ಸ್ಕೈರೂಟ್ ‘ಇನ್ಫಿನಿಟಿ ಕ್ಯಾಂಪಸ್’ ಉದ್ಘಾಟನೆ ಇಂದು
ನವದೆಹಲಿ, 27 ನವೆಂಬರ್ (ಹಿ.ಸ.) : ಆ್ಯಂಕರ್ : ಖಾಸಗಿ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆಯಾಗಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ 11 ಗಂಟೆಗೆ ಭಾರತೀಯ ಸ್ಟಾರ್ಟ್‌ಅಪ್ ಸ್ಕೈರೂಟ್ ಏರೋಸ್ಪೇಸ್‌ನ ‘ಇನ್ಫಿನಿಟಿ ಕ್ಯಾಂಪಸ್’ ಅನ್ನು ವೀಡಿಯೊ ಕಾನ್ಫರೆನ್ಸಿಂಗ್ ಮ
Inauguration


ನವದೆಹಲಿ, 27 ನವೆಂಬರ್ (ಹಿ.ಸ.) :

ಆ್ಯಂಕರ್ : ಖಾಸಗಿ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆಯಾಗಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ 11 ಗಂಟೆಗೆ ಭಾರತೀಯ ಸ್ಟಾರ್ಟ್‌ಅಪ್ ಸ್ಕೈರೂಟ್ ಏರೋಸ್ಪೇಸ್‌ನ ‘ಇನ್ಫಿನಿಟಿ ಕ್ಯಾಂಪಸ್’ ಅನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕಂಪನಿಯ ಮೊದಲ ಕಕ್ಷಾ ಉಡಾವಣಾ ವಾಹನ ‘ವಿಕ್ರಮ್-I’ ನ್ನೂ ಅನಾವರಣಗೊಳಿಸಲಿದ್ದಾರೆ.

ಸ್ಕೈರೂಟ್ ನಿರ್ಮಿಸಿರುವ ಈ ಅತ್ಯಾಧುನಿಕ ಕೇಂದ್ರವು ಸುಮಾರು 2 ಲಕ್ಷ ಚದರ ಅಡಿ ಕಾರ್ಯಕ್ಷೇತ್ರ ಹೊಂದಿದ್ದು, ಹಲವು ಉಡಾವಣಾ ವಾಹನಗಳ ವಿನ್ಯಾಸ, ಅಭಿವೃದ್ಧಿ, ಏಕೀಕರಣ ಮತ್ತು ಪರೀಕ್ಷೆ ನಡೆಸಲು ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒಳಗೊಂಡಿದೆ. ತಿಂಗಳಿಗೆ ಒಂದು ಪೂರ್ಣ ಪ್ರಮಾಣದ ಕಕ್ಷಾ ರಾಕೆಟ್ ನಿರ್ಮಿಸಲು ಸಾಮರ್ಥ್ಯ ಹೊಂದಿರುವುದು ಕೇಂದ್ರದ ಪ್ರಮುಖ ವೈಶಿಷ್ಟ್ಯ.

ವಿಕ್ರಮ್-I ರಾಕೆಟ್ ಉಪಗ್ರಹಗಳನ್ನು ನೇರವಾಗಿ ಕಕ್ಷೆಗೆ ಉಡಾಯಿಸುವ ಸಾಮರ್ಥ್ಯ ಹೊಂದಿದೆ. ಸ್ಕೈರೂಟ್ ಸಂಸ್ಥಾಪಕರಾದ ಪವನ್ ಚಂದನಾ ಮತ್ತು ಭರತ್ ಢಾಕಾ, ಇಬ್ಬರೂ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಹಾಗೂ ಮಾಜಿ ಇಸ್ರೋ ವಿಜ್ಞಾನಿಗಳು. ಸ್ಕೈರೂಟ್ ತನ್ನ ಸಬ್-ಆರ್ಬಿಟಲ್ ರಾಕೆಟ್ ವಿಕ್ರಮ್-ಎಸ್ ಅನ್ನು 2022ರ ನವೆಂಬರ್‌ನಲ್ಲಿ ಯಶಸ್ವಿಯಾಗಿ ಉಡಾಯಿಸಿ, ಬಾಹ್ಯಾಕಾಶಕ್ಕೆ ರಾಕೆಟ್ ಕಳುಹಿಸಿದ ಮೊದಲ ಭಾರತೀಯ ಖಾಸಗಿ ಸಂಸ್ಥೆ ಎಂಬ ಸಾಧನೆ ಮಾಡಿತ್ತು.

ಖಾಸಗಿ ಬಾಹ್ಯಾಕಾಶ ಕ್ಷೇತ್ರದ ತ್ವರಿತ ಬೆಳವಣಿಗೆಯನ್ನು ಕಳೆದ ಕೆಲವು ವರ್ಷಗಳಿಂದ ಕೇಂದ್ರ ಸರ್ಕಾರ ಕೈಗೊಂಡ ಸುಧಾರಿತ ಬಾಹ್ಯಾಕಾಶ ನೀತಿ ಉತ್ತೇಜಿಸಿದೆ ಎಂದು ವಲಯದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಖಾಸಗಿ ವಲಯದ ಚುರುಕಿನಿಂದ ಭಾರತವು ಜಾಗತಿಕ ಬಾಹ್ಯಾಕಾಶ ಮಾರುಕಟ್ಟೆಯಲ್ಲಿ ತನ್ನ ನಾಯಕತ್ವವನ್ನು ಮತ್ತಷ್ಟು ಬಲಪಡಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande