ಕೊಪ್ಪಳದಲ್ಲಿ ಆಸ್ಪತ್ರೆಗಳು ಹೆಚ್ಚಾಗಲು ಕಾರ್ಖಾನೆಗಳೇ ಕಾರಣ : ಅಮ್ಜದ್ ಪಟೇಲ್
ಕೊಪ್ಪಳ, 28 ನವೆಂಬರ್ (ಹಿ.ಸ.) : ಆ್ಯಂಕರ್ : ಬಲ್ಡೋಟ (ಬಿಎಸ್ಪಿಎಲ್), ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ ಸುಮಿ, ಎಕ್ಸಿಂಡಿಯಾ ಕಾರ್ಖಾನೆಗಳ ವಿಸ್ತರಣೆ ವರೋಧಿಸಿ, 44.35 ಎಕರೆ ಬಸಾಪುರ ಗ್ರಾಮದ ಕೆರೆ ಸಾರ್ವಜನಿಕರಿಗೆ ಮುಕ್ತಗೊಳಿಸಲು ಆಗ್ರಹಿಸಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪ
ಕೊಪ್ಪಳದಲ್ಲಿ ಆಸ್ಪತ್ರೆಗಳು ಹೆಚ್ಚಾಗಲು ಕಾರ್ಖಾನೆಗಳೇ ಕಾರಣ: ಅಮ್ಜದ್ ಪಟೇಲ್


ಕೊಪ್ಪಳ, 28 ನವೆಂಬರ್ (ಹಿ.ಸ.) :

ಆ್ಯಂಕರ್ : ಬಲ್ಡೋಟ (ಬಿಎಸ್ಪಿಎಲ್), ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ ಸುಮಿ, ಎಕ್ಸಿಂಡಿಯಾ ಕಾರ್ಖಾನೆಗಳ ವಿಸ್ತರಣೆ ವರೋಧಿಸಿ, 44.35 ಎಕರೆ ಬಸಾಪುರ ಗ್ರಾಮದ ಕೆರೆ ಸಾರ್ವಜನಿಕರಿಗೆ ಮುಕ್ತಗೊಳಿಸಲು ಆಗ್ರಹಿಸಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆಯಿಂದ ನಡೆಯುತ್ತಿರುವ ಅನಿರ್ದಿಷ್ಟ ಧರಣಿ ಬೆಂಬಲಿಸಿ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಮಾತನಾಡಿದರು.

ನಗರಸಭೆ ಸಂಕೀರ್ಣದ ಮುಂದೆ ನಡೆಯುತಿರುವ ಹೋರಾಟದ 29ನೇ ದಿನದ ಧರಣಿಯನ್ನು ಸಾಂಸ್ಕೃತಿಕ ಕಲಾಬಳಗದಿಂದ ನಡೆಸಲಾಯಿತು.

ಧರಣಿಗೆ ಬೆಂಬಲಿಸಿ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಕಾರ್ಖಾನೆ ಒಂದು ವೇಳೆ ವಿಸ್ತರಣೆಯಾದರೆ ಕೊಪ್ಪಳ ಉಳಿಯುವುದಿಲ್ಲ ಎಂದು ಗವಿಶ್ರೀಗಳು ಸ್ವತಃ ಬೀದಿಗಿಳಿದು ಭವಿಷ್ಯದ ಅಪಾಯದ ಕುರಿತು ಎಚ್ಚರಿಸಿದ್ದಾರೆ. ಅವರು ಹೋರಾಟದಲ್ಲಿ ಧುಮಿಕಿದ ಮೇಲೆ ಜನರು ಗಂಭೀರವಾಗಿ ಚಿಂತಿಸುತ್ತಿದ್ದಾರೆ. ಆದರೆ ಇನ್ನೂ ಹೋರಾಟಕ್ಕೆ ಧುಮುಕಿಲ್ಲ. ಈಗ ನಗರಸಭೆಯ ವ್ಯಾಪ್ತಿ ಕಡಿಮೆ ಮಾಡಿ ಗ್ರಾಮೀಣ ಪ್ರದೇಶಕ್ಕೆ ಭೂಮಿ ಸೇರಿಸಿ ಆಸ್ತಿಗಳ, ನಿವೇಶನಗಳ ಮೌಲ್ಯ ಅಪಮೌಲೀಕರಣ ಮಾಡಲಾಗುತ್ತಿದೆ, ಇದನ್ನು ವಿರೋಧಿಸಿ ಕೋಪದಿಂದಲೇ ಕೊಪ್ಪಳವನ್ನೇ ಹಳ್ಳಿ ಎಂದು ಘೋಷಣೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಕೇಳಿದ್ದೇನೆ ಎಂದರು.

ನಮ್ಮ ಮನೆಗೂ ಕೂಡಾ ಬಲ್ಡೋಟ ಎಂ.ಎಸ್.ಪಿ.ಎಲ್ ಪಲ್ಲೆಟ್ ಘಟಕದಿಂದ ಬರುವ ಹಾರು ಬೂದಿ, ಕರಿದೂಳು ಬರುವದರಿಂದ ಅದನ್ನೇ ಉಸಿರಾಡಿ ಆರೋಗ್ಯ ಸಮಸ್ಯೆಯಾಗುತ್ತಿದೆ. ಜನ ಅಂತಿಮವಾಗಿ ರೊಚ್ಚಿಗೆದ್ದು ಬೀದಿಗಿಳಿಯಬೇಕು. ಈಗಾಗಲೇ ನಗರಸಭೆಯಲ್ಲಿ ಬಲ್ಡೋಟ ವಿಸ್ತರಣೆಯನ್ನು ವಿರೋಧಿಸಿ ಠರಾವು ಮಾಡಿದ್ದೇವೆÉ. ಅಧಿಕಾರದ ಕೊನೆಯ ದಿನದವರೆಗೂ ನನ್ನ ಸೇವೆಯನ್ನು ಈ ಕಾರ್ಖಾನೆ ವಿಸ್ತರಣೆ, ಹೊಸ ಸ್ಥಾಪನೆ ವಿರೋಧಿಸಲು ಚಲಾಯಿಸುತ್ತೇನೆ. ಜನರಿಗೆ ನ್ಯಾಯ ಸಿಗುವವರೆಗೆ ಈ ಚಳವಳಿಯ ಭಾಗವಾಗಿರುತ್ತೇನೆ ಎಂದರು.

ಹೋರಾಟ ಸಮಿತಿ ಸಂಚಾಲಕರೂ ಆದ ಮಂಜುನಾಥ ಜಿ. ಗೊಂಡಬಾಳ ಮಾತನಡಿ, ನಗರಸಭೆ ಇನ್ನೊಮ್ಮೆ ಕರ್ಖನೆ ವಿರುದ್ಧ ಠರಾವು ಮಡಿ ಸರಕಾರಕ್ಕೆ ಕಳುಹಿಸಬೇಕು, 31 ಜನ ಸದಸ್ಯರು ಒಂದು ಧರಣಿಗೆ ಬೆಂಬಲ ಕೊಟ್ಟು ಸ್ಪಷ್ಟ ಸಂದೇಶ ಕೊಡಬೇಕು ನಂತರ ಪ್ರತಿ ದಿನ ಒಬ್ಬ ಸದಸ್ಯರು ತಮ್ಮ ವಾರ್ಡಿನ ನಗರಿಕರೊಂದಿಗೆ ಹೋರಾಟದಲ್ಲಿ ಭಾಗವಹಿಸಿಬೇಕು, ಇದು ಜನಪ್ರತಿನಿಧಿಗಳು ತನ್ನ ಮತದಾರರಿಗೆ ಮಾಡುವ ಮೊದಲ ಉಪಕಾರ ಹಾಗೂ ಕರ್ತವ್ಯ, ನಗರಸಭೆ ತನ್ನ ಪಾಲಿನ ಕೆಲಸ ಮಡುವ ಜೊತೆಗೆ ನಗರವನ್ನು ದೂಳು ಮುಕ್ತ, ಸ್ವಚ್ಛ ನಗರವಾಗಿಸುವಲ್ಲಿ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ಧರಣಿಯಲ್ಲಿ ಪ್ರಧಾನ ಸಂಚಾಲಕರು ಅಲ್ಲಮಪ್ರಭು ಬೆಟ್ಟದೂರು, ಮಲ್ಲಿಕಾರ್ಜುನ ಗೋನಾಳ (ಕೆ.ಬಿ.ಗೋನಾಳ), ವಿದ್ಯಾರ್ಥಿ ವಿನಾಯಕ ಕರಡಿ, ದುರಗಪ್ಪ ಕನಕಮನಿಚ್ಚ, ಮಂಜುನಾಥ ಕವಲೂರು, ಕಲಾ ಬಳಗದ ಸಂಜೀವ ಮೂರ್ತಿ ಬೇವಿನಗಿಡ, ಸುಂಕಪ್ಪ ಮೀಸಿ, ಹಾದೇವಪ್ಪ ಎಸ್. ಮಾವಿನಮಡು, ಸುಭಾನ್ ನೀರಲಗಿ, ರವಿ ಕಾಂತನವರ, ಎಸ್.ಬಿ.ರಾಜೂರ, ನಿವೃತ್ತ ಅಧೀಕ್ಷಕರು ಎಫ್.ಎಸ್.ಜಾಲಿಹಾಳ, ಮಂಗಳೇಶ ರಾಠೋಡ, ಹನುಮಂತ ಕಟಗಿ, ಗವಿಸಿದ್ದಪ್ಪ ಹಲಿಗಿ, ಮುದಕಪ್ಪ ಹೊಸಮನಿ ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande