
ಬೆಂಗಳೂರು, 27 ನವೆಂಬರ್ (ಹಿ.ಸ.) :
ಆ್ಯಂಕರ್ : ರಾಜ್ಯದಲ್ಲಿ ಐಟಿ–ಬಿಟಿ ಕ್ಷೇತ್ರದ ಬೆಳವಣಿಗೆ ಕುಂಠಿತವಾಗುತ್ತಿರುವಾಗ, ಮತ್ತೊಂದೆಡೆ ಕಾರಾಗೃಹಗಳು ಕಳ್ಳಬಟ್ಟಿ ತಯಾರಿಕಾ ಕೇಂದ್ರಗಳಾಗಿ ರೂಪಾಂತರಗೊಂಡಿವೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ಆರೋಪಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಸರಕಾರದ ವಿರುದ್ದ ವಾಗ್ದಾಳಿ ನಡೆಸಿರುವ ಅವರು, ರಾಜ್ಯ ಸರ್ಕಾರ ಕುರ್ಚಿ ರಾಜಕೀಯದಲ್ಲಿ ಮುಳುಗಿರುವುದರಿಂದ ಆಡಳಿತ ಸಂಪೂರ್ಣವಾಗಿ ವೈಫಲ್ಯಗೊಂಡಿದೆ. ಇದರ ಪರಿಣಾಮವಾಗಿ ಜೈಲುಗಳ ಒಳಗೆ ಸಂಘಟಿತ ಅಪರಾಧಗಳು ಬೆಳೆದು ಬಂದಿವೆ ಎಂದು ಅವರು ಆರೋಪಿಸಿದ್ದಾರೆ.
ಕಾರಾಗೃಹಗಳಲ್ಲಿ ನಡೆಯುತ್ತಿರುವ ಕಳ್ಳಬಟ್ಟಿ ತಯಾರಿಕಾ ಜಾಲ ತಮಗೆ ತಿಳಿದಿದೆಯೇ? ಅಥವಾ ಎಂದಿನಂತೆ ‘ಗೊತ್ತಿಲ್ಲ’ ಎಂದು ಪಾರಾಗುತ್ತೀರಾ ಎಂದು ಗೃಹ ಸಚಿವೆ ಡಾ. ಜಿ. ಪರಮೇಶ್ವರ ಅವರನ್ನು ಪ್ರಶ್ನಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa