ರಾಷ್ಟ್ರೀಯ ಹಾಲು ದಿನ : ಗೋಪಾಲ್ ರತ್ನ ಪ್ರಶಸ್ತಿ ವಿತರಣೆ
ನವದೆಹಲಿ, 27 ನವೆಂಬರ್ (ಹಿ.ಸ.): ಆ್ಯಂಕರ್ : ರಾಷ್ಟ್ರೀಯ ಹಾಲು ದಿನದ ಅಂಗವಾಗಿ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ ಮೂರು ವಿಭಾಗಗಳಲ್ಲಿ ಗೋಪಾಲ್ ರತ್ನ ಪ್ರಶಸ್ತಿಗಳನ್ನು ವಿತರಿಸಿತು. ಈ ಸಂದರ್ಭದಲ್ಲಿ 20 ಆಧುನಿಕ ಇನ್ಸುಲೇಟೆಡ್ ಹಾಲಿನ ಟ್ಯಾಂಕರ್‌ಗಳಿಗೆ ಹ
Milk day


ನವದೆಹಲಿ, 27 ನವೆಂಬರ್ (ಹಿ.ಸ.):

ಆ್ಯಂಕರ್ : ರಾಷ್ಟ್ರೀಯ ಹಾಲು ದಿನದ ಅಂಗವಾಗಿ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ ಮೂರು ವಿಭಾಗಗಳಲ್ಲಿ ಗೋಪಾಲ್ ರತ್ನ ಪ್ರಶಸ್ತಿಗಳನ್ನು ವಿತರಿಸಿತು.

ಈ ಸಂದರ್ಭದಲ್ಲಿ 20 ಆಧುನಿಕ ಇನ್ಸುಲೇಟೆಡ್ ಹಾಲಿನ ಟ್ಯಾಂಕರ್‌ಗಳಿಗೆ ಹಸಿರು ನಿಶಾನೆ ತೋರಿಸಲಾಯಿತು ಮತ್ತು ದೇಶದ ವಿವಿಧ ರಾಜ್ಯಗಳಲ್ಲಿ 9 ತಳಿ ವರ್ಧನೆ ಸಾಕಣೆ ಕೇಂದ್ರಗಳನ್ನು ಉದ್ಘಾಟಿಸಲಾಯಿತು.

ಕಾರ್ಯಕ್ರಮದಲ್ಲಿ ಸಚಿವ ಎಸ್.ಪಿ. ಸಿಂಗ್ ಬಘೇಲ್, ಜಾರ್ಜ್ ಕುರಿಯನ್, ಕಾರ್ಯದರ್ಶಿ ನರೇಶ್ ಪಾಲ್ ಗಂಗ್ವಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಮತ್ತು ರೈತರು ಭಾಗವಹಿಸಿದರು. ದೇಶದಲ್ಲಿ ತಲಾ ಹಾಲಿನ ಲಭ್ಯತೆ ದಿನಕ್ಕೆ 485 ಗ್ರಾಂ ಆಗಿದ್ದು ಜಾಗತಿಕ ಸರಾಸರಿ 329 ಗ್ರಾಂಗಿಂತ ಮೇಲು ಎಂದು ಸಚಿವಾಲಯ ತಿಳಿಸಿದೆ.

ಇದೇ ವೇಳೆ ಪಶುವೈದ್ಯಕೀಯ ಸೇವಾ ವಿತರಣೆಗೆ ಸಂಬಂಧಿಸಿದ ಹೊಸ ನಾಲ್ಕು ಹಂತದ ಮಾರ್ಗಸೂಚಿಗಳು ಮತ್ತು 2025 ರ ಮೂಲ ಪಶುಸಂಗೋಪನಾ ಅಂಕಿಅಂಶಗಳು ಬಿಡುಗಡೆಗೊಂಡವು. ಡೈರಿ ಕ್ಷೇತ್ರದ ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ಕೃತಕ ಗರ್ಭಧಾರಣೆ, ಭ್ರೂಣ ವರ್ಗಾವಣೆ ಸೇರಿದಂತೆ ಸುಧಾರಿತ ತಂತ್ರಜ್ಞಾನಗಳ ಮಹತ್ವವನ್ನು ವೈದ್ಯಾಧಿಕಾರಿಗಳು ಒತ್ತಿ ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande