ಮಹಾಂತೇಶ್ ಬೀಳಗಿ ಹುಟ್ಟೂರು ರಾಮದುರ್ಗದಲ್ಲಿ ಶೋಕಸಾಗರ
ರಾಮದುರ್ಗ, 26 ನವೆಂಬರ್ (ಹಿ.ಸ.) : ಆ್ಯಂಕರ್ : ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ರಸ್ತೆ ಅಪಘಾತದಲ್ಲಿಮೃತಪಟ್ಟಿರುವುದು ಅವರ ಕುಟುಂಬ, ಬಂಧು–ಬಳಗ ಹಾಗೂ ಅಭಿಮಾನಿಗಳಿಗೆ ಬರಸಿಡಿಲಿನಂತೆ ಬಿದ್ದಿದೆ. ಮಹಾಂತೇಶ ಬೀಳಗಿ ಅವರ ಹುಟ್ಟೂರಾದ ರಾಮದುರ್ಗದಲ್ಲಿ ನೀರವ ಮೌನ ಆವರಿಸಿದ್ದು, ಅಂತಿಮ ದರ್ಶನಕ್ಕೆ
Mahantesh bilagi


ರಾಮದುರ್ಗ, 26 ನವೆಂಬರ್ (ಹಿ.ಸ.) :

ಆ್ಯಂಕರ್ : ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ರಸ್ತೆ ಅಪಘಾತದಲ್ಲಿಮೃತಪಟ್ಟಿರುವುದು ಅವರ ಕುಟುಂಬ, ಬಂಧು–ಬಳಗ ಹಾಗೂ ಅಭಿಮಾನಿಗಳಿಗೆ ಬರಸಿಡಿಲಿನಂತೆ ಬಿದ್ದಿದೆ. ಮಹಾಂತೇಶ ಬೀಳಗಿ ಅವರ ಹುಟ್ಟೂರಾದ ರಾಮದುರ್ಗದಲ್ಲಿ ನೀರವ ಮೌನ ಆವರಿಸಿದ್ದು, ಅಂತಿಮ ದರ್ಶನಕ್ಕೆ ಜನ ಸಾಗರವೇ ಹರಿದು ಬರುತ್ತಿದೆ.

ಮಂಗಳವಾರ ಜೇವರ್ಗಿ ಹೊರವಲಯದ ಗೌನಳ್ಳಿ ಕ್ರಾಸ್ ಬಳಿ ಚಾಲಕ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮಹಾಂತೇಶ ಬೀಳಗಿ ಹಾಗೂ ಅವರ ಸಂಬಂಧಿಗಳು ಶಂಕರ ಬೀಳಗಿ, ಈರಣ್ಣ ಬೀಳಗಿ ದುರ್ಮರಣ ಹೊಂದಿದರು.

ಅವರ ನಿಧನದಿಂದ ರಾಮದುರ್ಗದಲ್ಲಿ ಶೋಕದ ವಾತಾವರಣ ಸೃಷ್ಟಿಯಾಗಿದೆ. ಪಾರ್ಥಿವ ಶರೀರದ ಎದುರು ಸಂಬಂಧಿಕರು, ಸ್ನೇಹಿತರು, ಸಾರ್ವಜನಿಕರು ಕಣ್ಣೀರಿನ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.

ಇಂದು ಸಂಜೆ ರಾಮದುರ್ಗದಲ್ಲಿ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande