ತುರ್ತು ಆರೈಕೆ ಮತ್ತು ಚೇತರಿಕೆ ಕೇಂದ್ರ ಉದ್ಘಾಟನೆ
ಗದಗ, 28 ನವೆಂಬರ್ (ಹಿ.ಸ.) : ಆ್ಯಂಕರ್ : ತೀವ್ರತರವಾದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ನಿರಾಶ್ರಿತ ವ್ಯಕ್ತಿಗಳಿಗೆ ತುರ್ತು ಆರೈಕೆ ಮತ್ತು ಚೇತರಿಕೆ ಕೇಂದ್ರ (ಇ.ಸಿ.ಆರ್.ಸಿ)ವನ್ನು ಕೆ.ಎಚ್.ಪಾಟೀಲ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಲ್ಲಸಮುದ್ರ ಕೊಠಡಿ ಸಂಖ್ಯೆ 232ರಲ್ಲಿ ಉದ್ಘಾಟಿಸಲಾಯಿತು.
ಫೋಟೋ


ಗದಗ, 28 ನವೆಂಬರ್ (ಹಿ.ಸ.) :

ಆ್ಯಂಕರ್ : ತೀವ್ರತರವಾದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ನಿರಾಶ್ರಿತ ವ್ಯಕ್ತಿಗಳಿಗೆ ತುರ್ತು ಆರೈಕೆ ಮತ್ತು ಚೇತರಿಕೆ ಕೇಂದ್ರ (ಇ.ಸಿ.ಆರ್.ಸಿ)ವನ್ನು ಕೆ.ಎಚ್.ಪಾಟೀಲ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಲ್ಲಸಮುದ್ರ ಕೊಠಡಿ ಸಂಖ್ಯೆ 232ರಲ್ಲಿ ಉದ್ಘಾಟಿಸಲಾಯಿತು.

ಗದುಗಿನ ಕೆ ಎಚ್ ಪಾಟೀಲ್ ವೈಧ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಾಂಶುಪಾಲರಾಧ ಡಾ. ರಾಜು, ವೈಧ್ಯಕೀಯ ಅಧೀಕ್ಷಕಿ ಡಾ. ರೇಖಾ ಸೊನಾವಣೆ, ಉಪ ವೈಧ್ಯಕೀಯ ಅಧೀಕ್ಷಕ ಡಾ. ಸೋಮಶೇಖರ ಬಿಜ್ಜಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಸ್ ಎಸ್ ನೀಲಗುಂದ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ ರಾಜೇಂದ್ರ ಬಸರಿಗಿಡದ ಇವರುಗಳು ಉದ್ಘಾಟಿಸಿದರು.

ತುರ್ತು ಆರೈಕೆ ಮತ್ತು ಚೇತರಿಕೆ ಕೇಂದ್ರ (ಇ.ಸಿ.ಆರ್.ಸಿ)ಯು, ಆಲದಮರ ಫೌಂಡೇಶನ್ ಸಾರಥಿ ಸಂಸ್ಥೆ ಹಿರೇಹಂದಿಗೋಳ ಹಾಗೂ ಗದಗ ಕೆ.ಎಚ್.ಪಾಟೀಲ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಲ್ಲಸಮುದ್ರ ಗದಗ ಇವರ ಸಹಯೋಗದೊಂದಿಗೆ ಗುರುವಾರ ತೀವ್ರತರವಾದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಬೀದಿಗಳಲ್ಲಿ ಗುರಿಯಿಲ್ಲದೆ ಅಲೆದಾಡುತ್ತಿರುವ ನಿರಾಶ್ರಿತರಿಗಾಗಿ ತುರ್ತು ಚಿಕಿತ್ಸೆಯನ್ನು ಹಾಗೂ ಅಸ್ವಸ್ಥತಗೊಂಡಿರುವAತಹ ರೋಗಿಗಳಿಗಾಗಿ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ಸಂಪೂರ್ಣ ಉಚಿತವಾಗಿ ನೀಡಲಾಗುವುದು ಮತ್ತು ಗುಣಮುಖವಾಗುವವರೆಗೂ ಉಚಿತವಾಗಿ ಸಹಾಯ ಮಾಡುವುದು, ಊಟ ಹಾಗೂ ಆರೈಕೆ ಔಷದೋಪಚಾರ ನೀಡಲಾಗುವುದು ಗುಣಮುಖ ಹೊಂದಿರುವವರ ವಿಳಾಸ ಸಂಬಂಧಿಕರ ಮಾಹಿತಿಯನ್ನು ಪಡೆದು ಅವರಲ್ಲಿ ತಲುಪಿಸಲು ನೆರವಾಗುವುದು. ಇದರ ಸದುಪಯೋಗವನ್ನು ಅರ್ಹರು ಪಡೆದುಕೊಳ್ಳಬೇಕೆಂದು ಸಾರ್ವಜನಿಕರಲ್ಲಿ ವಿನಂತಿಸಲಾಗಿದೆ.

ಈ ವೇಳೆ ಅತಿಥಿಗಳಾಗಿ ಮನೋವೈದ್ಯಕೀಯ ಮುಖ್ಯಸ್ಥರು ಡಾ ಗಿರೀಶ ನಾಗರಾಳ, ಡಾ ಜಿತೇಂದ್ರ ಮುಗಳಿ, ಮನೋವೈದ್ಯಕೀಯ ಸಹಾಯಕ ಪ್ರಾಧ್ಯಾಪಕರು ಡಾ ಫಕ್ಕಿರಪ್ಪ ಗಾಣಿಗೇರ ಆಗಮಿಸಿದ್ದರು. ವೈದ್ಯಕೀಯ ಸಾರಥಿ ಸಂಸ್ಥೆ ಅಧ್ಯಕ್ಷ ಎಮ್.ಬಿ. ಜಕ್ಕನಗೌಡ್ರ, ಸಾರಥಿ ಸಂಸ್ಥೆಯ ನಿರ್ದೇಶಕ ಆರ್.ಎಚ್.ಪಾಟೀಲ್, ಸಾರಥಿ ಸಂಸ್ಥೆಯ ಕಾರ್ಯದರ್ಶಿ ಕೆ.ಜಿ.ಲಮಾಣಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿಗಳು ಹಾಗೂ ಕೆ.ಎಚ್.ಪಾಟೀಲ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಿಬ್ಬಂದಿಗಳು ಹಾಜರಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande