ಬಾಗಲಕೋಟೆ ಸ್ಪಂದನೆ ಕೇಂದ್ರಕ್ಕೆ ಸಚಿವ ತಿಮ್ಮಾಪೂರ ಚಾಲನೆ
ವಿಜಯಪುರ, 27 ನವೆಂಬರ್ (ಹಿ.ಸ.) : ಆ್ಯಂಕರ್ : ಸರಕಾರಿ ಕಚೇರಿಗಳಿಗೆ ಸಾರ್ವಜನಿಕರು ಅಲೆದಾಡುವದನ್ನು ತಪ್ಪಿಸುವ ನಿಟ್ಟಿನಲ್ಲಿ ತಂತ್ರಜ್ಞಾನ ಬಳಸಿಕೊಂಡು ಜಿಲ್ಲಾಡಳಿತ ಬಾಗಲಕೋಟೆ ಸ್ಪಂದನೆ ಎಂಬ ಹೆಸರಿನಲ್ಲಿ ವಿನೂತನ ಪ್ರಯೋಗ ಕೈಗೊಂಡಿದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂ
ಚಾಲನೆ


ವಿಜಯಪುರ, 27 ನವೆಂಬರ್ (ಹಿ.ಸ.) :

ಆ್ಯಂಕರ್ : ಸರಕಾರಿ ಕಚೇರಿಗಳಿಗೆ ಸಾರ್ವಜನಿಕರು ಅಲೆದಾಡುವದನ್ನು ತಪ್ಪಿಸುವ ನಿಟ್ಟಿನಲ್ಲಿ ತಂತ್ರಜ್ಞಾನ ಬಳಸಿಕೊಂಡು ಜಿಲ್ಲಾಡಳಿತ ಬಾಗಲಕೋಟೆ ಸ್ಪಂದನೆ ಎಂಬ ಹೆಸರಿನಲ್ಲಿ ವಿನೂತನ ಪ್ರಯೋಗ ಕೈಗೊಂಡಿದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.

ಜಿಲ್ಲಾಡಳಿತ ಭವನದಲ್ಲಿ ನೂತನವಾಗಿ ಪ್ರಾರಂಭಿಸಲಾದ ಬಾಗಲಕೋಟೆ ಸ್ಪಂದನೆ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಭಾರತ ಸಂವಿಧಾನವು ಸಾರಿರುವ ನ್ಯಾಯ, ಸಮಾನತೆ ಮತ್ತು ಪಾರದರ್ಶಕತೆಯ ಮೌಲ್ಯಗಳನ್ನು ಆಡಳಿತದಲ್ಲಿ ಜಾರಿಗೊಳಿಸುವ ದೃಷ್ಠಿಯಿಂದ ಸಂವಿಧಾನ ದಿನದ ಶುಭಸಂದರ್ಭದಲ್ಲಿ ಬಾಗಲಕೋಟೆ ಸ್ಪಂದನೆ ಎಂಬ ನಾಗರಿಕ-ಸ್ನೇಹಿ ಡಿಜಿಟಲ್ ವೇದಿಕೆಯನ್ನು ಜಿಲ್ಲಾಡಳಿತವು ಸಾರ್ವಜನಿಕರ ಸೇವೆಗೆ ಪ್ರಾರಂಬಿಸಿದೆ ಎಂದರು.

ಸಾರ್ವಜನಿಕರು ಕಚೇರಿಗೆ ಬಂದು ಅರ್ಜಿ ಸಲ್ಲಿಸುವದನ್ನು ತಡೆಗಟ್ಟುವ ಸಲುವಾಗಿ ತಂತ್ರಜ್ಞಾನ ಬಳಸಿಕೊಂಡು ತ್ವರಿತ ಮತ್ತು ಪರಿಣಾಮಕಾರಿ ಸ್ಪಂದನೆ ನೀಡುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಕೆನರಾ ಬ್ಯಾಂಕ್ ಸಿಎಸ್‌ಆರ್ ಅನುದಾನದಲ್ಲಿವೀ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇದೊಂದು ವಿನೂತನ ಪ್ರಯೋಗವಾಗಿದ್ದು, ಸಾರ್ವಜನಿಕರಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಸಾರ್ವಜನಿಕರು ತಮ್ಮ ಯಾವುದೇ ಅಹವಾಲುಗಳು ಇದ್ದಲ್ಲಿ ತಾವು ಇದ್ದ ಸ್ಥಳದಿಂದಲೇ ಟೋಲ್ ಪ್ರೀ ನಂಬರ ೦೮೩೫೪-೨೫೨೧೦೦, ಸ್ಕಾö್ಯನ್ ಕ್ಯೂಆರ್ ಕೋಡ್ ಹಾಗೂ ವೆಬ್‌ಸೈಟ್ ಮೂಲಕ ಸಲ್ಲಿಸಬಹುದಾಗಿದೆ. ತಾವು ಸಲ್ಲಿಸಿದ ಅಹವಾಲುಗಳು ಸಂಬ0ಧಪಟ್ಟ ಅಧಿಕಾರಿಗಳಿಗೆ ಎಸ್‌ಎಂ.ಎಸ್ ಮೂಲಕ ರವಾನೆಯಾಗಿ ಅಹವಾಲಿಗೆ ಅಧಿಕಾರಿಗಳು ಸ್ಪಂದಿಸಿದ ಮಾಹಿತಿ ಸಹ ಅಹವಾಲುದಾರರ ಮೊಬೈಲ್‌ಗೆ ಮೇಸೆಜ್ ಕೂಡ ಬರುವಂತ ಕೆಲಸ ಮಾಡಲಾಗುತ್ತಿದೆ ಎಂದರು.

ಸಾರ್ವಜನಿಕರೊಂದಿಗೆ ನೇರ ಸಂವಹನ ಸಾಧಿಸಲು ಇದು ನವೀನ ಮಾದರಿಯ ವೇದಿಕೆಯಾಗಿದ್ದು, ಸಾರ್ವಜನಿಕರು ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಆರ್.ಟಿ.ಸಿ, ವಾರ್ಸಾ, ಆರ್.ಟಿ.ಸಿಯಲ್ಲಿ ಬದಲಾವಣೆ, ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ, ಸ್ವಚ್ಛತೆ, ರಸ್ತೆ, ವಿದ್ಯುತ್ ಸಮಸ್ಯೆ, ಆಸ್ಪತ್ರೆಗಳಲ್ಲಿ ವೈದ್ಯರು ಸರಿಯಾಗಿ ಸ್ಪಂದಿಸದೇ ಇರುವುದು, ಅಂಗನವಾಡಿ, ಶಾಲೆ ಹಾಗೂ ವಸತಿ ನಿಲಯ ಸೇರಿದಂತೆ ಇತರೆ ಅವಶ್ಯಕ ಕೆಲಸಗಳಿಗಾಗಿ ಅಹವಾಲಯಗಳನ್ನು ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.

ಬಾಗಲಕೋಟೆ ಸ್ಪಂಧನ ವೇದಿಕೆ ಸಾರ್ವಜನಿಕರ ಸೇವೆಗಳ ಗುಣಮಟ್ಟವನ್ನು ಎತ್ತಿಹಿಡಿಯುವತ್ತ ಮಹತ್ವದ ಹೆಜ್ಜೆಯಾಗಿದ್ದು, ದೂರುಗಳ ನಿಖರ ಅನುಸರಣೆ, ಅಧಿಕಾರಿಗಳ ಜವಾಬ್ದಾರಿತನದ ಹೆಚ್ಚಳ ಮತ್ತು ಸೇವಾ ವಿತರಣೆ ಪ್ರಕ್ರಿಯೆಯ ಸರಳೀಕರಣಕ್ಕೆ ಸಹಾಯವಾಗಿದೆ. ಜನ-ಆಡಳಿತದ ಮದ್ಯೆ ಸುಗಮ, ಬಲವಾದ ಮತ್ತು ವಿಶ್ವಾಸರ್ಹ ಸಂಪರ್ಕ ಸೇತುವೆ ನಿರ್ಮಾಣಗೊಳ್ಳುವುದರೊಂದಿಗೆ ಪಾರದರ್ಶಕ ಆಡಳಿತದ ದಾರಿಯಲ್ಲಿ ಜಿಲ್ಲಾಡಳಿತ ಮತ್ತೊಂದು ಮಾದರಿ ಪ್ರಯೋಗವನ್ನು ಯಶಸ್ವಿಯಾಗಿ ಪ್ರಾರಂಭಿಸಿದೆ ಎಂದರು.

ಸಾರ್ವಜನಿಕರಿಂದ ಬಂದ ಅಹವಾಲುಗಳು ಜಿಲ್ಲಾ ಹಾಗೂ ತಾಲೂಕಾ ಅಧಿಕಾರಿಗಳಿಗೆ ಸಂದೇಶ ಕಳುಹಿಸುವ ಕೆಲಸ ಬಾಗಲಕೋಟೆ ಸ್ಪಂದನ ಕೇಂದ್ರದಿ0ದ ನಡೆಯಲಿದೆ. ಅಹವಾಲಯಗಳಿಗೆ ಸ್ಪಂದನೆ ನೀಡುವ ಕೆಲಸ ಅಧಿಕಾರಿಗಳು ಮಾಡಲಿದ್ದಾರೆ. ಒಟ್ಟಾರೆಯಾಗಿ ಸಾರ್ವಜನಿಕ ಕೆಲಸಗಳಿಗೆ ಸ್ಪಂದಿಸುವ ಕೆಲಸ ಈ ಕೇಂದ್ರದಿ0ದ ನಡೆಯಲಿದೆ. ಸಾರ್ವಜನಿಕರ ಹಿತದೃಷ್ಠಿಯಿಂದ ಬಾಗಲಕೋಟೆ ಜಿಲ್ಲಾಡಳಿತ ಈ ವಿನೂತನ ಕಾರ್ಯಕ್ಕೆ ಮುಂದಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಎಂದರು.

ಕಾರ್ಯಕ್ರಮದಲ್ಲಿ ಬೀಳಗಿ ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ನಿಯಮಿತದ ಅಧ್ಯಕ್ಷ ಜೆ.ಟಿ.ಪಾಟೀಲ, ಬಾದಾಮಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ, ಜಿಲ್ಲಾಧಿಕಾರಿ ಸಂಗಪ್ಪ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಕೆನರಾ ಬ್ಯಾಂಕ್‌ನ ರಿಜನಲ್ ಕಚೇರಿಯ ಎಜಿಎಂ ಸತ್ಯನ್, ಬ್ಯಾಂಕ್‌ನ ಜಿಲ್ಲಾ ವ್ಯವಸ್ಥಾಪಕ ರಾಜಕುಮಾರ ಹೂಗಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande