ನ.29 ರಂದು ಬಳ್ಳಾರಿ ಗ್ರಾಮೀಣ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ
ಬಳ್ಳಾರಿ, 27 ನವೆಂಬರ್ (ಹಿ.ಸ.) : ಆ್ಯಂಕರ್ : ಬಳ್ಳಾರಿ ಗ್ರಾಮೀಣ ಜೆಸ್ಕಾಂ ಕಾರ್ಯ ಮತ್ತು ಪಾಲನಾ ಉಪ ವಿಭಾಗ ವ್ಯಾಪ್ತಿಯ ಎನ್‍ಹೆಚ್-63 ರಾಷ್ಟೀಯ ಹೆದ್ದಾರಿ ರಸ್ತೆ ಅಗಲೀಕರಣ ಕಾಮಗಾರಿ ಕಾರ್ಯ ಕೈಗೊಳ್ಳುತ್ತಿರುವುದರಿಂದ ನ.29 ರಂದು ಬೆÉಳಗ್ಗೆ 09 ಗಂಟೆಯಿಂದ ಸಂಜೆ 05 ಗಂಟೆಯವರೆಗೆ 110/11 ಕೆ.ವಿ ಶ್ರೀ
ನ.29 ರಂದು ಬಳ್ಳಾರಿ ಗ್ರಾಮೀಣ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ


ಬಳ್ಳಾರಿ, 27 ನವೆಂಬರ್ (ಹಿ.ಸ.) :

ಆ್ಯಂಕರ್ : ಬಳ್ಳಾರಿ ಗ್ರಾಮೀಣ ಜೆಸ್ಕಾಂ ಕಾರ್ಯ ಮತ್ತು ಪಾಲನಾ ಉಪ ವಿಭಾಗ ವ್ಯಾಪ್ತಿಯ ಎನ್‍ಹೆಚ್-63 ರಾಷ್ಟೀಯ ಹೆದ್ದಾರಿ ರಸ್ತೆ ಅಗಲೀಕರಣ ಕಾಮಗಾರಿ ಕಾರ್ಯ ಕೈಗೊಳ್ಳುತ್ತಿರುವುದರಿಂದ ನ.29 ರಂದು ಬೆÉಳಗ್ಗೆ 09 ಗಂಟೆಯಿಂದ ಸಂಜೆ 05 ಗಂಟೆಯವರೆಗೆ 110/11 ಕೆ.ವಿ ಶ್ರೀಧರಗಡ್ಡೆ ವಿದ್ಯುತ್ ಉಪ-ಕೇಂದ್ರ್ರದ ಎಫ್-10 ಸಿಟಿ ಮಾರ್ಗದ ವಕ್ರಾಣಿ ಕ್ಯಾಂಪ್ ಮತ್ತು ಎಫ್-10 ಶ್ರೀಧರಗಡ್ಡೆ ಎನ್‍ಜೆವೈ ಫೀಡರ್ ಮಾರ್ಗದ ಸೋಮಸಮುದ್ರ, ಲಕ್ಷ್ಮಿನಗರ ಕ್ಯಾಂಪ್, ವೀರಾಂಜಿನೇಯ್ಯ ಕ್ಯಾಂಪ್, ಕೋಳೂರು, ಮಧುರೆ, ಭಾಗ್ಯನಗರ ಕ್ಯಾಂಪ್, ಮಲ್ಲಾರೆಡ್ಡಿ ಕ್ಯಾಂಪ್ ಗ್ರಾಮ, ಕೋಳೂರು ಕ್ರಾಸ್, ದಮ್ಮೂರು, ಡಿ.ಕಗ್ಗಲ್ ವಿ.ಟಿ.ಕ್ಯಾಂಪ್, ವಕ್ರಾಣಿ ಕ್ಯಾಂಪ್ ಸೇರಿದಂತೆ ಮುಂತಾದ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ವಿದ್ಯುತ್ ಗ್ರಾಹಕರು ಮತ್ತು ಸಾರ್ವಜನಿಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಮೋಹನಬಾಬು ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande