ಸರಕು ಸಾಗಣೆಯಲ್ಲಿ ಇತಿಹಾಸ ನಿರ್ಮಿಸಿದ ಭಾರತೀಯ ರೈಲ್ವೆ
ನವದೆಹಲಿ, 22 ನವೆಂಬರ್ (ಹಿ.ಸ.) : ಆ್ಯಂಕರ್ : ಭಾರತೀಯ ರೈಲ್ವೆ 2025-26ನೇ ಹಣಕಾಸು ವರ್ಷದಲ್ಲಿ ಸರಕು ಸಾಗಣೆಯಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದೆ. ನವೆಂಬರ್ 19ರ ತನಕ ರೈಲ್ವೆ 1020 ಮಿಲಿಯನ್ ಟನ್ ಸರಕುಗಳನ್ನು ಸಾಗಿಸಿದ್ದು, ಮೊದಲ ಬಾರಿಗೆ 1 ಬಿಲಿಯನ್ ಟನ್ ಗಡಿ ದಾಟಿದೆ ಎಂದು ರೈಲ್ವೆ ಸಚಿವಾಲಯ ತಿ
ಸರಕು ಸಾಗಣೆಯಲ್ಲಿ ಇತಿಹಾಸ ನಿರ್ಮಿಸಿದ ಭಾರತೀಯ ರೈಲ್ವೆ


ನವದೆಹಲಿ, 22 ನವೆಂಬರ್ (ಹಿ.ಸ.) :

ಆ್ಯಂಕರ್ : ಭಾರತೀಯ ರೈಲ್ವೆ 2025-26ನೇ ಹಣಕಾಸು ವರ್ಷದಲ್ಲಿ ಸರಕು ಸಾಗಣೆಯಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದೆ. ನವೆಂಬರ್ 19ರ ತನಕ ರೈಲ್ವೆ 1020 ಮಿಲಿಯನ್ ಟನ್ ಸರಕುಗಳನ್ನು ಸಾಗಿಸಿದ್ದು, ಮೊದಲ ಬಾರಿಗೆ 1 ಬಿಲಿಯನ್ ಟನ್ ಗಡಿ ದಾಟಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.

ಈ ಸಾಧನೆಗೆ ಕಲ್ಲಿದ್ದಲು (505 MT), ಕಬ್ಬಿಣದ ಅದಿರು (115 MT), ಸಿಮೆಂಟ್ (92 MT), ಕಂಟೇನರ್‌ಗಳು (59 MT) ಸೇರಿದಂತೆ ಹಲವಾರು ವಲಯಗಳು ಪ್ರಮುಖ ಕೊಡುಗೆ ಸಲ್ಲಿಸಿವೆ. ದೈನಂದಿನ ಸರಕು ಸಾಗಣೆ ಈ ವರ್ಷ ಸರಾಸರಿ 4.4 MT ಆಗಿದ್ದು, ಕಳೆದ ವರ್ಷದ 4.2 MT ಗಿಂತ ಹೆಚ್ಚಾಗಿದೆ.

ಏಪ್ರಿಲ್–ಅಕ್ಟೋಬರ್ ನಡುವೆ ರೈಲ್ವೆ 935.1 MT ಸರಕುಗಳನ್ನು ಸಾಗಿಸಿದ್ದು, ಕಳೆದ ವರ್ಷದ 906.9 MT ಗಿಂತ ಗಮನಾರ್ಹ ಏರಿಕೆಯಾಗಿದೆ. ಹೆಚ್ಚಿದ ಸರಕು ಸಾಗಣೆಯಿಂದ ರಸ್ತೆ ದಟ್ಟಣೆ ಕಡಿಮೆಯಾಗುವುದರ ಜೊತೆಗೆ ಪರಿಸರ ಸ್ನೇಹಿ ಲಾಜಿಸ್ಟಿಕ್ಸ್‌ಗೂ ಉತ್ತೇಜನ ದೊರಕುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande