
ಭದ್ರಾಚಲಂ, 28 ನವೆಂಬರ್ (ಹಿ.ಸ.) :
ಆ್ಯಂಕರ್ : ನಕ್ಸಲ್ ವಿರೋಧಿ ಕಾರ್ಯಾಚರಣೆ ತೀವ್ರಗೊಂಡಿರುವ ನಡುವೆ, ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾವೋವಾದಿ) ಸರ್ಕಾರದೊಂದಿಗೆ ಶಾಂತಿ ಮಾತುಕತೆಗೆ ಒಲವು ವ್ಯಕ್ತಪಡಿಸಿದ್ದು, ಸಂಘಟನೆಯು ಜನವರಿ 1, 2026ರಿಂದ ಒಂದು ತಿಂಗಳ ಕದನ ವಿರಾಮ ಘೋಷಿಸಿದೆ.
ಎಂಎಂಸಿ ವಲಯ ಸಮಿತಿಯ ಪ್ರತಿನಿಧಿ ಅನಂತ್ ಅವರ ಹೆಸರಿನ ಪ್ರಕಟಣೆಯ ಪ್ರಕಾರ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದ ಮುಖ್ಯಮಂತ್ರಿಗಳಿಗೆ ಪತ್ರ ಕಳುಹಿಸಿ ಸರ್ಕಾರ ಆಹ್ವಾನಿಸಿದರೆ ಮಾತುಕತೆಗೆ ಸಿದ್ಧ” ಎಂದು ಹೇಳಿದೆ.
2022ರ ಕದನ ವಿರಾಮಕ್ಕೆ ಪ್ರತಿಕ್ರಿಯೆ ಸಿಗಲಿಲ್ಲ ಎಂದು ಸಂಘಟನೆ ವಿಷಾದ ವ್ಯಕ್ತಪಡಿಸಿದ್ದು, ಈ ಬಾರಿ ಸರ್ಕಾರಗಳು ಮುಂದಾಗಬೇಕೆಂದು ಒತ್ತಾಯಿಸಿದೆ.
ಸಂಘಟನೆ ಸಾಮೂಹಿಕ ಶರಣಾಗತಿಗೆ ಸಿದ್ಧ ಎಂದು ಘೋಷಿಸಿದ್ದು, ಜನವರಿ 1ರಿಂದ ಸಶಸ್ತ್ರ ಹೋರಾಟ ಕೈಬಿಡುವುದಾಗಿ, ಶಸ್ತ್ರಾಸ್ತ್ರಗಳನ್ನು ಒಪ್ಪಿಸುವುದಾಗಿ ಮತ್ತು ಸರ್ಕಾರಿ ಪುನರ್ವಸತಿ ಸ್ವೀಕರಿಸುವುದಾಗಿ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa