
ಗದಗ, 28 ನವೆಂಬರ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಮೇದುಳು ಆರೋಗ್ಯ ಉಪಕ್ರಮ ವಿಭಾಗ, ಕೆ.ಎಚ್.ಪಾಟೀಲ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಇವರುಗಳ ಸಂಯುಕ್ತ ಆಶ್ರಯದಲ್ಲಿಂದು ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಸಿದ್ದರಾಮಯ್ಯ ಗಡೆದ ರವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಅಪಸ್ಮಾರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಪೊಲೀಸ್ ಸಿಬ್ಬಂದಿಯು ಭೌತಿಕ ಚಟುವಟಿಕೆ ಮತ್ತು ದಿನನಿತ್ಯದ ಕಾರ್ಯ ವೈಖರಿಯ ಜೊತೆಗೆ ಆರೋಗ್ಯದ ಸಮತೋಲನೆಯನ್ನು ಕಾಪಾಡಲು ತಿಳಿಸಿಕೊಟ್ಟರು ಮತ್ತು ಕಭಿ ಕಾರ್ಯಕ್ರಮದ ಉಪಯೋಗ ತೆಗೆದುಕೊಳ್ಳಬೇಕೆಂದು ತಿಳಿಸಿದರು.
ಕಭಿ ಕಾರ್ಯಕ್ರಮದ ಜಿಲ್ಲಾ ಸಂಯೋಜಕರಾದ ಪ್ರವೀಣ ಎಸ್ ರೋಣದ ರವರು ಕಭಿ ಕಾರ್ಯಕ್ರಮದ ಉದ್ದೇಶಗಳು ಮತ್ತು ಗುರಿಗಳ ಬಗ್ಗೆ ಜಾಗೃತಿ ಮೂಡಿಸಿ ಅಪಸ್ಮಾರದ ರೋಗ ಲಕ್ಷಣಗಳು ಇರುವ ರೋಗಿಗಳನ್ನು ಚಿಕಿತ್ಸೆ ಪಡೆದುಕೊಳ್ಳಲು ಜಿಲ್ಲಾ ಆಸ್ಪತ್ರೆ ರೂ.ನಂ 105 ದಲ್ಲಿ ಚಿಕಿತ್ಸೆ ಪಡೆದುಕೊಂಡು ಆರೋಗ್ಯವಾಗಿರಲು ತಿಳಿಸಿದರು. ಹಾಗೂ ಟೆಲಿ ನ್ಯೂರೋಲಜಿ ಟೆಲಿ-ರಿಹ್ಯಾಬ್ ಮತ್ತು ರೋಗಿಗಳಿಗೆ ಆಪ್ತ ಸಮಾಲೋಚನೆ ಸೌಲಭ್ಯವನ್ನು ಪಡೆದುಕೊಳ್ಳಲು ತಿಳಿಸಿದರು.
ಕಭಿ ಕಾರ್ಯಕ್ರಮದ ಫಿಜಿಯೋಥೆರಪಿಸ್ಟ ಡಾ ಅಶ್ವಿನಿ ಎಮ್ ಕುರಿಯವರ ರವರು ಮಾತನಾಡಿ ಈ ಖಾಯಿಲೆಗೆ ಅನುಗುಣವಾಗಿ ದಿನನಿತ್ಯದ ಚಟುವಟಿಕೆಳನ್ನು ಮತ್ತು ವ್ಯಾಯಾಮ ಗಳನ್ನು ಮಾಡುವುದರ ಜೊತೆಗೆ ಭೌತ ಚಿಕಿತ್ಸೆ ಮತ್ತು ದೈಹಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದರು.
ಕಭಿ ಕಾರ್ಯಕ್ರಮದ ಶೂಶ್ರೂಷಕ ರವಿ ನಂದ್ಯಾಳ ಮಾತನಾಡಿ ಅಪಸ್ಮಾರ ಚಿಕಿತ್ಸೆಯ ಬಗ್ಗೆ ಅಪಸ್ಮಾರ ಖಾಯಿಲೆಯ ರೋಗಿಗಳು ಸಿಜರ್ ದಿನನಿತ್ಯದ ದಿನಚರಿಯ ಬಗ್ಗೆ ಬರೆಯುವ ಬಗ್ಗೆ ತಿಳಿಸಿದರು ಮತ್ತು ಈ ರೋಗ ಲಕ್ಷಣಗಳು ಕಂಡು ಬಂದರೆ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ತಿಳಿಸಿದರು.
ಕಾರ್ಯಕ್ರಮದ ಜಿಲ್ಲಾ ಸಂಯೋಜಕರಾದ ಪ್ರವೀಣ ಎಸ್ ರೋಣದ ನಿರೂಪಿಸಿದರು ಕಭಿ ಕಾರ್ಯಕ್ರಮ ಗದಗ, ಸ್ವಾಗತ ರವಿ ನಂದ್ಯಾಳ ಶೂಶ್ರೂಷಕರು ಕಭಿ ಕಾರ್ಯಕ್ರಮ, ಗದಗ ವಂದನಾರ್ಪಣೆಯನ್ನು ಡಾ ಅಶ್ವಿನಿ ಎಮ್ ಕುರಿಯವರ ಫಿಜಿಯೋಥೆರಪಿಸ್ಟ ಇವರು ನೆರವೇರಿಸಿದರು ಕಾರ್ಯಕ್ರಮದಲ್ಲಿ ಗ್ರಾಮೀಣ ಪೊಲೀಸ್ ಠಾಣಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP