ಭವಿಷ್ಯದ ಸವಾಲು ಎದುರಿಸಲು ರಕ್ಷಣಾ ಸಾಮರ್ಥ್ಯಗಳ ವೃದ್ದಿ : ರಾಜನಾಥ ಸಿಂಗ್
ನವದೆಹಲಿ, 28 ನವೆಂಬರ್ (ಹಿ.ಸ.) : ಆ್ಯಂಕರ್ : ಭವಿಷ್ಯದ ಸವಾಲುಗಳನ್ನು ಎದುರಿಸಲು ಹಳೆಯ ರಚನೆಗಳು ಸಾಕಾಗುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು. ನಗರದ ಮಾಣೆಕ್ಷಾ ಕೇಂದ್ರದಲ್ಲಿ ಶುಕ್ರವಾರ ನಡೆದ ‘ಚಾಣಕ್ಯ ರಕ್ಷಣಾ ಸಂವಾದ’ ಸಮಾರೋಪದಲ್ಲಿ ಮಾತನಾಡಿದ ಅವರು, ಭಾರತ ತಾಂತ್ರಿಕ ಹಾಗೂ ರಕ್
Rajnath singh


ನವದೆಹಲಿ, 28 ನವೆಂಬರ್ (ಹಿ.ಸ.) :

ಆ್ಯಂಕರ್ : ಭವಿಷ್ಯದ ಸವಾಲುಗಳನ್ನು ಎದುರಿಸಲು ಹಳೆಯ ರಚನೆಗಳು ಸಾಕಾಗುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು. ನಗರದ ಮಾಣೆಕ್ಷಾ ಕೇಂದ್ರದಲ್ಲಿ ಶುಕ್ರವಾರ ನಡೆದ ‘ಚಾಣಕ್ಯ ರಕ್ಷಣಾ ಸಂವಾದ’ ಸಮಾರೋಪದಲ್ಲಿ ಮಾತನಾಡಿದ ಅವರು, ಭಾರತ ತಾಂತ್ರಿಕ ಹಾಗೂ ರಕ್ಷಣಾ ಸಾಮರ್ಥ್ಯಗಳನ್ನು ವೇಗವಾಗಿ ವೃದ್ಧಿಸಿಕೊಳ್ಳುತ್ತಿದೆ ಎಂದರು.

ಜಗತ್ತು ವೇಗವಾಗಿ ಬದಲಾಗುತ್ತಿದ್ದು, ಬೆದರಿಕೆಗಳ ಸ್ವರೂಪ ಜಟಿಲವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸುಧಾರಣೆಗಳು ಆಯ್ಕೆಯ ವಿಷಯವಲ್ಲ, ಕಾರ್ಯತಂತ್ರದ ಅವಶ್ಯಕತೆ ಇದೆ ಎಂದು ಹೇಳಿದರು.

ಭಯೋತ್ಪಾದನೆ, ಗಡಿಯಾಚೆಗಿನ ಬೆಂಬಲ, ಮಾಹಿತಿ ಯುದ್ಧ ಮತ್ತು ಕಡಲ ಒತ್ತಡ ಸೇರಿದಂತೆ ಅನೇಕ ಸವಾಲುಗಳ ನಡುವೆ, ಭಾರತ ಶಾಂತಿ–ಸಂವಾದಕ್ಕೆ ಬದ್ಧ, ಆದರೆ “ಸಾರ್ವಭೌಮತ್ವ ಮತ್ತು ಜನರ ಸುರಕ್ಷತೆಯ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ” ಎಂದು ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದರು.

ಭವಿಷ್ಯದ ಯುದ್ಧಭೂಮಿಯನ್ನು ರೂಪಿಸುವ ಸ್ಟಾರ್ಟ್‌ಅಪ್‌ಗಳು, ಆಳವಾದ ತಂತ್ರಜ್ಞಾನ ಮತ್ತು ಸಂಶೋಧನೆ–ಅಭಿವೃದ್ಧಿಗೆ ಹೂಡಿಕೆ ಹೆಚ್ಚಿಸಿರುವುದನ್ನೂ ಅವರು ಉಲ್ಲೇಖಿಸಿ, ಬಲವಾದ, ಸುರಕ್ಷಿತ ಮತ್ತು ಅಭಿವೃದ್ಧಿ ಹೊಂದಿದ ಭಾರತವು ಜಾಗತಿಕ ಶಾಂತಿ ಹಾಗೂ ಮಾನವ ಕಲ್ಯಾಣಕ್ಕೆ ಶಕ್ತಿ ಆಗಲಿದೆ,” ಎಂದು ರಕ್ಷಣಾ ಸಚಿವರು ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande