
ಗದಗ, 28 ನವೆಂಬರ್ (ಹಿ.ಸ.) :
ಆ್ಯಂಕರ್ : ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಅವರು ರಸ್ತೆ ಅಪಘಾತದಲ್ಲಿ ನಿಧನರಾಗಿರುವುದು ಅತ್ಯಂತ ದುಃಖಕರವಾದ ಸಂಗತಿ. ಶ್ರೀಯುತರು ಸ್ವಪ್ರಯತ್ನದಿಂದ ಕೆ.ಪಿ.ಎಸ್.ಸಿ ಪರೀಕ್ಷೆ ಉತ್ತೀರ್ಣರಾಗಿ ಐಎಎಸ್ ಹುದ್ದೆಗೇರಿ, ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳೆಂದೇ ಹೆಸರುವಾಸಿಯಾಗಿದ್ದರು ಎಂದು ಡಂಬಳ-ಗದಗ ಜಗದ್ಗುರು ತೋರಿಸುವ ಸಂಸ್ಥಾನಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ತಮ್ಮ ಶೋಕ ವ್ಯಕ್ತಪಡಿಸಿದ್ದಾರೆ.
ನಮ್ಮ ವಿದ್ಯಾಸಂಸ್ಥೆಯಲ್ಲಿ ಶ್ರೀಮಠದ ತರಬೇತಿ ಪಡೆದಿದ್ದ ಅವರು ಬೆಳಗಾವಿ, ಬೀದರ, ದಾವಣಗೆರೆ ಮುಂತಾದ ಜಿಲ್ಲೆಗಳಲ್ಲಿ ಉಪವಿಭಾಗಾಧಿಕಾರಿಯಾಗಿ, ಜಿಲ್ಲಾ ಪಂಚಾಯತ್‌ನ ಕಾರ್ಯನಿರ್ವಾಹಕ ಅಧಿಕಾರಿಯಾಗಿ, ಜಿಲ್ಲಾಧಿಕಾರಿಯಾಗಿ, ಪ್ರಸ್ತುತ ಕರ್ನಾಟಕ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದರು. ಸಾಮಾಜಿಕ ಕಳಕಳಿ, ಶಿಕ್ಷಣ ಪ್ರೇಮ ಹೊಂದಿದ್ದ ಮಹಾಂತೇಶ ಬೀಳಗಿ ಅವರ ಅಕಾಲಿಕ ನಿಧನವು ನಮ್ಮ ಸಮಾಜಕ್ಕೆ ತನ್ಮೂಲಕ ನಮ್ಮ ರಾಜ್ಯಕ್ಕೆ ತುಂಬಲಾಗದ ನಷ್ಟವನ್ನುಂಟು ಮಾಡಿದೆ.
ಸದಾ ವಿಭೂತಿಧಾರಣ ಮಾಡಿಕೊಂಡು ಹಸನ್ಮುಖಿಯಾಗಿ, ಲವಲವಿಕೆಯಿಂದ ಇರುತ್ತಿದ್ದ ಮಹಾಂತೇಶ ಬೀಳಗಿ ಯುವಕರಿಗೆ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಸ್ಪೂರ್ತಿಯ ಚೇತನವಾಗಿದ್ದರು. ಜನಸಾಮಾನ್ಯರ ಕಷ್ಟಗಳಿಗೆ ಮಿಡಿಯುವ ಹೃದಯ ವೈಶಾಲ್ಯತೆ ಪ್ರಾರ್ಥಿಸಿದ್ದಾರೆ. ಹೊಂದಿದ್ದರು. ಅವರು ಇಂದು ಇಲ್ಲ ಎನ್ನುವುದನ್ನು ನಂಬುವುದಕ್ಕಾಗುತ್ತಿಲ್ಲ. ಬಸವಾದಿ ಶರಣರು ಅವರಿಗೆ ಚಿರಶಾಂತಿಯನ್ನು ಮತ್ತು ಅವರ ಕುಟುಂಬವರ್ಗದವರಿಗೆ ಅಗಲುವಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ದಯಪಾಲಿಸಲಿ ಎಂದು ಶ್ರೀಗಳು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP