
ನವದೆಹಲಿ, 27 ನವೆಂಬರ್ (ಹಿ.ಸ.) :
ಆ್ಯಂಕರ್ : ಛತ್ತಿಸಗಢದ ನವ ರಾಯ್‌ಪುರದಲ್ಲಿರುವ ಐಐಎಮ್ ಕ್ಯಾಂಪಸ್‌ನಲ್ಲಿ ನಡೆಯಲಿರುವ ಮೂರು ದಿನಗಳ 60ನೇ ಡಿಜಿಪಿ–ಐಜಿ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ನವೆಂಬರ್ 29-30ರಂದು ನಡೆಯುವ ಸಮ್ಮೇಳನದಲ್ಲಿ ಪ್ರಧಾನಿ ಪೂರ್ಣಾವಧಿ ಹಾಜರಿರಲಿದ್ದಾರೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.
“ಅಭಿವೃದ್ಧಿ ಹೊಂದಿದ ಭಾರತ: ಭದ್ರತಾ ಆಯಾಮಗಳು” ಎಂಬ ವಿಷಯವಿರುವ ಈ ಸಮ್ಮೇಳನವು ಎಡಪಂಥೀಯ ಉಗ್ರವಾದ, ಭಯೋತ್ಪಾದನೆ ನಿಗ್ರಹ, ಮಹಿಳಾ ಸುರಕ್ಷತೆ, ವಿಪತ್ತು ನಿರ್ವಹಣೆ, ಮತ್ತು ಪೊಲೀಸ್ ವ್ಯವಸ್ಥೆಯಲ್ಲಿ ವಿಧಿವಿಜ್ಞಾನ ಹಾಗೂ ಕೃತಕ ಬುದ್ಧಿಮತ್ತೆಯ ಬಳಕೆ ಮುಂತಾದ ಮುಖ್ಯ ಭದ್ರತಾ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ.
ಇದೇ ವೇಳೆ ಪ್ರಧಾನಿ ಮೋದಿ ರಾಷ್ಟ್ರಪತಿ ಪೊಲೀಸ್ ಪದಕವನ್ನು ಸಹ ಪ್ರದಾನ ಮಾಡಲಿದ್ದಾರೆ. ದೇಶದಾದ್ಯಂತದ ಭದ್ರತಾ ಸಿಬ್ಬಂದಿಗೆ ರಾಷ್ಟ್ರೀಯ ಭದ್ರತಾ ಪ್ರಶ್ನೆಗಳ ಕುರಿತು ಮುಕ್ತ ಸಂವಾದದ ವೇದಿಕೆ ಒದಗಿಸುವ ಈ ಸಮ್ಮೇಳನದಲ್ಲಿ ಕೇಂದ್ರ ಗೃಹ ಸಚಿವರು, ಎನ್‌ಎಸ್ಎ, ಗೃಹ ರಾಜ್ಯ ಸಚಿವರು, ರಾಜ್ಯಗಳ ಡಿಜಿಪಿಗಳು ಮತ್ತು ಕೇಂದ್ರ ಪೊಲೀಸ್ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa