
ಗದಗ, 25 ನವೆಂಬರ್ (ಹಿ.ಸ.) :
ಆ್ಯಂಕರ್ : ಗದಗ ನಗರದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್ ಶೆಟ್ಟರ್, ರಾಜ್ಯ ಸರ್ಕಾರದ ಕಾರ್ಯಶೈಲಿ, ಧರ್ಮಸ್ಥಳ ಬುರುಡೆ ಗ್ಯಾಂಗ್ ವಿವಾದ ಹಾಗೂ ಶಾಸಕ ಖರೀದಿ ಆರೋಪದ ಕುರಿತಂತೆ ತೀವ್ರ ವಾಗ್ದಾಳಿ ನಡೆಸಿದರು. ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ‘ಜನ ವಿರೋಧಿ, ರೈತ ವಿರೋಧಿ’ ಧೋರಣೆ ಅಳವಡಿಸಿಕೊಂಡಿದೆ ಎಂದು ಆರೋಪಿಸಿದರು.
ಧರ್ಮಸ್ಥಳ ಬುರುಡೆ ಗ್ಯಾಂಗ್ ಹಿಂದೆ ಸಿಎಂ ಗ್ಯಾಂಗ್ ಕೈವಾಡ ಶೆಟ್ಟರ್ ಆರೋಪ
ಧರ್ಮಸ್ಥಳದಲ್ಲಿ ನಡೆದಿದ್ದ ಬುರುಡೆ ಗ್ಯಾಂಗ್ ಪ್ರಸ್ತಾಪಿಸುತ್ತಾ,
“ಸಿಎಂ ಸಿದ್ದರಾಮಯ್ಯ ಸುತ್ತಲೂ ಇರುವ ವಿಚಾರವಾದಿಗಳೇ ಈ ಗೊಂದಲ ಕ್ರಿಯೇಟ್ ಮಾಡಿದ್ದಾರೆ. ಹಿಂದೂ ಸಂಸ್ಕೃತಿಗೆ ಧಕ್ಕೆ ತರುವಂತಹ ಕೆಲಸ ಮಾಡಿದ್ದಾರೆ. ಧರ್ಮಸ್ಥಳದ ನಂಬಿಕೆ, ವಿಶ್ವಾಸಕ್ಕೆ ಡ್ಯಾಮೇಜ್ ಮಾಡಲಾಗಿದೆ” ಎಂದು ಶೆಟ್ಟರ್ ಆರೋಪಿಸಿದರು.
“ಯಾವುದೇ ಶವ ಸಿಕ್ಕಿಲ್ಲ, ಆದರೂ ಎಸ್ ಐ ಟಿ ರಚನೆ ಮಾಡಿ ನೂರಾರು ಕೋಟಿ ಖರ್ಚು ಮಾಡಿದ್ದಾರೆ. ಈಗ ತನಿಖೆ ನಡೆದಿದೆ, ಆದರೆ ಒಂದು ತಾಸೂ ಆರೋಪಿ ಅರೆಸ್ಟ್ ಆಗಿಲ್ಲ. ಇದರಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ” ಎಂದು ವಾಗ್ದಾಳಿ ನಡೆಸಿದರು.
“ರೈತರಿಗೆ ಖರೀದಿ ಕೇಂದ್ರ ಇಲ್ಲ… ಆದರೆ ಶಾಸಕರ ಖರೀದಿ ಸ್ಟಾರ್ಟ್” ತೀವ್ರ ಟೀಕೆ
“ರೈತರಿಗೆ ಮೆಕ್ಕೆಜೋಳ ಖರೀದಿ ಕೇಂದ್ರ ಓಪನ್ ಮಾಡಿ ಅಂದ್ರೆ ಎಕ್ಸ್‌ಕ್ಯೂಸ್. ಆದರೆ ಬೆಂಗಳೂರಿನಲ್ಲಿ ಈಗಾಗಲೇ ಶಾಸಕರ ಖರೀದಿ ಕೇಂದ್ರ ಸ್ಟಾರ್ಟ್ ಆಗಿದೆ. ಒಬ್ಬೊಬ್ಬ ಶಾಸಕನಿಗೆ 50–60 ಕೋಟಿ ಕೊಟ್ಟಿದಾರಂತೆ” ಎಂದು ಆರೋಪಿಸಿದರು.
“ರೈತರು ಬೆಳೆದ ಬೆಳೆ ಖರೀದಿ ಮಾಡಲು ಸರ್ಕಾರದ ಬಳಿ ಹಣ ಇಲ್ಲ. ಆದರೆ ಶಾಸಕರನ್ನು ಖರೀದಿಸಲು ಮಾತ್ರ ಹಣ ಇದೆ. ಇದು ಯಾವ ಪುರುಷಾರ್ಥಕ್ಕಾಗಿ ಸರ್ಕಾರ?” ಎಂದು ಪ್ರಶ್ನಿಸಿದರು.
ಸರ್ಕಾರ ಬೀಳುವ ಆತಂಕ… ಕಾಂಗ್ರೆಸ್ ‘ಇನ್ ಪೈಟ್’ ಗದ್ದಲ
ಡಿಕೆ ಶಿವಕುಮಾರ್ ಮತ್ತು ಸಿಎಂ ಬದಲಾವಣೆ ರಾಜಕೀಯ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಶೆಟ್ಟರ್, “ಕಾಂಗ್ರೆಸ್ ಒಳಜಗಳದಿಂದ ರಾಜ್ಯಕ್ಕೆ ದೊಡ್ಡ ನಷ್ಟವಾಗಿದೆ. ಇನ್ ಪೈಟ್ ನಿಂದ ಸರ್ಕಾರ ಪತನಕ್ಕೆ ಬರಬಹುದು. ಬಿಜೆಪಿ ಮುಂದಿನ ಚುನಾವಣೆಯಲ್ಲಿ ಬಹುಮತ ಪಡೆದು ಸರ್ಕಾರ ರಚಿಸುತ್ತೇವೆ” ಎಂದು ಹೇಳಿದರು.
ಡಿಕೆ ಶಿವಕುಮಾರ್ ಅಮೀಷಾ ಶಾ ಸಂಪರ್ಕ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, “ಇದು ಊಹಾಪೋಹ ಮಾತ್ರ. ಬಿಜೆಪಿ ಹೈ ಕಮಾಂಡ್ ತಲೆಕೆಸಿಕೊಳ್ಳುವುದಿಲ್ಲ” ಎಂದು ಸ್ಪಷ್ಟಪಡಿಸಿದರು.
ರಾಹುಲ್ ಗಾಂಧಿಗೆ ತೀವ್ರ ವ್ಯಂಗ್ಯ
ರಾಹುಲ್ ಗಾಂಧಿಯನ್ನು ಟಾರ್ಗೆಟ್ ಮಾಡಿದ ಶೆಟ್ಟರ್, “ಇಮ್ಯಾಚೋಡ್ ಲೀಡರ್ ಯಾರಾದರೂ ಇದ್ರೆ ಅದು ರಾಹುಲ್ ಗಾಂಧಿ. ಅವರು ಕಾಂಗ್ರೆಸ್ ಲೀಡರ್ ಆಗಿ ಉಳಿದರೆ ಬಿಜೆಪಿಗೆ ಅದು ಲಾಭ” ಎಂದು ವ್ಯಂಗ್ಯವಾಡಿದರು.
ಎಐಸಿಸಿ ಅಧ್ಯಕ್ಷ ಖರ್ಗೆ ವಿರುದ್ಧವೂ ಟೀಕೆ
ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಮಾತನಾಡಿದ ಅವರು,
“ಖರ್ಗೆ ಅವರಿಗೆ ಸ್ವಾಭಿಮಾನ ಇದ್ರೆ ತಕ್ಷಣ ರಾಜಿನಾಮೆ ಕೊಡಬೇಕು. ಹೈ ಕಮಾಂಡ್ ಕೈಯಲ್ಲಿ ಏನೂ ಇಲ್ಲ ಅಂತಾರೆ. ನೆಹರು ಕುಟುಂಬದ ಕೆಳಗೆ ಕೆಲಸ ಮಾಡುವಂತಹ ಪರಿಸ್ಥಿತಿ ಬಂದಿದೆ. ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಳ್ಳುವ ಹಂತಕ್ಕೆ ಬಂದಿದೆ” ಎಂದು ಹೇಳಿಕೆ ನೀಡಿದರು.
ರೈತ ಮೋರ್ಚಾ 27, 28ರಂದು ರಾಜ್ಯವ್ಯಾಪಿ ಹೋರಾಟ ಮಾಡಲಿದೆ. ರಾಜ್ಯ ಸರ್ಕಾರದ ‘ಜನ ವಿರೋಧಿ, ರೈತ ವಿರೋಧಿ’ ಧೋರಣೆ ವಿರುದ್ಧ ರೈತ ಮೋರ್ಚಾದ ಹೋರಾಟವನ್ನು ಮಾಡಲಾಗುತ್ತದೆ ಇದಕ್ಕೆ ಎಲ್ಲಾ ರೈತರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
“ಬುದ್ಧಿ ಕಲೆಯಿರಿ, ಇಲ್ಲವಾದರೆ ರೈತರು ಮತ್ತು ಜನತೆ ಸರ್ಕಾರಕ್ಕೆ ಪಾಠ ಕಲಿಸುವ ಸಮಯ ಬರುತ್ತದೆ” ಎಂದು ಎಚ್ಚರಿಕೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / lalita MP