ಉದ್ದಿಮೆಗಳ ಕುರಿತು ಅರಿವು ಅಗತ್ಯ : ಸುಧಾಕರ್
ಬಳ್ಳಾರಿ, 28 ನವೆಂಬರ್ (ಹಿ.ಸ.) : ಆ್ಯಂಕರ್ : ಟ್ರೇಡ್ಸ್ ಅಂಡ್ ರಿಸಿವಿಲ್ಸ್ ಕುರಿತು ಪ್ರತಿಯೊಬ್ಬ ಸಣ್ಣ, ಅತಿ ಸಣ್ಣ ಗುಡಿ ಕೈಗಾರಿಕೆ ಉದ್ದಿಮೆದಾರರಿಗೆ ಅರಿವು ಮೂಡಿಸುವುದು ಅವಶ್ಯಕವಾಗಿದೆ ಎಂದು ಸುಧಾಕರ್ ಪೈಪ್ಸ್ ಲಿ. ನ ಮ್ಯಾನೇಜಿಂಗ್ ಡೈರೆಕ್ಟರ್ ಸುಧಾಕರ್ ಅವರು ಹೇಳಿದ್ದಾರೆ. ಕೈಗಾರಿಕೆ ಮತ್ತು
ಉದ್ದಿಮೆಗಳ ಕುರಿತು ಅರಿವು ಅಗತ್ಯ: ಸುಧಾಕರ್


ಉದ್ದಿಮೆಗಳ ಕುರಿತು ಅರಿವು ಅಗತ್ಯ: ಸುಧಾಕರ್


ಬಳ್ಳಾರಿ, 28 ನವೆಂಬರ್ (ಹಿ.ಸ.) :

ಆ್ಯಂಕರ್ : ಟ್ರೇಡ್ಸ್ ಅಂಡ್ ರಿಸಿವಿಲ್ಸ್ ಕುರಿತು ಪ್ರತಿಯೊಬ್ಬ ಸಣ್ಣ, ಅತಿ ಸಣ್ಣ ಗುಡಿ ಕೈಗಾರಿಕೆ ಉದ್ದಿಮೆದಾರರಿಗೆ ಅರಿವು ಮೂಡಿಸುವುದು ಅವಶ್ಯಕವಾಗಿದೆ ಎಂದು ಸುಧಾಕರ್ ಪೈಪ್ಸ್ ಲಿ. ನ ಮ್ಯಾನೇಜಿಂಗ್ ಡೈರೆಕ್ಟರ್ ಸುಧಾಕರ್ ಅವರು ಹೇಳಿದ್ದಾರೆ.

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರದ ವತಿಯಿಂದ ಆರ್‍ಎಎಂಪಿ ಯೋಜನೆಯಡಿ ನಗರದ ಕೌಲ್ ಬಜಾರ್ ನ ಮೊಹಮ್ಮದೀಯ ಕಾಲೇಜು ಬಳಿಯ ಗಾರ್ಮೆಂಟ್ ರಿಸರ್ಚ್ ಟ್ರೈನಿಂಗ್ ಡಿಸೈನ್ ಎಂಡ್ ಡೆವಲಪ್ಮೆಂಟ್ ಸೆಂಟ್ (ಜಿಆರ್‍ಟಿಡಿಎಸ್)ನ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಟ್ರೇಡ್ಸ್ ಹಾಗೂ ಪರಿಸರ ನಿರ್ವಹಣೆ (ಇಎಸ್‍ಎಂ) ಕುರಿತು ಹಮ್ಮಿಕೊಂಡಿರುವ ಯೋಜನೆಯ ಕುರಿತು ಒಂದು ದಿನದ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಫ್ಯಾಕ್ಟರಿಸ್ ಅಂಡ್ ಬಾಯಿಲರ್ಸ್ ನ ಹಿರಿಯ ಸಹಾಯಕ ನಿರ್ದೇಶಕ ಡಿ.ವರುಣ್ ಅವರು ಮಾತನಾಡಿ, ಪರಿಸರ ನಿರ್ವಹಣೆಯ ಕುರಿತು ಪ್ರತಿಯೊಬ್ಬ ಉದ್ದಿಮೆದಾರರಿಗೆ ತಾವು ತಯಾರಿಸುವ ವಸ್ತುಗಳ ಕುರಿತು ಅರಿವು ಹೊಂದುವುದು ಅತ್ಯಾವ್ಯಶಕವಾಗಿದೆ ಎಂದು ಹೇಳಿದರು.

ಜಿಆರ್‍ಟಿಡಿಎಸ್ ಪ್ರಾಂಶುಪಾಲರಾದ ಬಿಂದು ಅವರು ಮಾತನಾಡಿ, ಯುವ ಉದ್ದಿಮೆದಾರರು ಫ್ಯಾಷನ್ ವಸ್ತ್ರಗಳ ಕುರಿತು ಟ್ರೇಡ್ಸ್ ಹಾಗೂ ಇಎಸ್‍ಎಂ ಯೋಜನೆಗಳ ಉಪಯೋಗವನ್ನು ಪಡೆದುಕೊಳ್ಳಲು ಕೋರಿದರು.

ಕಾರ್ಯಾಗಾರದಲ್ಲಿ ಉದ್ದಿಮೆದಾರರು ಭಾಗವಹಿಸಿದ್ದರು, ಟ್ರೇಡ್ಸ್ ಹಾಗೂ ಪರಿಸರ ನಿರ್ವಹಣೆ (ಇಎಸ್‍ಎಂ) ಸೌಲಭ್ಯಗಳು, ಯಶಸ್ಸಿನ ಕಥೆಗಳ ಬಗ್ಗೆ ಅರಿವು ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ.ಸೋಮೇಶೇಖರ್, ಟ್ರೇಡ್ಸ್ ಸಂಪನ್ಮೂಲ ವ್ಯಕ್ತಿಗಳಾಗಿ ಬಾಲಚಂದ್ರ, ಮಂಜುನಾಥ ಬೊಳ್ಳೊಳ್ಳಿ, ಜಿಆರ್‍ಟಿಡಿಸಿಯ ಪಂಪನಗೌಡ ಸೇರಿದಂತೆ ಉದ್ದಿಮೆದಾರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande