ಸಶಸ್ತ್ರ ಪಡೆಗಳ ವೃತ್ತಿಪರತೆ ಶ್ಲಾಘಿಸಿದ ರಾಷ್ಟ್ರಪತಿ ಮುರ್ಮು
ನವದೆಹಲಿ, 27 ನವೆಂಬರ್ (ಹಿ.ಸ.) : ಆ್ಯಂಕರ್ : ಮಾಣೆಕ್ಷಾ ಕೇಂದ್ರದಲ್ಲಿ ಗುರುವಾರ ನಡೆದ ‘ಚಾಣಕ್ಯ ರಕ್ಷಣಾ ಸಂವಾದ’ದ ಉದ್ಘಾಟನಾ ಅಧಿವೇಶನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮಾತನಾಡಿ, ಭಾರತದ ಸಾರ್ವಭೌಮತ್ವ ರಕ್ಷಣೆಯಲ್ಲಿ ಭಾರತೀಯ ಸಶಸ್ತ್ರ ಪಡೆಗಳು ತೋರಿಸಿರುವ ಅನನ್ಯ ವೃತ್ತಿಪರತೆ ಮತ್ತು ಅಚಲ ದೇಶಭ
President


ನವದೆಹಲಿ, 27 ನವೆಂಬರ್ (ಹಿ.ಸ.) :

ಆ್ಯಂಕರ್ : ಮಾಣೆಕ್ಷಾ ಕೇಂದ್ರದಲ್ಲಿ ಗುರುವಾರ ನಡೆದ ‘ಚಾಣಕ್ಯ ರಕ್ಷಣಾ ಸಂವಾದ’ದ ಉದ್ಘಾಟನಾ ಅಧಿವೇಶನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮಾತನಾಡಿ, ಭಾರತದ ಸಾರ್ವಭೌಮತ್ವ ರಕ್ಷಣೆಯಲ್ಲಿ ಭಾರತೀಯ ಸಶಸ್ತ್ರ ಪಡೆಗಳು ತೋರಿಸಿರುವ ಅನನ್ಯ ವೃತ್ತಿಪರತೆ ಮತ್ತು ಅಚಲ ದೇಶಭಕ್ತಿಯನ್ನು ಶ್ಲಾಘಿಸಿದರು. ಇತ್ತೀಚಿನ ಆಪರೇಷನ್ ಸಿಂಧೂರ್ ಯಶಸ್ಸು ದೇಶದ ಭಯೋತ್ಪಾದನೆ ನಿಯಂತ್ರಣ ಕಾರ್ಯಯೋಜನೆಗೆ ಮಹತ್ವದ ಬಲ ನೀಡಿದೆ ಎಂದರು.

ಸಾಂಪ್ರದಾಯಿಕ ಯುದ್ಧ, ದಂಗೆ ನಿಗ್ರಹ ಮತ್ತು ಮಾನವೀಯ ಬಿಕ್ಕಟ್ಟುಗಳ ಸಂದರ್ಭದಲ್ಲಿ ಸೇನೆ ತೋರಿದ ಪ್ರತಿಕ್ರಿಯೆಯನ್ನು ಮೆಚ್ಚಿ, ಪರಿವರ್ತನೆಯ ದಶಕದಡಿ ಭಾರತೀಯ ಸೇನೆ ಕೈಗೊಂಡಿರುವ ಸುಧಾರಣಾ ಪ್ರಯತ್ನಗಳನ್ನು ವಿಶೇಷವಾಗಿ ಉಲ್ಲೇಖಿಸಿದರು. ವಿಶ್ವ ವೇದಿಕೆಯಲ್ಲಿ ಶಾಂತಿಯನ್ನು ಬಯಸುವ ಸಶಕ್ತ ರಾಷ್ಟ್ರವಾಗಿ ಭಾರತ ತನ್ನ ನೈತಿಕ ಸಮಗ್ರತೆ ಮತ್ತು ಸೈನಿಕ ಸಾಮರ್ಥ್ಯವನ್ನು ಸಮತೋಲನದೊಂದಿಗೆ ಪ್ರದರ್ಶಿಸಿದೆ ಎಂದು ಅವರು ಹೇಳಿದರು.

ಇದೇ ವೇಳೆ ಮಾತಾನಾಡಿದ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಜಗತ್ತು ಅನಿಶ್ಚಿತ ಮತ್ತು ಮುರಿದ ಕ್ರಮದತ್ತ ಸಾಗುತ್ತಿರುವುದರಿಂದ ದೀರ್ಘಕಾಲಿನ ಶಾಂತಿ ಕುಗ್ಗುತ್ತಿದೆ ಎಂದು ಎಚ್ಚರಿಕೆ ನೀಡಿದರು. ಸೈಬರ್, ಬಾಹ್ಯಾಕಾಶ, ಮಾಹಿತಿ ಹಾಗೂ ಅರಿವಿನ ಯುದ್ಧ ಹೊಸ ಕ್ಷೇತ್ರಗಳಾಗಿ ರೂಪುಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಯುದ್ಧ ಮತ್ತು ಶಾಂತಿಯ ಗಡಿ ಮಸುಕಾಗುತ್ತಿದೆ ಎಂದು ಹೇಳಿದರು.

2032, 2037 ಮತ್ತು 2047 ರವರೆಗೆ ಮೂರೂ ಹಂತಗಳಲ್ಲಿ ಜಾರಿಯಾಗಲಿರುವ ದೀರ್ಘಾವಧಿ ಪರಿವರ್ತನಾ ಯೋಜನೆಯನ್ನು ಸಂಪೂರ್ಣವಾಗಿ ವಿವರಿಸಿ ಬದಲಾಗುತ್ತಿರುವ ಜಾಗತಿಕ ಶಕ್ತಿ ಸಮೀಕರಣಗಳ ನಡುವೆ, ನಿರ್ಣಾಯಕ ಮತ್ತು ಸಿದ್ಧರಾಗಿ ಉಳಿಯುವಂಥ ಸೇನಾ ವಿನ್ಯಾಸವೇ ಕಾಲಬದ್ಧ ಅವಶ್ಯಕತೆ ಎಂದು ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande