟಮಠಗಳ ಸುತ್ತಲೂ ಸಾಗಿದ ಬಳಿಕ ಪ್ರಧಾನಿ ಮೋದಿ ಅವರು ಶ್ರೀಕೃಷ್ಣ ಮಠದ ಕನಕ ಗೋಪುರದ ಮುಂದೆ ವಾಹನದಿಂದ ಇಳಿದು ಮಠದೊಳಗೆ ತೆರಳಿದರು.

ಮಠದ ಪ್ರವೇಶದ ಬಳಿಯಲ್ಲಿ ಭಕ್ತ ಜನಸಾಗರ “ನಮೋ, ನಮೋ” ಘೋಷಣೆಗಳ ಮಧ್ಯೆ ಪ್ರಧಾನಿಗೆ ವಿಶೇಷ ಗೌರವ ಸಲ್ಲಿಸಲಾಯಿತು. ಬಳಿಕ ಅವರು ಕನಕದಾಸರ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನಗಳನ್ನು ಅರ್ಪಿಸಿದರು.

ಪ್ರಧಾನಿ ಮೋದಿ ಬಳಿಕ ಐತಿಹಾಸಿಕ ಕನಕನ ಕಿಂಡಿ ಮೂಲಕ ಶ್ರೀಕೃಷ್ಣನ ದರ್ಶನ ಪಡೆದರು. ಭಕ್ತಿಯ ಸಂಕೇತವಾದ ಈ ಕಿಂಡಿಯ ಮೂಲಕ ಪ್ರಧಾನಿ ಕೆಲ ಕ್ಷಣ ಧ್ಯಾನದಲ್ಲಿದ್ದು ಶ್ರೀಕೃಷ್ಣನ ಆಶೀರ್ವಾದ ಪಡೆದರು.

ಮಠದ ವಿಕಾಸ ಕಾರ್ಯಗಳ ಭಾಗವಾಗಿ ಹೊಸದಾಗಿ ಸ್ವರ್ಣಲೇಪಿತ ಕನಕನ ಕಿಂಡಿ ನಿರ್ಮಾಣವಾಗಿದ್ದು, ಅದನ್ನು ಇಂದು ಪ್ರಧಾನಿ ಮೋದಿ ಅಧಿಕೃತವಾಗಿ ಉದ್ಘಾಟಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande