
ಗದಗ, 28 ನವೆಂಬರ್ (ಹಿ.ಸ.) :
ಆ್ಯಂಕರ್ : ಭಾರತೀಯ ಜನತಾ ಪಾರ್ಟಿ ಗದಗ ವಿಧಾನಸಭಾ ಕ್ಷೇತ್ರದ ಗದಗ ನಗರ, ಗದಗ ಗ್ರಾಮೀಣ ಮಂಡಲದ ವತಿಯಿಂದ ಮೆಕ್ಕೆಜೋಳ, ಈರುಳ್ಳಿ, ಶೆಂಗಾ ಬೆಂಬಲ ಬೆಲೆ ಖರೀದಿ ಕೇಂದ್ರ ಕೂಡಲೆ ಆರಂಭಿಸಬೇಕೆಂದು ಆಗ್ರಹಿಸಿ ಬಿಜೆಪಿಯಿಂದ ಪ್ರತಿಭಟಿಸಲಾಯಿತು.
ಬಿಜೆಪಿ ಗದಗ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ ಮಾತನಾಡಿ ರಾಜ್ಯದಲ್ಲಿ ಈ ವರ್ಷ ಅತಿವೃಷ್ಟಿ ಅನಾವೃಷ್ಟಿ ಕಾರಣದಿಂದಾಗಿ ಮುಂಗಾರು ಮತ್ತು ಹಿಂಗಾರು ಬೆಳೆಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ನಷ್ಟಗೊಂಡಿವೆ. ಸಮೀಕ್ಷೆಯ ನೆಪದಲ್ಲಿ ವಿಳಂಬನೀತಿ ಅನುಸರಿಸಿದ ರಾಜ್ಯ ಸರ್ಕಾರ ಈವರೆಗೂ ಬೆಳೆಹಾನಿಗೆ ಸಮರ್ಪಕ ಪರಿಹಾರ ಒದಗಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡದೆ ಇರುವದು ನಾಡಿನ ಅನ್ನದಾತರಿಗೆ ಮಾಡಿದ ಅವಮಾನ ಮತ್ತು ಅಪರಾಧವಾಗಿದೆ.
ಮುಂಗಾರು ಹಂಗಾಮಿನ ಹೆಸರು ಬೆಳೆಯಂತು ಸಂಪೂರ್ಣ ನಷ್ಟವಾಗಿದ್ದು,ಅಳಿದುಳಿದ ಹೆಸರು ಖರೀದಿಗೂ ರಾಜ್ಯ ಸರ್ಕಾರ ಮುಂದಾಗಲಿಲ್ಲ, ಗುಣಮಟ್ಟದ ನೆಪವಡ್ಡಿ ಬೆಂಬಲ ಬೆಲೆ ಖರೀದಿ ಕೇಂದ್ರಗಳಿಂದ ಸದ್ಯ ಹೆಸರನ್ನು ಖರೀದಿಸುತ್ತಿಲ್ಲ. ಈ ಕಾರಣದಿಂದಾಗಿ ರೈತರು ಮಾರುಕಟ್ಟೆಯಲ್ಲಿ ಅತ್ಯಂತ ಕನಿಷ್ಠ ಬೆಲೆಗೆ ಹೆಸರು ಮಾರಾಟ ಮಾಡುತ್ತಿದ್ದು ಕೃಷಿಗೆ ತೊಡಗಿಸಿದ ಹಣವು ಮರಳಿ ಬಾರದಂತಾಗಿ ರಾಜ್ಯದ ರೈತರು ತುಂಬಾ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದರು.
ಗೋವಿನ ಜೋಳ ಖರೀದಿಗೆ ಕೇಂದ್ರ ಸರ್ಕಾರ ನವೆಂಬರ್ 13ರಂದೇ ಅನುಮತಿ ನೀಡಿದ್ದರು ರಾಜ್ಯ ಸರ್ಕಾರ ನಿರ್ಲಕ್ಷ ಧೋರಣೆ ಅನುಸರಿಸುತ್ತಿದ್ದು ಈವರೆಗೂ ಖರೀದಿ ಕೇಂದ್ರ ಪ್ರಾರಂಭಿಸದಿರುವದು ರೈತರ ನೆರವಿಗೆ ಬಾರದಿರುವುದು ರಾಜ್ಯ ಸರ್ಕಾರದ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ ಎಂದು ರೈತ ಮೋರ್ಚಾ ಜಿಲ್ಲಾಧ್ಯಕ್ಷ ಬಸವರಾಜ ಇಟಗಿ ಹಾಗು ನಗರ ಮಂಡಲ ರೈತ ಮೋರ್ಚಾ ಅಧ್ಯಕ್ಷ ಶಂಕರ ಕರಿಬಿಷ್ಠಿ ಸಂದರ್ಭೊಚಿತವಾಗಿ ಮಾತನಾಡಿದರು.
ಗದಗ ಗ್ರಾಮೀಣ ಮಂಡಲ ಅಧ್ಯಕ್ಷ ಬೂದಪ್ಪ ಹಳ್ಳಿ ಮತ್ತು ಗದಗ ನಗರ ಮಂಡಲ ಅಧ್ಯಕ್ಷ ಸುರೇಶ ಮರಳಪ್ಪನವರ ಮಾತನಾಡಿ ಕೂಡಲೇ ಖರೀದಿ ಕೇಂದ್ರಗಳನ್ನ ಸ್ಥಾಪಿಸಿ ಗೋವಿನ ಜೋಳ ಖರೀದಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಹೆಸರು ಶೇಂಗಾ ಈರುಳ್ಳಿ ಮೆಣಸಿನಕಾಯಿ ತೊಗರಿ ಹತ್ತಿ ಮುಂತಾದ ಬೆಳೆ ಹಾನಿ ಮೊತ್ತವನ್ನು ಈಗ ಘೋಷಿಸದ ಪ್ರಮಾಣಕ್ಕಿಂತ ಇನ್ನಷ್ಟು ಹೆಚ್ಚಿಸಿ ಪರಿಹಾರವನ್ನು ಕೂಡಲೇ ರೈತರ ಖಾತೆಗೆ ಜಮಾ ಮಾಡಬೇಕು ಎಂದು ಮಾತನಾಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಾತನಾಡಿ ಸದ್ಯ ಹಿಂಗಾರು ಹಂಗಾಮಿನಲ್ಲಿ ಕಡಲೆಯು ಹೆಚ್ಚು ಬಿತ್ತನೆಯಾಗಿದ್ದು ಸದರಿ ಬಿತ್ತನೆ ಪ್ರಮಾಣದ ಅಂಕಿ ಅಂಶಗಳನ್ನು ಆಧರಿಸಿ ಕಡಲೆ ಖರೀದಿಗೆ ಈಗಿನಿಂದಲೇ ಪೂರ್ವ ತಯಾರಿಗೆ ಅಗತ್ಯ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ತಿಳಿಸಿದರು. ಮತ್ತು ಅತಿವೃಷ್ಟಿ ಅನಾವೃಷ್ಟಿಯಿಂದ ಅಥವಾ ಬೆಳೆದ ಬೆಳೆಗೆ ಸಮರ್ಪಕ ಬೆಲೆ ಬಾರದಿರುವುದರಿಂದ ರೈತರು ಪ್ರತಿ ವರ್ಷ ಹಾನಿಗೆ ಒಳಗಾಗುತ್ತಲೇ ಇದ್ದಾರೆ ಕಾರಣ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಸಲುವಾಗಿ ರಾಜ್ಯ ಸರ್ಕಾರ ಕನಿಷ್ಠ 30 ಸಾವಿರ ಕೋಟಿ ಅನುದಾನವನ್ನು ಆವರ್ತನಿಧಿಗೆ ಮೀಸಲಿಡಬೇಕು ಎಂದು ಮಾನ್ಯ ಮುಖ್ಯಮಂತ್ರಿಗಳನ್ನ ಆಗ್ರಹಿಸುತ್ತೇವೆ ಎಂದರು.
ಪ್ರತಿಭಟನೆಯ ಸಂದರ್ಭದಲ್ಲಿ ಮುಖಂಡರಾದ ಎಂ.ಎಸ್.ಕರೀಗೌಡ್ರ, ಎಂ.ಎಂ.ಹಿರೇಮಠ, ಜಗನ್ನಾಥಸಾ ಭಾಂಡಗೆ, ವಿಜಯಕುಮಾರ ಗಡ್ಡಿ, ಬಿ.ಎಸ್.ಲದ್ವಾ, ಉಸ್ತುವಾರಿಗಳಾದ ಬಸವರಾಜ ಯಂಕಂಚಿ, ಶಶಿಮೌಳಿ ಕುಲಕರ್ಣಿ, ಎಲ್.ಟಿ.ರಾಜೊಳ್ಳಿ, ಭದ್ರೇಶ ಕುಸ್ಲಾಪೂರ, ರವಿ ದಂಡಿನ, ರಾಮಣ್ಣ ಕಮ್ಮಾರ, ಅಶೋಕ ಸಂಕಣ್ಣವರ, ರಾಘವೇಂದ್ರ ಯಳವತ್ತಿ, ಅನೀಲ ಅಬ್ಬಿಗೇರಿ, ಸುಧೀರ ಕಾಟಿಗರ, ಚಂದ್ರು ತಡಸದ, ಪ್ರಕಾಶ ಅಂಗಡಿ, ನಿರ್ಮಲಾ ಕೊಳ್ಳಿ, ಶಿವು ಹಿರೇಮನಿಪಾಟೀಲ, ಈರ್ಷಾದ ಮಾನ್ವಿ, ಶೇಖಣ್ಣ ಕನ್ಯಾಳ, ಮಾಂತೇಶ ನಲವಡಿ, ಮಹಾದೇವಪ್ಪ ಚಿಂಚಲಿ, ಅಪ್ಪಣ್ಣ ಟೆಂಗಿನಕಾಯಿ, ಶಶಿಧರ ದಿಂಡೂರ, ಲಕ್ಷ್ಮಣ ದೊಡ್ಮನಿ, ಅರವಿಂದ ಕೆಲೂರ, ಸುರೇಶ ಚಿತ್ತರಗಿ, ಶಂಕರ ಕಾಕಿ, ರಮೇಶ ಸಜ್ಜಗಾರ, ಸುಭಾಸ ಸುಂಕದ, ಛಗನ ರಾಜಪುರೋಹಿತ, ಉಡಚಪ್ಪ ಹಳ್ಳಿಕೇರಿ, ಅಶ್ವೀನಿ ಜಗತಾಪ್, ವಿಜಯಲಕ್ಷ್ಮೀ ಮಾನ್ವಿ, ಸ್ವಾತಿ ಅಕ್ಕಿ, ಜಯಶ್ರೀ ಅಣ್ಣಿಗೇರಿ, ಪಾರ್ವತಿ ಪಟ್ಟಣಶೆಟ್ಟಿ, ಸುಮಂಗಲಾ ಕೊನೆವಾಲ್, ಕಮಲಾಕ್ಷಿ ತಕ್ಕಲಕೋಟಿ, ಶಿವಲೀಲಾ ಉಮಚಗಿ, ಲಕ್ಷ್ಮೀ ಕಾಕಿ, ವಾಯ್.ಪಿ.ಅಡ್ನೂರ, ಸಿದ್ದಪ್ಪ ಜೊಂಡಿ, ರಾಚಯ್ಯ ಹೊಸಮಠ, ದೇವಪ್ಪ ಹೂಗಾರ, ರಾಜು ರೊಟ್ಟಿ, ಸುರೇಶ ಹೆಸಬೂರ, ಪಂಚಾಕ್ಷರಿ ಅಂಗಡಿ, ಅವಿನಾಶ ಹೊನಗುಡಿ, ಸಂಜೀವ ಖಟವಟೆ, ಮಹಾದೇವಪ್ಪ ಹಡಪದ, ರಾಜು ಕುಲಕರ್ಣಿ, ಜಗದೀಶ ಚಿಂಚಲಿ, ಶಂಕರ ಮಲ್ಲಸಮುದ್ರ, ಸುರೇಶ ಚವ್ಹಾಣ, ಡಿ.ಬಿ.ಕರೀಗೌಡ್ರ, ಮುತ್ತು ಇಟಗಿಮಠ, ಹನುಮಂತಪ್ಪ ದಿಂಡಣ್ಣವರ, ಮಂಜುನಾಥ ತಳವಾರ, ನಾಗರಾಜ ಮದ್ನೂರ, ಶಿವಾನಂದ ಅಕ್ಕಿ, ಸುರೇಶ ಬಶೆಟ್ಟಿ, ಮಂಜು ವಡ್ಡರ, ಮಾಂತೇಶ ಬಾತಾಖಾನಿ, ಸುರೇಲ ಕುರ್ತಕೋಟಿ, ರಾಚಪ್ಪ ನವಲಿ, ಅರವಿಂದ ಅಣ್ಣಿಗೇರಿ, ಮಾಂತೇಶ ಹಳ್ಳಿ, ಶೇಖಪ್ಪ ಶಿರಹಟ್ಟಿ, ಉಮೇಶ ಹಡಪದ, ಸಂತೋಷ ಕಲ್ಯಾಣಿ, ಸಿದ್ದಪ್ಪ ಈರಗಾರ, ಶರಣು ಚಿಂಚಲಿ, ಮಲ್ಲಪ್ಪ ಕರಿಬಿಷ್ಠಿ, ರುದ್ರಪ್ಪ ಕಲ್ಬಂಡಿ, ಮಹಾದೇವಪ್ಪ ಹೊಂಬಳ, ರಾಮಣ್ಣ ಜಡಿ, ನಾರಾಯಣಿ ಸೊರಟೂರ, ಹನುಮಂತಪ್ಪ ಜಡಿ, ಅಂಬಾಜಿ ಬೈರವಾಡೆ, ಲಕ್ಷ್ಮಣ ಅಂಜೆಖಾನಿ, ಯಮನಪ್ಪ ಬೈರವಾಡೆ, ಅಂಬಾಜಿ ಅಂಜೆಖಾನಿ, ಪ್ರತಾಪ ಹತಾಡೆ, ಬಾಳು ಹಂಸ್ಕರ, ಮಾರುತಿ ಮಿಸಾಳ, ಮಂಜುನಾಥ, ವಿನೋದ ಹಂಸನೂರ ಹಾಗು ಇನ್ನೂ ಹಲವಾರು ಪಕ್ಷದ ಮುಖಂಡರು ಉಪಸ್ಥೀತರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP